Posts

Showing posts with the label ಸೈರಂಧ್ರಿ

ಸೈರಂಧ್ರಿ ಎಂಬ ಅಗ್ನಿಕನ್ಯೆ

  ಅವನು ಅವಳನ್ನು ನೋಡಿಯೂ ಸಹ ಇರಲಿಲ್ಲ. ಸೈರಂದ್ರಿಯನ್ನು ದಿಟ್ಟಿಸಿ ನೋಡುವುದಿರಲಿ, ಕಡೆಗಣ್ಣಿನಿಂದ ನೋಡುವುದಕ್ಕೂ ಅವರು ಅರ್ಹರೆಂದು ಕೀಚಕ ಭಾವಿಸಿರಲಿಲ್ಲ.  ವಿರಾಟನ ಅರಮನೆಯಲ್ಲಿ ಬೇಕಾದಷ್ಟು ಜನ ಸೈರಂದ್ರಿಯರಿದ್ದರು. ಎಲ್ಲರೂ ಇದ್ಧದ್ದು ಒಂದೇ ರೀತಿಯಲ್ಲಿ... ಪೋಷಣೆಯಿಲ್ಲದೇ ಸೊರಗಿದ ದೇಹ, ಕಾಂತಿಯಿಲ್ಲದ ನಿಸ್ತೇಜ ಕಣ್ಣುಗಳು, ಚುರುಕುತನವಿಲ್ಲದ ನಡಿಗೆ... ಪಾಪ.. ಅವರು ತಾನೇ ಹೇಗೆ ಖುಷಿಯಾಗಿರುತ್ತಾರೆ? ಬುದ್ಧಿ ಬಂದಾಗಿನಿಂದಲೂ ಅವರು ಈ ಅರಮನೆಯಲ್ಲಿ ಬಂಧಿಗಳಾಗಿದ್ದಾರೆ. ಮಹಾರಾಣಿ ಸುದೇಷ್ಣೆಯು ವಿರಾಟನನ್ನು ಮದುವೆಯಾಗಿ ಈ ಅರಮನೆಗೆ ಕಾಲಿಟ್ಟಾಗ ಅವಳೊಡನೆ ಬಂದ ಸಖಿಯರ ಪಡೆ ಇದು. ಮಹಾರಾಣಿಯ ಸೇವೆಯೊಂದೇ ಅವರ ಜೀವನದ ಪರಮಗುರಿ. ಆದರೆ ಇಂತಹ ನಡೆದಾಡುವ ಶವಗಳಂತಿರುವ ಸೈರಂದ್ರಿಯರು ತನ್ನಕ್ಕನನ್ನು ಮಾತ್ರ ಪ್ರತಿನಿತ್ಯವೂ ಮದುಮಗಳ ಹಾಗೆ ಅದು ಹೇಗೆ ಸಿಂಗರಿಸುತ್ತಾರೋ ಎಂದು ಸೋಜಿಗಗೊಳ್ಳುತ್ತಿದ್ದ ಕೀಚಕ. ಹಾಗೆಯೇ ಅಕ್ಕನಿಗೆ ಅಲಂಕಾರ ಮಾಡಿದ ಹಾಗೆ ತಾವು ಯಾಕೆ ಮಾಡಿಕೊಳ್ಳುವುದಿಲ್ಲವೋ ಅಂತಲೂ ಅಂದುಕೊಳ್ಳುತ್ತಿದ್ದ. ಅನಾಸಕ್ತಿಯೋ.. ಮತ್ತೊಂದೋ..? ಅಥವಾ ಇವರೆಲ್ಲಾ ಸಿಂಗರಿಸಿಕೊಂಡುಬಿಟ್ಟರೆ ತನಗಿಂತಲೂ ಚಂದ ಕಂಡು ಬಿಡುತ್ತಾರೆ ಅಂತ ಅಕ್ಕನಿಗೂ ಹೊಟ್ಟೆಕಿಚ್ಚೋ ಏನೋ? ಒಟ್ಟಿನಲ್ಲಿ ಸುದೇಷ್ಣೆಯ ಅಂತಃಪುರದಲ್ಲಿ ಇರುವಷ್ಟು ಹೊತ್ತು ಅವನು ತನ್ನ ಮತ್ತು ಅಕ್ಕನ ಉಪಸ್ಥಿತಿ‌ ಬಿಟ್ಟರೆ ಬೇರೆ ಯಾರನ್ನೂ ಪರಿಗಣಿಸುತ್ತಲೂ ಇರಲಿಲ್ಲ. ...