Posts

ಹೆಂಡತಿ ಎಂದರೆ ಹೀಗಿರಬೇಕು! (ದ್ರೌಪದಿಯ ಮನದಾಳದ ಮಾತು)

Image
ನೈವ ಮೇ ಪತಯಸ್ಸಂತಿ ನ...  ಪುತ್ರಾನ ಚ ಬಾಂಧವಃ| ನ ಭ್ರಾತರೋ ನ ಚ ಪಿತಾ...  ನೈವಂ ತ್ವಮ್ ಮಧುಸೂದನ|| ಬದುಕಿನುದ್ದಕ್ಕೂ ಅಪಮಾನಗಳನ್ನು ಎದುರಿಸಿದ, ಜೀವನಪೂರ್ತಿ ಕಣ್ಣೀರಿನಲ್ಲಿ ಕೈ ತೊಳೆದ, ವೀರಾಧಿವೀರರಾದ ಐವರು ಗಂಡಂದಿರು ಇದ್ದರೂ, ಪರಪುರುಷರ ಮುಂದೆ ಅಪಮಾನ ಮಾಡಿಸಿಕೊಂಡ ದ್ರೌಪದಿ, ಕಡೆಗೆ ಹತಾಶಳಾಗಿ ನುಡಿದ ಮಾತಿದು.  " ನನಗೆ ಗಂಡಂದಿರೂ ಇಲ್ಲ.. ಪುತ್ರ-ಬಂಧು- ಬಾಂಧವರೂ ಇಲ್ಲ.. ಸೋದರನೂ ಇಲ್ಲ.. ತಂದೆಯೂ ಇಲ್ಲ.. ಕೊನೆಗೆ ನೀನೂ ಇಲ್ಲ ಕೃಷ್ಣ " ಎಂದು ನುಡಿಯುತ್ತಾಳೆ ಆಕೆ. ದ್ರೌಪದಿ ಆಗಿನ ಕಾಲದ ಸ್ತ್ರೀಯರಲ್ಲಿಯೇ ಅತ್ಯಂತ ಸುಂದರಿಯಾದ ಹೆಣ್ಣು. ಕೊಂಚ ಕಪ್ಪು ವರ್ಣದವಳಾದರೂ, ಬಣ್ಣ ಕಾಣದಷ್ಟು ನಯ-ನಾಜೂಕಿನ ಸುಂದರ ಮೈಮಾಟದವಳು. ವನವಾಸದ ಅವಧಿಯಲ್ಲಿ ಅತ್ಯಂತ ಸರಳ ಉಡುಗೆಯಲ್ಲಿದ್ದರೂ ಕಣ್ಸೆಳೆಯುವಂತಿದ್ದಳು.  ಅಗ್ನಿ ದೇ ವನ‌ ಪುತ್ರಿಯಾದ ದ್ರೌಪದಿಗೆ ಅವಳ 'ಧೈರ್ಯವೇ' ಮುಖದಲ್ಲಿ ತೇಜಸ್ಸು ಹೆಚ್ಚಲು ಕಾರಣವಾಗಿತ್ತು ಎನ್ನಬಹುದು. ಅನ್ಯಾಯಕ್ಕೆ ಬಗ್ಗದ, ಗಂಡಂದಿರ ಅಧರ್ಮವನ್ನು ಖಂಡಿಸುವ, ಅವರನ್ನು ಧರ್ಮಮಾರ್ಗದಲ್ಲಿ ನಡೆಯಲು ಪ್ರಚೋದಿಸುವ, ಹಾಗೆ ನಡೆದಾಗ ಮೆಚ್ಚುವ ದ್ರೌಪದಿಯ ಧೈರ್ಯವನ್ನು ನಾವೆಲ್ಲರೂ ಮೆಚ್ಚಲೇಬೇಕು. ದ್ರೌಪದಿ ವನವಾಸದ ಅವಧಿಯಲ್ಲಿ ಕಾಡು, ಮೇಡುಗಳಲ್ಲಿ ಅಲೆಯುವಾಗ ಸಿಕ್ಕ ನದಿ-ಜಲಪಾತದಲ್ಲಿ ಸ್ನಾನ ಮಾಡುತ್ತಿದ್ದರೆ, ಒದ್ದೆ ಬಟ್ಟೆಯಲ್ಲಿ ಎದ್ದು ಕಾಣುವ ಆಕೆಯ ಅಂಗಾಂಗ ಸೌಂದರ್ಯಕ್ಕೆ ಮಾರು ಹೋದ ...

