ಸ್ವಯಂವರ ಪದ್ಧತಿ
ಪುರಾಣಗಳಲ್ಲಿ ನಾವು ಸಾಮಾನ್ಯವಾಗಿ ಕಾಣಬಹುದಾದದ್ದು ರಾಜಕುಮಾರಿಯರ ಸ್ವಯಂವರಗಳನ್ನು. ಅಂದರೆ ಆಗಿನ ಕಾಲದಲ್ಲಿ ಹೆಣ್ಣುಮಕ್ಕಳು ತನಗೆ ಬೇಕಾದ ಮತ್ತು ತನಗೊಪ್ಪುವ ಪುರುಷನನ್ನು ವಿವಾಹಕ್ಕಾಗಿ ತಾವೇ ಆರಿಸಿಕೊಳ್ಳಬಹುದಾಗಿತ್ತು. ಈ ಪದ್ಧತಿ ಎಷ್ಟು ಚಂದ ಇತ್ತು ಅನ್ಸುತ್ತೆ ಅಲ್ವಾ? ಆದರೆ ಅದು ಕೇವಲ ರಾಜಕುಮಾರರ ಅಂದ-ಚಂದಗಳನ್ನು ನೋಡಿ ಆರಿಸುವ ಕಾರ್ಯಕ್ರಮ ಆಗಿರಲಿಲ್ಲ... ಬದಲಿಗೆ ಸ್ವಯಂವರಗಳಲ್ಲಿ ಸ್ಫರ್ಧೆಗಳು ಸಹ ಇರುತ್ತಿದ್ದವು. ಏಕೆಂದರೆ ಇಲ್ಲಿ ಆಯ್ಕೆಯಾಗುವವನು ಮುಂದೆ ರಾಜ್ಯವನ್ನು ಆಳಬೇಕಾದ್ದರಿಂದ, ಆತ ಅಂದ-ಚಂದ ಇರುವುದರ ಜೊತೆಗೇ ಬುದ್ಧಿವಂತ ಮತ್ತು ಸಾಹಸಿಯೂ ಆಗಿರಬೇಕಾದದ್ದು ಅವಶ್ಯಕವಾಗಿತ್ತು. ಆ ಸ್ಫರ್ಧೆಯಲ್ಲಿ ಗೆದ್ದವನಿಗೆ ರಾಜಕುಮಾರಿ ವಿಜಯದ ಮಾಲೆ ಹಾಕುತ್ತಿದ್ದಳು. ಅಂತಹದ್ದೇ ಒಂದು ಸ್ವಯಂವರ ದ್ರೌಪದಿಯದ್ದು. ಅವಳು ಹುಟ್ಟಿದ್ದೇ ಅರ್ಜುನನಿಗಾಗಿ. ಈ ಸ್ವಯಂವರವೂ ಸಹ ಅವನಿಗಾಗಿಯೇ. ಏಕೆಂದರೆ ಪಾಂಡವರು ಅರಗಿನ ಮನೆಯಲ್ಲಿ ಸುಟ್ಟು ಹೋಗಿದ್ದಾರೆ ಅಂತಲೇ ಎಲ್ಲರೂ ತಿಳಿದಿದ್ದರು. ಆದರೆ ದ್ರುಪದ ಮಾತ್ರ ಇದನ್ನು ನಂಬಿರಲಿಲ್ಲ. ಅತ್ಯಂತ ಸಾಹಸಿಗಳಾದ ಪಾಂಡವರು ಅರಗಿನ ಮನೆಯಿಂದ ತಪ್ಪಿಸಿಕೊಂಡು ಬದುಕಿದ್ದಾರೆ ಎಂದೇ ಅವನ ನಂಬಿಕೆ. ಆ ಕಾರಣದಿಂದಲೇ ತನ್ನ ಮಗಳ ಸ್ವಯಂವರದ ಜೊತೆಗೆ ಒಂದು ಬಿಲ್ವಿದ್ಯೆಯ ಸ್ಫರ್ಧ...