Posts

Showing posts with the label urvashi

ಊರ್ವಶಿಯ ಶಾಪ

Image
  ಅವನ ಮುಂದೆ ಸಾಕ್ಷಾತ್ ಅಪ್ಸರೆಯೇ ನಿಂತಿದ್ದಳು... ಅವನು ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತಿದ್ದ.  ಆಕೆಯ ದೇಹದ ಹರೆಯ ಚೂರೂ ಮಾಸಿರಲಿಲ್ಲ. ಕಣ್ಣುಗಳು ಬರೇ ಮಿನುಗುತ್ತಿರಲಿಲ್ಲ.. ಬದಲಿಗೆ ಹೊಳೆಯುತ್ತಿದ್ದವು. ಆ ಹೊಳಪು ತನಗಾಗಿ ಅಂತ ಗೊತ್ತು ಅವನಿಗೆ.  ಸ್ವರ್ಗಕ್ಕೆ ಬಂದಾಗಿನಿಂದಲೂ ಆಕೆಯ ಕಣ್ಣುಗಳು ತನ್ನನ್ನು ಹಿಂಬಾಲಿಸುತ್ತಿರುವುದನ್ನು ಅವನು ಕಂಡುಕೊಂಡಿದ್ದ. ಮೊದಲಾಗಿದ್ದರೆ ಅದರ ಸುಳಿವು ಸಿಗುತ್ತಿದ್ದಂತೆಯೇ ಆಕೆಯ ತೋಳ್ತೆಕ್ಕೆ ಸೇರಲು ನೆಪ ಹುಡುಕುತ್ತಿದ್ದ.  ಆದರೆ ಈಗ ಅವನು ಮೊದಲಿನ ಅರ್ಜುನನಲ್ಲ.  ವಯಸ್ಸಾದಂತೆ ಮನಸ್ಸೂ ಸಹ ಮಾಗಿತ್ತು. ಕೇವಲ ಕಣ್ಣೋಟ ಅಥವಾ ಚಿಕ್ಕ ಸ್ಪರ್ಷಕ್ಕೆ ದೇಹವನ್ನೇ ಬಯಸುವಷ್ಟು ಹುಡುಗತನ ಈಗ ಅವನಲ್ಲಿ ಇರಲಿಲ್ಲ. ಹಾಗಾಗಿ ಊರ್ವಶಿ ತನ್ನನ್ನು ಬಯಸಿ ತನ್ನೆದುರು ನಿಂತಾಗ ಆಕೆಯ ದೇಹವನ್ನು ಗಮನಿಸದೇ ಆಕೆಯ ಕಣ್ಣೊಳಗೆ ಇಣುಕಿದ‌. ಅಪ್ಸರೆಯರಿಗೆ ವಯಸ್ಸಾಗುವುದಿಲ್ಲ. ಸಾವಿರಾರು ವರ್ಷ ಕಳೆದರೂ ಅವರ ದೇಹ ಯೌವ್ವನಭರಿತವಾಗಿಯೇ ಇರುತ್ತದೆ. ಯಾವಾಗಲೂ ಚಿಕ್ಕ ತರುಣಿಯಂತೆ ಕಂಗೊಳಿಸುತ್ತಿರುತ್ತಾರೆ.  ಆದರೆ ಮನಸ್ಸಿಗೆ ವಯಸ್ಸಾಗುತ್ತದೆಯಲ್ಲವೇ?  ಅರ್ಜುನ ಕಂಡದ್ದೂ ಅದನ್ನೇ... ಊರ್ವಶಿಯ ದೇಹ ಹರೆಯದಾಗಿದ್ದರೂ ಆಕೆಯ ಕಣ್ಣುಗಳಲ್ಲಿ ತಮ್ಮ ವಂಶವೇ ಪ್ರತಿಬಿಂಬಿಸಿತು. ಕೌರವರ ಮೂಲಪುರುಷನಾದ ಪುರೂರವನ ಪ್ರೇಯಸಿ ಆಕೆ. ಪುರೂರವನ ನಂತರ ಕುರುವಂಶದಲ್ಲಿ ಎಷ್ಟು ರಾಜರು ಹುಟ್ಟಿದ್ದಾರೆ...