ನಹುಷ

Image
ಯಾರೇ ಆಗಲಿ ಅಧಿಕಾರದಲ್ಲಿದ್ದಾಗ ಅದರ ಮಿತಿಯರಿತು ಜವಾಬ್ದಾರಿ ವಹಿಸಿದರೆ ಕ್ಷೇಮ. ಇಲ್ಲದಿದ್ದರೆ ಅದೇ ಅಧಿಕಾರದಿಂದಲೇ ವ್ಯಕ್ತಿಯ ವ್ಯಕ್ತಿತ್ವ ಪಾತಾಳ ತಲಪುತ್ತದೆ.  ಆದರೆ ನಮ್ಮ ಸುತ್ತಮುತ್ತ ನಿಜವಾಗಿ ನಡೆಯುತ್ತಿರುವುದೇನೆಂದರೆ ಅಧಿಕಾರ ಸಿಕ್ಕ ತಕ್ಷಣ ಜನರು ಎಲ್ಲವನ್ನೂ ಮರೆತು ತಮ್ಮ ಶತೃಗಳ ದಮನಕ್ಕೆ ನಿಂತುಬಿಡುತ್ತಾರೆ. ಅಧಿಕಾರ ಎನ್ನುವುದು ಎಂದಿಗೂ ಶಾಶ್ವತವಲ್ಲ. ಇಂದ್ರನಾದರೂ ಚಂದ್ರನಾದರೂ ಒಂದಲ್ಲ ಒಂದು ದಿನ ಅಧಿಕಾರದಿಂದ ಕೆಳಗೆ ಇಳಿಯಲೇಬೇಕು.  ಅದಕ್ಕಾಗಿ ಅಧಿಕಾರ ಸಿಕ್ಕಾಗ ಆದಷ್ಟೂ ಜನಪರ ಕೆಲಸ ಮಾಡಿದರೆ ಅಧಿಕಾರದಿಂದ ಇಳಿದ ಮೇಲೆಯೂ ಅದೇ ಗೌರವ ಉಳಿಸಿಕೊಳ್ಳಲು ಸಾಧ್ಯ. ಇಲ್ಲದಿದ್ದರೆ ನಹುಷನಂತೆ ಶಾಪಗ್ರಸ್ಥರಾಗಿ ಶಾಪವಿಮೋಚನೆಗಾಗಿ ಕಾಯಬೇಕಾಗುತ್ತದೆ.  ತಾನು ಕುಳಿತ ಸ್ಥಾನ ತನ್ನದಲ್ಲದಿದ್ದರೂ ಸಹ ಮನಸ್ಸಿಗೆ ಬಂದಂತೆ ಅಧಿಕಾರ ಚಲಾಯಿಸಿ ಪೇಚಿಗೆ ಸಿಲುಕಿಕೊಂಡ ನಹುಷನ ಕಥೆ ಹೀಗಿದೆ.  ಒಮ್ಮೆ ದೇವೇಂದ್ರನಿಗೆ ಬ್ರಹ್ಮಹದೋಷ ಉಂಟಾಯಿತು.  ಅದರ ನಿವಾರಣೆಗಾಗಿ‌ ದೇವೇಂದ್ರ ಪಾಪ ಪರಿಹಾರಕ್ಕಾಗಿ ಸಂಕಲ್ಪದಲ್ಲಿದ್ದಾಗ, ಸ್ವರ್ಗವನ್ನು ಖಾಲಿ ಬಿಡಲಾಗದೇ ನಹುಷನನ್ನು ಕರೆತಂದು ದೇವೇಂದ್ರನ ಸ್ಥಾನದಲ್ಲಿ ಕುಳ್ಳಿರಿಸಲಾಗುತ್ತದೆ.  ಅಧಿಕಾರ ಎನ್ನುವುದು ಇಂದ್ರನಿಗೇ ಶಾಶ್ವತವಲ್ಲ . ಇನ್ನು ಇಂದ್ರನ ಬದಲು‌ ಕುಳಿತವರಿಗೆ ಶಾಶ್ವತವೇ? ಇಂದಲ್ಲ ನಾಳೆ ದೇವೇಂದ್ರ ವಾಪಸ್ ಬಂದಾಗ ಆ ಸ್ಥಾನವನ್ನು ನಹುಷ ಬಿಟ್ಟು ಕೊಡಲೇಬೇ...

