Posts

Showing posts with the label parashurama

ಪರಶುರಾಮ

Image
  ಈಗಿನ ಪೋಷಕರಿಗೆ ತಮ್ಮ ಮಕ್ಕಳ ಮೇಲೆ ಇರುವುದು ಒಂದೇ ದೂರು... ಮಕ್ಕಳು ತಮ್ಮ ಮಾತನ್ನು ಕೇಳುವುದಿಲ್ಲ ಎನ್ನುವುದು, ಓದಿ ಎಂದರೆ ಓದುವುದಿಲ್ಲ, ಮೊಬೈಲ್ ಮುಟ್ಟಬೇಡಿ ಎಂದರೆ ಮೊಬೈಲ್ ಬಿಟ್ಟು ಇರುವುದಿಲ್ಲ, ಒಟ್ಟಿನಲ್ಲಿ ತಮ್ಮ ಮಾತಿಗೆ ಬೆಲೆಯೇ ಇಲ್ಲ ಎನ್ನುವುದು ಪೋಷಕರ ಅಳಲು. ಆದರೆ ಜಮದಗ್ನಿ ಮಹರ್ಷಿಯ ಪುತ್ರನಾದ ಪರಶುರಾಮನು ಎಂತಹಾ ಪಿತೃವಾಕ್ಯ ಪರಿಪಾಲಕನೆಂದರೆ ತಂದೆಯು ತನ್ನ ತಾಯಿಯ ತಲೆ ಕಡಿಯಲು ಹೇಳಿದಾಗಲೂ ಯಾಕೆಂದು ಕೇಳದೇ ಕಡಿದು ಹಾಕುವಷ್ಟು ತಂದೆಯ ಮಾತು ಕೇಳುತ್ತಿದ್ದ. ಕಥೆ ಹೀಗಿದೆ. ಪರಶುರಾಮನ ತಾಯಿಯಾದ ರೇಣುಕಾದೇವಿಯು ಜಲದ ಮೇಲೆ ತನ್ನ ಹಿಡಿತ ಹೊಂದಿದ್ದಳು. ಅಸಾಧಾರಣ ಆಧ್ಯಾತ್ಮ ಸಾಧನೆಯಿಂದ ಒದ್ದೆಯಾದ ಮರಳಿನಿಂದ ಮಡಿಕೆ ತಯಾರಿಸಿ ಅದರಲ್ಲಿ ನೀರು ತುಂಬಿಸಿ ತರುವ ಪ್ರತಿಭೆ ಅವಳಲ್ಲಿತ್ತು. ಒದ್ದೆ ಮರಳಿನ ಮಡಿಕೆಯಿಂದ ಒಂದು ಹನಿ ನೀರೂ ಸಹ ಹೊರಗೆ ಸೋರುತ್ತಿರಲಿಲ್ಲ ಮತ್ತು ಮಡಿಕೆ ಒಡೆಯುತ್ತಲೂ ಇರಲಿಲ್ಲ. ಅವಳ ಮನೋನಿಗ್ರಹ ಅಷ್ಟು ಶಕ್ತಿಶಾಲಿಯಾಗಿತ್ತು. ಪ್ರತಿನಿತ್ಯ ಇದೇ ರೀತಿ ಪತಿಯ ದೇವತಾ ಕಾರ್ಯಕ್ಕೆ ನೀರು ತಂದು ಕೊಡುತ್ತಿದ್ದಳು. ಒಂದು ದಿನ ಆಕೆ ಎಂದಿನಂತೆ ಸಮುದ್ರ ತೀರಕ್ಕೆ ಹೋಗಿ ಒದ್ದೆ ಮರಳಿನಿಂದ ಮಡಿಕೆ ಮಾಡುತ್ತಿರುವಾಗ, ತೀರದಲ್ಲಿ ಜಲಕ್ರೀಡೆಯಾಡುತ್ತಿದ್ದ ಗಂಧರ್ವರು ಕಣ್ಣಿಗೆ ಬೀಳುತ್ತಾರೆ. ಒಂದು ಕ್ಷಣ ಆಕೆಯ ಮನಸ್ಸು ಚಂಚಲವಾಗುತ್ತದೆ. ಅವಳೂ ಮನುಷ್ಯಳಲ್ಲವೇ? ಆದರೆ ಆ ಕ್ಷಣದಿಂದ ಶೀಘ್ರವೇ ಎಚ್ಚೆತ್ತು ತನ್...