ಸುಭದ್ರೆ
"ತನ್ನನ್ನು ತಾನೇ ಅಪಹರಿಸಿಕೊಂಡ ಸುಭದ್ರೆ" ಹೆಣ್ಣುಮಕ್ಕಳಲ್ಲಿ ಸದಾ ಒಂದು ದ್ವಂದ್ವ ಕಾಡುತ್ತಿರುತ್ತದೆ. ಏನೆಂದರೆ ಅವರು ಯಾವುದನ್ನು ತಮ್ಮ ಮನೆ ಎಂದುಕೊಂಡಿರುತ್ತಾರೋ ವಾಸ್ತವವಾಗಿ ಅವರುಗಳು ಆ ಮನೆಯನ್ನು ಶಾಶ್ವತವಾಗಿ ಬಿಟ್ಟು ಗಂಡನ ಮನೆಗೆ ಹೋಗಬೇಕಾಗಿರುತ್ತದೆ. ಹೆಣ್ಣುಮಕ್ಕಳಿಗೆ ಚಿಕ್ಕಂದಿನಿಂದಲೇ ಪತಿಭಕ್ತಿಯ ಬಗ್ಗೆ ಹೇಳಿಕೊಡುವುದರಿಂದ ಅವರುಗಳು ಪತಿ ಸೇವೆಯಲ್ಲಿಯೇ ತಮ್ಮ ಸಾರ್ಥಕ್ಯ ಕಾಣಲು ಮಾನಸಿಕವಾಗಿ ತಯಾರಾಗಿರುತ್ತಾರೆ. ಆದರೆ ಮದುವೆಯಾಗುವಾಗ ತಾವಿಷ್ಟ ಪಟ್ಟವನ ಜೊತೆಯೇ ಮದುವೆಯಾಗುವಂತಾಗಲಿ ಎಂದು ಬಯಸುತ್ತಾರೆ. ಯಾವುದೋ ಅಪರಿಚಿತನ ಜೊತೆ ತನ್ನ ಮದುವೆ ಮಾಡಲಾಗುತ್ತದೆ ಎಂಬ ಸತ್ಯ ಅರಗಿಸಿಕೊಳ್ಳಲಾಗುವುದಿಲ್ಲ ಅವರಿಂದ. ಆದರೆ ಮದುವೆ ಎನ್ನುವುದು ಎಲ್ಲಾ ಹೆಣ್ಣುಮಕ್ಕಳ ಬಾಳಿನಲ್ಲಿಯೂ ಕಡ್ಡಾಯವಾಗಿ ನಡೆಯಬೇಕಾದ ಕ್ರಿಯೆ. ಹಾಗಾಗಿ ವಿಧಿಯಿಲ್ಲದೇ ತಮ್ಮ ಮನಸ್ಸನ್ನು ತಾವೇ ಸಂತೈಸಿಕೊಳ್ಳುತ್ತಾರೆ. ಕೆಲವರು ತಾವು ಇಷ್ಟ ಪಟ್ಟವರೊಂದಿಗೆ ಖುಷಿಯಾಗಿರುತ್ತಾರೆ. ಉಳಿದವರು ಪರಿಸ್ಥಿಯೊಡನೆ ರಾಜಿ ಮಾಡಿಕೊಂಡು ಬದುಕುತ್ತಿರುತ್ತಾರೆ. ಕೃಷ್ಣನ ತಂಗಿಯಾದ ಸುಭದ್ರೆಗೂ ಇಂತಹದ್ದೇ ಪರಿಸ್ಥಿತಿ ಎದುರಾಗಿತ್ತು. ಅವರಿಬ್ಬರಿಗೂ ಹಿರಿಯ ಅಣ್ಣನಾದ ಬಲರಾಮನು ಅವಳನ್ನು ಒಂದು ಮಾತೂ ಕೇಳದೇ ಕೌರವ ರಾಜಕುಮಾರನಾದ ದುರ್ಯೋಧನನೊಡನೆ ಅವಳ ಮದುವೆಯನ್ನು ನಿಶ್ಚಯಿಸಿಕೊಂಡು ಬಂದು ಬಿಡುತ್ತಾನೆ. ಸುಭದ್ರಗೆ ದುರ್ಯೋಧನ ಇಷ್ಟವಿರಲಿಲ್...