ಪುರೂರವನ‌ ವಿಫಲ ಪ್ರೇಮ

Image
ಪ್ರೀತಿಯೇ ಬೇರೆ. ಪ್ರೇಮವೇ ಬೇರೆ. ಜನರು ಎರಡನ್ನೂ ಒಂದೇ ಎಂದು ತಿಳಿದುಕೊಂಡು ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಾರೆ. ಪ್ರೀತಿ ಹೃದಯದಿಂದ ಹುಟ್ಟುವ ಭಾವನೆಯಾದರೆ, ಪ್ರೇಮ ಕೇವಲ ಸ್ಪರ್ಷ ಮಾತ್ರದಿಂದ ಹುಟ್ಟುತ್ತದೆ. ಪರಸ್ಪರ ಪ್ರೇಮಿಸುವವರ ನಡುವೆ ಪ್ರೀತಿಯೂ ಇದ್ದರೆ ಆ ಸಂಬಂಧ ಕೊನೆವರೆಗೂ ಉಳಿದುಕೊಳ್ಳುತ್ತದೆ. ಇಲ್ಲದಿದ್ದರೆ ಇಬ್ಬರ ವಾಂಛೆಯೂ ತೀರಿದ ಬಳಿಕ ಪ್ರೇಮ ಮಾಯವಾಗುತ್ತದೆ.  ಇದು ತಿಳಿಯದ ಜನರು ಪ್ರೀತಿ ಮತ್ತು ಪ್ರೇಮದ ನಡುವಿನ ವ್ಯತ್ಯಾಸ ಗೊತ್ತಾಗದೇ ಪ್ರೇಮಿಸಿ ನಂತರ ಪರಸ್ಪರರನ್ನು ತೊರೆಯುತ್ತಲೇ ಇದ್ದಾರೆ. ಹಾಗೆಯೇ ಅಪ್ಸರೆಯಾದ ಊರ್ವಶಿ ಮತ್ತು ಪೂರೂರವನ ನಡುವೆ ಇದ್ದದ್ದು ಪ್ರೇಮವೇ ಹೊರತು ಪ್ರೀತಿಯಲ್ಲ.  ಹಾಗಾಗಿ ಬಹು ಬೇಗ ಈ ಸಂಬಂಧ ಅಂತ್ಯ ಕಾಣುತ್ತದೆ.  ಊರ್ವಶಿ ಮೊದಲೇ ಅಪ್ಸರೆ.  ಅಪ್ಸರೆಯರಿಗೆ ವೈವಾಹಿಕ ಬಂಧನವಾಗಲೀ ಅಥವಾ ಇಷ್ಟು ಜನರನ್ನೇ ಹೊಂದಬೇಕು ಎಂಬ ನಿರ್ಬಂಧವಾಗಲೀ ಇಲ್ಲ. ಆದರೆ ಪುರೂರವನಿಗೆ ಒಬ್ಬ ಸುಂದರ ಸ್ತ್ರೀ ಸಿಕ್ಕರೆ ಸಾಕಿತ್ತು. ಆಕೆ ತನ್ನ ಸಂಗಾತಿಯಾಗಲು ಒಪ್ಪಿದರೆ ಆಕೆಯನ್ನು ಜನ್ಮವಿಡೀ ರಾಣಿಯಂತೆ ಮೆರೆಸಲು ಆತ ಸಿದ್ಧನಿದ್ದ.  ಅದರಂತೆ ಆಕೆ ತನ್ನನ್ನು ಒಪ್ಪಿದ್ದೇ ತನ್ನ ಪುಣ್ಯ ಎಂದು ಸಂತಸದಿಂದ ತೇಲಾಡಿದ. ದೇವಲೋಕದ ಹೆಣ್ಣು ಮನುಷ್ಯನಾದ ತನ್ನೊಡನೆ ಜೀವನಪೂರ್ತಿ ಇರಲು ಸಾಧ್ಯವೇ ಅಂತ ಆತ ಯೋಚಿಸಲಿಲ್ಲ ಅಥವಾ ಬೇಕೆಂದೇ ನಿರ್ಲಕ್ಷಿಸಿದ. ನಂತರ ಆ ನಿರ್ಲಕ್ಷ್ಯಕ್ಕೆ ಸರಿಯಾದ ...

