ಹೆಂಡತಿ ಎಂದರೆ ಹೀಗಿರಬೇಕು! (ದ್ರೌಪದಿಯ ಮನದಾಳದ ಮಾತು)
ನೈವ ಮೇ ಪತಯಸ್ಸಂತಿ ನ... ಪುತ್ರಾನ ಚ ಬಾಂಧವಃ| ನ ಭ್ರಾತರೋ ನ ಚ ಪಿತಾ... ನೈವಂ ತ್ವಮ್ ಮಧುಸೂದನ|| ಬದುಕಿನುದ್ದಕ್ಕೂ ಅಪಮಾನಗಳನ್ನು ಎದುರಿಸಿದ, ಜೀವನಪೂರ್ತಿ ಕಣ್ಣೀರಿನಲ್ಲಿ ಕೈ ತೊಳೆದ, ವೀರಾಧಿವೀರರಾದ ಐವರು ಗಂಡಂದಿರು ಇದ್ದರೂ, ಪರಪುರುಷರ ಮುಂದೆ ಅಪಮಾನ ಮಾಡಿಸಿಕೊಂಡ ದ್ರೌಪದಿ, ಕಡೆಗೆ ಹತಾಶಳಾಗಿ ನುಡಿದ ಮಾತಿದು. " ನನಗೆ ಗಂಡಂದಿರೂ ಇಲ್ಲ.. ಪುತ್ರ-ಬಂಧು- ಬಾಂಧವರೂ ಇಲ್ಲ.. ಸೋದರನೂ ಇಲ್ಲ.. ತಂದೆಯೂ ಇಲ್ಲ.. ಕೊನೆಗೆ ನೀನೂ ಇಲ್ಲ ಕೃಷ್ಣ " ಎಂದು ನುಡಿಯುತ್ತಾಳೆ ಆಕೆ. ದ್ರೌಪದಿ ಆಗಿನ ಕಾಲದ ಸ್ತ್ರೀಯರಲ್ಲಿಯೇ ಅತ್ಯಂತ ಸುಂದರಿಯಾದ ಹೆಣ್ಣು. ಕೊಂಚ ಕಪ್ಪು ವರ್ಣದವಳಾದರೂ, ಬಣ್ಣ ಕಾಣದಷ್ಟು ನಯ-ನಾಜೂಕಿನ ಸುಂದರ ಮೈಮಾಟದವಳು. ವನವಾಸದ ಅವಧಿಯಲ್ಲಿ ಅತ್ಯಂತ ಸರಳ ಉಡುಗೆಯಲ್ಲಿದ್ದರೂ ಕಣ್ಸೆಳೆಯುವಂತಿದ್ದಳು. ಅಗ್ನಿ ದೇ ವನ ಪುತ್ರಿಯಾದ ದ್ರೌಪದಿಗೆ ಅವಳ 'ಧೈರ್ಯವೇ' ಮುಖದಲ್ಲಿ ತೇಜಸ್ಸು ಹೆಚ್ಚಲು ಕಾರಣವಾಗಿತ್ತು ಎನ್ನಬಹುದು. ಅನ್ಯಾಯಕ್ಕೆ ಬಗ್ಗದ, ಗಂಡಂದಿರ ಅಧರ್ಮವನ್ನು ಖಂಡಿಸುವ, ಅವರನ್ನು ಧರ್ಮಮಾರ್ಗದಲ್ಲಿ ನಡೆಯಲು ಪ್ರಚೋದಿಸುವ, ಹಾಗೆ ನಡೆದಾಗ ಮೆಚ್ಚುವ ದ್ರೌಪದಿಯ ಧೈರ್ಯವನ್ನು ನಾವೆಲ್ಲರೂ ಮೆಚ್ಚಲೇಬೇಕು. ದ್ರೌಪದಿ ವನವಾಸದ ಅವಧಿಯಲ್ಲಿ ಕಾಡು, ಮೇಡುಗಳಲ್ಲಿ ಅಲೆಯುವಾಗ ಸಿಕ್ಕ ನದಿ-ಜಲಪಾತದಲ್ಲಿ ಸ್ನಾನ ಮಾಡುತ್ತಿದ್ದರೆ, ಒದ್ದೆ ಬಟ್ಟೆಯಲ್ಲಿ ಎದ್ದು ಕಾಣುವ ಆಕೆಯ ಅಂಗಾಂಗ ಸೌಂದರ್ಯಕ್ಕೆ ಮಾರು ಹೋದ ...