Posts

Showing posts with the label ಶಿಶುಪಾಲ

ಶಿಶುಪಾಲನ ನೂರು ತಪ್ಪುಗಳು

Image
  ಒಬ್ಬರು ಒಂದು ಬಾರಿ ಮಾಡಿದ ತಪ್ಪನ್ನು ಮತ್ತೊಂದು ಬಾರಿ ಮಾಡಿದರೆ ನಮಗೆ ಸಹಿಸಲಾಗೋಲ್ಲ. ಆದರೆ ಶ್ರೀಕೃಷ್ಣ ಶಿಶುಪಾಲನ ನೂರು ತಪ್ಪುಗಳನ್ನು ಕ್ಷಮಿಸುತ್ತಾನೆ‌. ಏಕೆಂದರೆ ಅವನು ಶಿಶುಪಾಲನ ನೂರು ತಪ್ಪುಗಳನ್ನು ಕ್ಷಮಿಸುವುದಾಗಿ ಅವನ ತಾಯಿಗೆ ಮಾತು ಕೊಟ್ಟಿರುತ್ತಾನೆ.  ಶಿಶುಪಾಲ ಅದನ್ನು ಕೃಷ್ಣನ ಬಲಹೀನತೆ ಎಂದು ತಿಳಿದು ತಪ್ಪಿನ ಮೇಲೆ ತಪ್ಪು ಮಾಡುತ್ತಲೇ ಹೋಗುತ್ತಾನೆ. ಕೃಷ್ಣ ಅವುಡುಗಚ್ಚಿ ಆ ತಪ್ಪುಗಳನ್ನು ಕ್ಷಮಿಸುತ್ತಲೇ ಹೋಗುತ್ತಾನೆ. ಕಡೆಗೆ ಅವನು ನೂರಾ ಒಂದನೇ ತಪ್ಪು ಮಾಡಿದಾಗ ಕೃಷ್ಣನ ಕೋಪ ಭುಗಿಲೆದ್ದು ಇನ್ನು ತಡೆಯಲಾಗದೇ ಶಿಶುಪಾಲನನ್ನು ವಧಿಸುತ್ತಾನೆ.‌ ಇದೊಂದು ರೀತಿ ಲಾಜಿಕ್ ಥರ ಕಾಣುತ್ತದೆ ನನಗೆ. ನಮಗೆಲ್ಲರಿಗೂ ಸಾಯಿಸುವಂತಹಾ ಕೋಪ ಯಾವಾಗ ಬರುತ್ತದೆ? ಅವರೂ ನಮಗೆ ಅಷ್ಟೇ ಪ್ರಮಾಣದ ನೋವು ಕೊಟ್ಟಾಗ ತಾನೇ? ಕಳ್ಳತನ ಮಾಡುವ ಕಳ್ಳನಿಗೆ ಮರಣದಂಡನೆ ವಿಧಿಸಲಾಗುತ್ತದೆಯೇ? ಅವನಿಗೆ ಚಿಕ್ಕಪುಟ್ಟ ಶಿಕ್ಷೆ ನೀಡಿ ಮತ್ತೊಮ್ಮೆ ಕಳ್ಳತನ ಮಾಡದಂತೆ ಎಚ್ಚರಿಕೆ ಕೊಟ್ಟು ಬಿಟ್ಟುಬಿಡುತ್ತಾರೆ. ಕೊಲೆ ಮಾಡಿದವನಿಗೆ ಮಾತ್ರವೇ ಗಲ್ಲುಶಿಕ್ಷೆ ಕೊಡುವುದು.  ಅದೇ ರೀತಿ ಶಿಶುಪಾಲ ಮಾಡುತ್ತಿದ್ದ ಚಿಕ್ಕಪುಟ್ಟ ತಪ್ಪುಗಳು ಅವನನ್ನು ಕೊಲೆ ಮಾಡುವಂತಹಾ ಅಪರಾಧಗಳಾಗಿರಲೇ ಇಲ್ಲ. ಅದು ಕೇವಲ ಕೃಷ್ಣನನ್ನು ಕೆರಳಿಸಲು ಆತ ಮಾಡುತ್ತಿದ್ದ ತಪ್ಪುಗಳು. ಶಿಶುಪಾಲ ಮಾಡಿದ್ದಕ್ಕಿಂತಲೂ ಘೋರ ಅಪರಾಧ ಮಾಡುತ್ತಿದ್ದವರು ಇದ್ದರೂ ಕೃಷ್ಣ ಅವರಿಗೇನೂ ಮಾಡ...