ಅಂಬೆ ಎಂಬ ದುರಂತ ನಾಯಕಿ

Image
  ಮಹಾಭಾರತದಲ್ಲಿ ಪ್ರತಿಯೊಂದು ಪಾತ್ರವೂ ತನ್ನದೇ ಆದ ಮಹತ್ವ ಪಡೆದಿದೆ. ಆದರೆ ಕೆಲವು ಪಾತ್ರಗಳು ನೆನಪಿನಲ್ಲಿ ಉಳಿದರೆ ಇನ್ನು ಕೆಲವು ಪಾತ್ರಗಳು ನೇಪಥ್ಯಕ್ಕೆ ಸರಿಯುತ್ತವೆ. ಹೀಗೆ ನಮಗೇ ಗೊತ್ತಿಲ್ಲದೇ ನಾವು ಮರೆಯುವ ಪಾತ್ರವೆಂದರೆ ಅಂಬೆಯದ್ದು. ಇಡೀ ಮಹಾಭಾರತದ ಆಧಾರ ಸ್ತಂಭವಾದ ಭೀಷ್ಮ ಪಿತಾಮಹನ ಸಾವಿಗೆ ಕಾರಣಳಾದವಳನ್ನು ನಾವು ಪ್ರಾರಂಭದಲ್ಲಿಯೇ ಮರೆತುಬಿಡುತ್ತೇವೆ. ನಂತರ ಆಕೆ ನೆನಪಾಗುವುದು ಕೊನೆಯಲ್ಲಿಯೇ.  ರೋಷ, ಛಲಗಳಲ್ಲಿ ಒಮ್ಮೊಮ್ಮೆ ದ್ರೌಪದಿಯನ್ನೂ ಮೀರಿಸುವಂತೆ ಕಾಣುತ್ತಾಳೆ ಅಂಬೆ .  ಅವಳಿಗೆ ಅತ್ತ ತಾನು ಮೆಚ್ಚಿದ್ದ ಸಾಲ್ವನನ್ನು ಮದುವೆಯಾಗಲು ಆಗಲಿಲ್ಲ, ಇತ್ತ ಭೀಷ್ಮನೂ ತನ್ನನ್ನು ವರಿಸಲು ಒಪ್ಪಲಿಲ್ಲ. ಒಬ್ಬ ಹೆಣ್ಣಾಗಿ ಆಕೆ ಏನು ಮಾಡಬೇಕು? ಅವಳ ಜಾಗದಲ್ಲಿ ನಾವು ಇದ್ದಿದ್ದರೆ ಇದು ಹಣೆಯ ಬರಹ ಎಂದೋ, ದೇವರಿಚ್ಚೆ ಎಂದೋ ಬಂದದ್ದನ್ನು ಸ್ವೀಕರಿಸಿ ಈ ಜನ್ಮ ಮುಗಿಸಿ ಸಾಗುತ್ತಿದ್ದೆವು. ಆದರೆ ಅಂಬೆ ಇಟ್ಟ ಹೆಜ್ಜೆ ಹಿಂದಿಡಲಿಲ್ಲ. ತನಗಾದ ಅನ್ಯಾಯವನ್ನು ಸರಿಪಡಿಸಲು ಏನೆಲ್ಲಾ ಸಾಧ್ಯವೋ ಎಲ್ಲವನ್ನೂ ಮಾಡಿದಳು. ಮನಸ್ಸು ದೃಢವಾಗಿದ್ದರೆ ನಾವು ಅಂದುಕೊಂಡದ್ದನ್ನೆಲ್ಲಾ ಸಾಧಿಸಬಹುದೆಂದು ತೋರಿಸಿದಳು. ಅಂಬೆಯದ್ದು ಹುಟ್ಟಿದಾಗಿಂದಲೂ ಹೋರಾಟದ ಹಾದಿಯೇನಲ್ಲ .  ಆಕೆ ರಾಜಕುಮಾರಿಯಾಗಿ ಸುಖ ಜೀವನ ಕಂಡವಳು. ತಾನು ಪ್ರೀತಿಸಿದ್ದ ಸಾಳ್ವನನ್ನು ಮದುವೆಯಾಗುವುದೇ ಆಕೆಯ ಬಾಳಿನ ಬಹು ದೊಡ್ಡ ಕನಸಾಗಿತ...

