Posts

Showing posts with the label ಗಾಂಧಾರಿ

ಗಾಂಧಾರಿ

Image
  ಪ್ರೀತಿ ಕುರುಡು ಅಂತಾರೆ. ತಾಯಿ ಪ್ರೀತಿಯಂತೂ ಮತ್ತಷ್ಟು ಕುರುಡು. ಆಕೆ ತನ್ನ ಮಕ್ಕಳಿಗಾಗಿ ತನ್ನ ಸರ್ವಸ್ವವನ್ನೂ ತ್ಯಾಗ ಮಾಡುತ್ತಾಳೆ. ಆದರೆ ಮಕ್ಕಳಿಗಿಂತಲೂ ಮೊದಲು ಆಕೆಯ ಜೀವನದಲ್ಲಿ ಪ್ರವೇಶಿಸುವುದು ಅವಳ ಪತಿ.  ಅದಕ್ಕಾಗಿಯೇ ಹೆಣ್ಣು ತನ್ನ ಮಕ್ಕಳನ್ನು ಎಷ್ಟು ಪ್ರೀತಿಸಿದರೂ ಅವಳ ಹೃದಯದಲ್ಲಿ ಮೊದಲ ಜಾಗ ಇರುವುದು ಅವಳ ಪತಿಗೆ ಮಾತ್ರ. ಈ ವಿಷಯದಲ್ಲಿ ಗಾಂಧಾರಿ ಎಲ್ಲರಿಗಿಂತಲೂ ವಿಭಿನ್ನವಾಗಿ ನಿಲ್ಲುತ್ತಾಳೆ. ದ್ವಾಪರಯುಗ ಕಳೆದು ಕಲಿಯುಗ ಬಂದರೂ ಆಕೆಯಂಥ ಮತ್ತೊಬ್ಬರು ಇದುವರೆಗೂ ಕಾಣಲು ಸಿಕ್ಕಿಲ್ಲ ಎಂದರೆ ಊಹಿಸಿ... ಅದೆಂಥಹಾ ಪತಿ ಭಕ್ತಿ ಆಕೆಯದ್ದು ಅಂತ. ತನ್ನ ಕುರುಡು ಗಂಡ ನೋಡದ ದೃಶ್ಯಗಳು ತನಗೂ ಬೇಡ ಎಂದು ಜೀವನಪೂರ್ತಿ ಕಣ್ಣಿಗೆ ಪಟ್ಟಿ ಕಟ್ಟಿಕೊಂಡವಳು ಅವಳು. ತನಗೆ ಮಕ್ಕಳು ಹುಟ್ಟಿದಾಗಲೂ ಸಹ ಪಟ್ಟಿ ತೆರೆದು ನೋಡಿದವಳಲ್ಲ. ಚಿಕ್ಕಂದಿನಿಂದಲೂ ಗಾಂಧಾರಿಗೂ ಸಹ ಎಲ್ಲರಂತೆ ಕತ್ತಲೆ ಎಂದರೆ ಭಯವಿತ್ತು. ಆದರೆ ರಾಜಕುಮಾರಿಯಾಗಿ ಅರಮನೆಯಲ್ಲಿ ಬೆಳೆದ ಅವಳಿಗೆ ಹಗಲು ರಾತ್ರಿ ಎನ್ನದೇ ಸದಾ ಬೆಳಕಿನ ಒಡನಾಟವಿತ್ತು. ಕತ್ತಲಾಗುತ್ತಿದ್ದಂತೆಯೇ ಆಕೆಯ ಸಖಿಯರು ನೂರಾರು ದೀಪ ಹಚ್ಚಿ ಅವಳ ಕೋಣೆಯನ್ನು ಬೆಳಗಿಸುತ್ತಿದ್ದರು.  ಮಹಾನ್ ಸೌಂದರ್ಯವತಿಯಾದ ಗಾಂಧಾರಿ ಹಗಲಿನಲ್ಲಿ ಮತ್ತು ರಾತ್ರಿಯ ಬೆಳಕಿನಲ್ಲಿ ಹೊಳೆಯುವ ತನ್ನ ಸೌಂದರ್ಯ ನೋಡುತ್ತಾ ಮೈ ಮರೆಯುತ್ತಿದ್ದಳು. ತಾನೊಬ್ಬ ಸುಂದರ ರಾಜಕುಮಾರನನ್ನು ಮದುವೆಯಾಗಿ, ಅವನ ಮನದರಸಿಯಾ...