Posts

Showing posts with the label mandodari

ಮಂಡೋದರಿ

Image
  ಈ ಶಬ್ದ ಕೇಳಿದರೆ ಯಾವುದೋ ರಾಕ್ಷಸಿಯ ಹೆಸರು ಇರಬೇಕು ಅಂತನಿಸುತ್ತದೆ. ಅಲ್ಲದೇ ಆಕೆ ರಾವಣನ ಹೆಂಡತಿಯೂ ಆಗಿರುವುದರಿಂದ ಹೆಸರು ಕೇಳಿದ ಕೂಡಲೇ ಇವಳ್ಯಾರೋ ರಾಕ್ಷಸಿಯೇ ಅಂತ ನಿರ್ಧಾರಕ್ಕೆ ಬಂದುಬಿಡುತ್ತೇವೆ. ಆದರೆ ಈಕೆ ಗಂಧರ್ವ ಕನ್ಯೆ ಹೇಮೆಯ ಮಗಳು. ಅತ್ಯಂತ ಸುಂದರಿ.  'ಮಂಡೋದರಿ' ಎಂದರೆ ಸುಂದರವಾದ ಉದರವನ್ನು ಹೊಂದಿದವಳು ಅಂತ ಅರ್ಥ.   ಮದುವೆಗೂ ಮೊದಲು ಎಲ್ಲಾ ಹೆಣ್ಣುಮಕ್ಕಳೂ ಮಂಡೋದರಿಯರಾಗಿಯೇ ಇರುತ್ತಾರೆ. ಮದುವೆಯಾದ ನಂತರ ಅದೇನು ಮ್ಯಾಜಿಕ್ಕೋ ಏನೋ ಅವರ ಉದರ ಟೈರ್ ರೀತಿ ಊದಿ ಬಿಡುತ್ತದೆ. ಆಗ ಗಂಡಂದಿರಿಗೆ ತಮ್ಮ ತಮ್ಮ ಹೆಂಡತಿಯರಿಗಿಂತ ಬೇರೆ ಹೆಣ್ಣುಮಕ್ಕಳು ಸುಂದರವಾಗಿ ಕಾಣಲು ತೊಡಗುತ್ತಾರೆ.  ಆದರೆ ಅತ್ಯಂತ ಸುಂದರಿಯನ್ನು ಮದುವೆಯಾದ ರಾವಣನೂ ಸಹ ಬೇರೆ ಸುಂದರಿಯರನ್ನು ಬಯಸಿದನೆಂದರೆ ಹೆಣ್ಣನ್ನು ಬಯಸಲು ಕೇವಲ ಅವಳ ಸೌಂದರ್ಯ ಒಂದೇ ಕಾರಣವಲ್ಲ ಅಂತನಿಸುತ್ತದೆ. ರಾವಣ ಹಲವಾರು ಹೆಣ್ಣುಗಳನ್ನು ಬಯಸಿ, ಅಪಹರಿಸಿರಬಹುದು. ಆದರೆ ಮಂಡೋದರಿ ಮಾತ್ರ ಇಂದಿಗೂ ಪತಿವ್ರತೆಯ ಸಾಲಿನಲ್ಲಿಯೇ ನಿಲ್ಲುತ್ತಾಳೆ. ಅದು ಅವಳ ವಿಧಿಯೋ ಅಥವಾ ಇದಲ್ಲದೇ ಬೇರೆ ಯಾವ ಅವಕಾಶವಿರದೇ ಆಕೆ ಪತಿಯನ್ನು ಪಾಲಿಸಿದಳೋ ಗೊತ್ತಿಲ್ಲ. ಗಂಡ ಏನು ಮಾಡಿದರೂ ಹೆಂಡತಿ ಆತನನ್ನು ಅನುಸರಿಸಬೇಕು. ಆಗವಳಿಗೆ ಪತಿವ್ರತೆಯ ಪಟ್ಟ ಸಿಗುತ್ತದೆ.  ಗಂಡ ಕಾಡಿಗೆ ಬಂದನೆಂದು ತಾನೂ ಕಾಡಿಗೆ ಬಂದ ಸೀತೆಗೆ ಪತಿವ್ರತಾ ಶಿರೋಮಣಿಯೆಂಬ ಹೆಸರು. ಅದೇ ಅತ್ತೆ-ಮಾವನ...