ಸ್ವಯಂವರ ಪದ್ಧತಿ

  ಪುರಾಣಗಳಲ್ಲಿ ನಾವು ಸಾಮಾನ್ಯವಾಗಿ ಕಾಣಬಹುದಾದದ್ದು ರಾಜಕುಮಾರಿಯರ ಸ್ವಯಂವರಗಳನ್ನು. ಅಂದರೆ ಆಗಿನ ಕಾಲದಲ್ಲಿ ಹೆಣ್ಣುಮಕ್ಕಳು ತನಗೆ ಬೇಕಾದ ಮತ್ತು ತನಗೊಪ್ಪುವ ಪುರುಷನನ್ನು ವಿವಾಹಕ್ಕಾಗಿ ತಾವೇ ಆರಿಸಿಕೊಳ್ಳಬಹುದಾಗಿತ್ತು.  ಈ ಪದ್ಧತಿ ಎಷ್ಟು ಚಂದ ಇತ್ತು ಅನ್ಸುತ್ತೆ ಅಲ್ವಾ?  ಆದರೆ ಅದು ಕೇವಲ ರಾಜಕುಮಾರರ ಅಂದ-ಚಂದಗಳನ್ನು ನೋಡಿ ಆರಿಸುವ ಕಾರ್ಯಕ್ರಮ ಆಗಿರಲಿಲ್ಲ... ಬದಲಿಗೆ ಸ್ವಯಂವರಗಳಲ್ಲಿ ಸ್ಫರ್ಧೆಗಳು ಸಹ ಇರುತ್ತಿದ್ದವು. ಏಕೆಂದರೆ ಇಲ್ಲಿ ಆಯ್ಕೆಯಾಗುವವನು ಮುಂದೆ ರಾಜ್ಯವನ್ನು ಆಳಬೇಕಾದ್ದರಿಂದ, ಆತ ಅಂದ-ಚಂದ ಇರುವುದರ ಜೊತೆಗೇ ಬುದ್ಧಿವಂತ ಮತ್ತು ಸಾಹಸಿಯೂ ಆಗಿರಬೇಕಾದದ್ದು ಅವಶ್ಯಕವಾಗಿತ್ತು. ಆ ಸ್ಫರ್ಧೆಯಲ್ಲಿ ಗೆದ್ದವನಿಗೆ ರಾಜಕುಮಾರಿ ವಿಜಯದ ಮಾಲೆ ಹಾಕುತ್ತಿದ್ದಳು.            ಅಂತಹದ್ದೇ ಒಂದು ಸ್ವಯಂವರ ದ್ರೌಪದಿಯದ್ದು.            ಅವಳು ಹುಟ್ಟಿದ್ದೇ ಅರ್ಜುನನಿಗಾಗಿ. ಈ ಸ್ವಯಂವರವೂ ಸಹ ಅವನಿಗಾಗಿಯೇ. ಏಕೆಂದರೆ ಪಾಂಡವರು ಅರಗಿನ ಮನೆಯಲ್ಲಿ ಸುಟ್ಟು ಹೋಗಿದ್ದಾರೆ ಅಂತಲೇ ಎಲ್ಲರೂ ತಿಳಿದಿದ್ದರು. ಆದರೆ ದ್ರುಪದ ಮಾತ್ರ ಇದನ್ನು ನಂಬಿರಲಿಲ್ಲ. ಅತ್ಯಂತ ಸಾಹಸಿಗಳಾದ ಪಾಂಡವರು ಅರಗಿನ ಮನೆಯಿಂದ ತಪ್ಪಿಸಿಕೊಂಡು ಬದುಕಿದ್ದಾರೆ ಎಂದೇ ಅವನ ನಂಬಿಕೆ.  ಆ ಕಾರಣದಿಂದಲೇ ತನ್ನ ಮಗಳ ಸ್ವಯಂವರದ ಜೊತೆಗೆ ಒಂದು ಬಿಲ್ವಿದ್ಯೆಯ ಸ್ಫರ್ಧ...

