Posts

Showing posts with the label ಬಲಿ ಚಕ್ರವರ್ತಿ

ಬಲಿ ಚಕ್ರವರ್ತಿ

Image
ಜೀವನದಲ್ಲಿ ಯಾವುದೇ ವಿಷಯವಾಗಲೀ ಯಾವುದೂ ಅತಿಯಾಗಬಾರದು. ಎಲ್ಲವೂ ಹಿತ-ಮಿತವಾಗಿ ಇರಬೇಕು. ಸದಾ ಕಾಲವೂ ಎಲ್ಲರನ್ನೂ ಪ್ರೀತಿಸುತ್ತಲೇ ಇರುವುದು ಅಥವಾ ದ್ವೇಷಿಸುತ್ತಲೇ ಇರುವುದು ನಮ್ಮಿಂದಾಗದು. ಸದಾ ಒಳ್ಳೆಯವರಾಗಿ ಇರುವುದೂ ಅಥವಾ ಕೆಟ್ಟವರಾಗಿ ಇರುವುದೂ ಕೂಡ ಕಷ್ಟವೇ.  ಚೂರೂ ದ್ವೇಷವಿಲ್ಲದೇ ಧಾರಾಳವಾಗಿ ಒಳ್ಳೆಯತನ ತೋರುವವರಿಗೆ ನಮ್ಮ ಜನ ಬೆಲೆ ಕೊಡುವುದೇ ಇಲ್ಲ. ಆದರೆ ಧಾರಾಳಿಗಳಿಗೆ ಅದು ಅರ್ಥವಾಗೋಲ್ಲ. ಆಗವರಿಗೆ ಅದನ್ನು ಮನವರಿಕೆ ಮಾಡಿಸಬೇಕಾಗುತ್ತದೆ.  ಹೇಗೆಂದರೆ ದೈತ್ಯ ರಾಜ ಬಲಿ ಚಕ್ರವರ್ತಿಯು ತನ್ನ ಒಳ್ಳೆಯತನದಿಂದ ಜನಾನುರಾಗಿ ರಾಜನಾಗಿದ್ದ. ಜನರು ಆತನ ಆಳ್ವಿಕೆಗೆ ಮನ ಸೋತಿದ್ದರು. ರಾಕ್ಷಸನಾಗಿದ್ದರೂ ಸಹ ಜನರಿಂದ ಗೌರವ ಪಡೆದಿದ್ದವನು ಈತ. ಆದರೆ ಅವನ ಈ ಒಳ್ಳೆಯತನ ಕೆಲವು ದುಷ್ಟರಿಗೆ ಸಹಾಯಕವಾಗಿದೆ ಎನ್ನುವ ವಿಷಯವನ್ನು ಅವನಿಗೆ ಗೊತ್ತಿರಲಿಲ್ಲ. ಹೇಗಾದರೂ ಮಾಡಿ ಇದನ್ನು ಆತನಿಗೆ ತಿಳಿಸಬೇಕಿತ್ತು.  ಆದರೆ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು? ಈ ಕೆಲಸಕ್ಕಾಗಿ ಹುಟ್ಟಿದವನೇ ವಾಮನ. ವಿಷ್ಣುವಿನ ಐದನೇ ಅವತಾರವಾದ 'ವಾಮನ' ಅದಿತಿ ಮತ್ತು ಕಶ್ಯಪರ ಮಗ. ಆ ಮಹಾವಿಷ್ಣುವೇ ಅವತಾರ ಎತ್ತಿ ಬರಬೇಕಾಯಿತು ಎಂದರೆ ತಿಳಿಯಿರಿ ವಿಷಯ ಎಷ್ಟು ಗಂಭೀರವಾಗಿದೆ ಅಂತ.  ಕೆಲವೊಮ್ಮೆ ನಮ್ಮನ್ನು ಆಳುವವರು ಜನರ ಹಿತದೃಷ್ಟಿಯಿಂದ ಕೆಲವು ಕಾನೂನು-ಕಟ್ಟಳೆ ಮಾಡಬೇಕಾಗುತ್ತದೆ. ಆ ಕಾನೂನು ಮೀರುವವರಿಗೆ ಶಿಕ್ಷೆಯನ್ನೂ ವಿಧಿಸಬೇಕಾಗುತ್...