ಕುಂತಿ

  ಕುತೂಹಲ ಎನ್ನುವುದು ಮಾನವ ಸಹಜ ಗುಣ. ಎಲ್ಲಾ ವಿಷಯಗಳನ್ನೂ ತಿಳಿಯಬೇಕು ಎಂಬ ಮಾನವನ ಮಹತ್ವಾಕಾಂಕ್ಷೆಯೇ ಇಂದು ಸೃಷ್ಟಿಯ ರಹಸ್ಯವನ್ನು ಭೇದಿಸುವತ್ತ ಸಾಗಿದೆ. ಅದರಲ್ಲಿಯೂ ಗುಟ್ಟಾ ವಿಷಯಗಳನ್ನು ತಿಳಿಯುವುದೆಂದರೆ ಮಾನವರಿಗೆ ಎಲ್ಲಿಲ್ಲದ ಕುತೂಹಲ. ಈ ಕುತೂಹಲ ಅತಿಯಾದರೆ ಆಗುವ ಅನಾಹುತವನ್ನು ಮಹಾಭಾರತದ "ಕುಂತಿ"ಯ ಮೂಲಕ ತಿಳಿಯಬಹುದು. ಕುಂತಿಭೋಜನ ಸಾಕು ಮಗಳಾದ ಕುಂತಿ ಒಂದು ಮಹತ್ತರ ಕಾರ್ಯಕ್ಕಾಗಿ ಜನ್ಮ ತಳೆದವಳು. ಹಸ್ತಿನಾವತಿಯ ಸಿಂಹಾಸನವನ್ನು ಕೌರವರಿಂದ ಮತ್ತೆ ಪಾಂಡುವಿನ ಮಕ್ಕಳಿಗೆ ಸಿಗುವಂತೆ ಮಾಡುವ ಪ್ರಭಾವೀ ಪಾತ್ರ ಅವಳದ್ದು. ಆದರೆ ಅವಳ ಜೀವನ ಅಷ್ಟೇ ದುಃಖದಾಯಕವಾದುದೂ ಹೌದು. ಚಿಕ್ಕವಳಿದ್ದಾಗ ಅವಳ ತಂದೆಯ ಆಸ್ಥಾನಕ್ಕೆ ಬಂದ ದೂರ್ವಾಸ ಮುನಿಯವರನ್ನು ಆದರದಿಂದ ಉಪಚರಿಸಿದ ಪರಿಣಾಮ, ದೂರ್ವಾಸರು ಅವಳ ಸೇವೆಗೆ ಸಂತೃಪ್ತರಾಗಿ ಒಂದು ಮಂತ್ರೋಪದೇಶ ಮಾಡುತ್ತಾರೆ. ಅದರಂತೆ ಅವಳು ತನಗೆ ಇಷ್ಟವಾದ ಐದು ದೇವತೆಗಳ್ನು ಪ್ರತ್ಯಕ್ಷ ಮಾಡಿಕೊಂಡು ಅವರಿಂದ ಮಕ್ಕಳನ್ನು ಪಡೆಯಬಹುದಾಗಿರುತ್ತದೆ. ದೂರ್ವಾಸರು ಅವಳ ಜೀವನದ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಈ ವರಗಳನ್ನು ನೀಡಿರುತ್ತಾರೆ. ಮುಂದೆ ಈ ವರಗಳಿಂದ ಕುಂತಿಗೆ ಬಹಳ ಪ್ರಯೋಜನವಾಗುತ್ತದೆ ನಿಜ. ಆದರೆ ಈ ಮಂತ್ರಗಳನ್ನು ಹೇಳಿದರೆ ತನಗಿಷ್ಟವಾದ ದೇವರು ಪ್ರತ್ಯಕ್ಷನಾಗುತ್ತಾನೆಯೋ ಇಲ್ಲವವೋ ಎಂಬ ಕುತೂಹಲವೇ ಕುಂತಿಯನ್ನು ಆಜೀವಪರ್ಯಂತ ದುಃಖಕ್ಕೆ ದೂಡುತ್ತದೆ. ಹುಡುಗಾಟಿಕೆಯ ವಯಸ್ಸ...

ಋಷ್ಯಶೃಂಗನ ಬ್ರಹ್ಮಚರ್ಯ

  ಅದು ಅಂಗರಾಜ್ಯ. ಸುಭಿಕ್ಷತೆಯಿಂದ ತುಂಬಿ ತುಳುಕುವ ದೇಶವದು. ರಾಜ ರೋಮಪಾದನ ಆಡಳಿತದಲ್ಲಿ ಪ್ರಜೆಗಳಿಗೆ ಕೊರತೆ ಎನ್ನುವುದೇ ಇರಲಿಲ್ಲ. ಇಡೀ ರಾಜ್ಯದಲ್ಲಿ ಕಾಲಕಾಲಕ್ಕೆ ಮಳೆ ಬೀಳುತ್ತಾ, ಬಂಗಾರದಂತಹ ಬೆಳೆ ಬೆಳೆಯುತ್ತಾ ಪ್ರಜೆಗಳು ಸಂಪ್ರೀತರಾಗಿದ್ದರು.  ಲೋಪವೇ ಇಲ್ಲದ ಈ ರಾಜ್ಯ ಸ್ವರ್ಗಕ್ಕೂ ಕಿಚ್ಚು ಹಚ್ಚುವಂತಿತ್ತು. ಅದೇ ತಪ್ಪಾಯಿತು. ದೇವೇಂದ್ರ ಇದರ ಸುಭಿಕ್ಷ ನೋಡಿ ಕಿಡಿಗಣ್ಣಾದ. ಹೀಗಾದರೆ ಜನರು ತನ್ನನ್ನು ಮರೆತೇ ಬಿಡುತ್ತಾರೆಂದು ಮೋಡಗಳ ಬಳಿ ಅಂಗರಾಜ್ಯದ ಸನಿಹವೂ ಸುಳಿಯಬಾರದೆಂದು ಆಜ್ಞಾಪಿಸಿದ. ಮೋಡಗಳು ಮಳೆ ಸುರಿಸದೇ ಹಿಂದುಳಿದವು.  ಹಸಿರಿನಿಂದ ತುಂಬಿ ತುಳುಕುತ್ತಿದ್ದ ರಾಜ್ಯವೀಗ ಮಳೆಯಿಲ್ಲದೇ ಬರಡಾಯ್ತು. ಸುಭಿಕ್ಷವಿದ್ದಾಗ ಶೇಖರಿಸಿಟ್ಟಿದ್ದ ಧಾನ್ಯವೆಲ್ಲಾ ಖರ್ಚಾದರೂ ಸಹ ಮಳೆ ಬರುವ ಸೂಚನೆ ಕಾಣಲಿಲ್ಲ. ಕೆರೆ ಕಟ್ಟೆಗಳೆಲ್ಲಾ ಖಾಲಿಯಾದವು. ಕುಡಿಯಲೂ ಸಹ ನೀರು ಉಳಿದಿರಲಿಲ್ಲ.  ಹೀಗೇ ಮುಂದುವರೆದರೆ ತಮಗೆ ಉಳಿಗಾಲವಿಲ್ಲ ಅಂತ ಅರಿವಾಯ್ತು ರೋಮಪಾದನಿಗೆ. ಆದರೆ ಮುನಿಸಿಕೊಂಡಿರುವ ದೇವೇಂದ್ರನನ್ನು ಒಲಿಸುವುದು ಅವನಿಂದ ಸಾಧ್ಯವಿರಲಿಲ್ಲ.  ಒಂದು ದಿನ ಅರಮನೆಯ ಮುಂದಿನಿಂದ ಸಾಗುತ್ತಿದ್ದ ಸಾಧು ಒಬ್ಬರನ್ನು ಸತ್ಕರಿಸಿ ಮಹಾರಾಜ ತನ್ನ ಸ್ಥಿತಿ ಅರುಹಿದ. ತನ್ನ ಪ್ರಾಣ ಹೋದರೂ ಚಿಂತೆಯಿಲ್ಲ, ತನ್ನ ರಾಜ್ಯ ಮೊದಲಿನಂತೆ ಸುಭಿಕ್ಷವಾಗಲು ಏನು ಮಾಡಬೇಕು ಅಂತ ಕೇಳಿದ.  ಆ ಸನ್ಯಾಸಿ ಕ್ಷಣ ಕಾಲ ಕಣ್ಮುಚ್ಚಿ ಯೋಚ...