Posts

Showing posts with the label ಅಷ್ಟವಸು

ಅಷ್ಟ ವಸುಗಳು

Image
  ಪ್ರತಿಯೊಬ್ಬರ ಹುಟ್ಟಿಗೂ ಒಂದೊಂದು ಕಾರಣ ಇರುತ್ತದೆ.  ಮಹಾಭಾರತದಂತಹ ಒಂದೇ ಒಂದು ಗ್ರಂಥ ಓದಿದರೆ ಸಾಕು ಈ ವಿಷಯ ಸ್ಪಷ್ಟವಾಗುತ್ತದೆ. ಮಹಾಭಾರತದ ಮೂಲ ಪುರುಷರಲ್ಲಿ ಒಬ್ಬನಾದ ಭೀಷ್ಮನ ಹುಟ್ಟಿಗೂ ಒಂದು ಮಹತ್ತರವಾದ ಕಾರಣವಿದೆ. ಏಕೆಂದರೆ ಶಂತನುವಿಗೆ ಹುಟ್ಟಿದ ಮಕ್ಕಳಲ್ಲಿ ಜೀವಂತ ಉಳಿದವನು ಭೀಷ್ಮ ಒಬ್ಬನೇ. ಉಳಿದವರು ಹುಟ್ಟಿದ ದಿನವೇ ಹೆತ್ತ ತಾಯಿಯಿಂದ ನೀರು ಪಾಲಾದವರು. ಹಾಗಾಗಿ ಉಳಿದವರು ಮರಣ ಹೊಂದಿ, ಭೀಷ್ಮನೊಬ್ಬನೇ ಬದುಕುಳಿಯಲು ಏನಾದರೂ ಒಂದು ಕಾರಣ ಇರಲೇ ಬೇಕಲ್ಲವೆ? ವಸು ಎಂಬುವವಳಿಗೆ ಎಂಟು ಜನ ಪುತ್ರರು. ಅವರೇ ಅಷ್ಟ ವಸುಗಳು. ದೇವರಿಗಿರುವ ಎಲ್ಲಾ ಶಕ್ತಿಗಳೂ ಇವರಿಗಿದ್ದವು. ನೀರಿ‌ನ ಮೇಲೆ ನಡೆಯುವ ಶಕ್ತಿ, ಆಕಾಶದಲ್ಲಿ ಸಂಚರಿಸುವ ಶಕ್ತಿ, ಸದಾ ಯೌವ್ವನಿಗರಾಗಿರುವ ಶಕ್ತಿ ಎಲ್ಲವೂ ಇದ್ದವು.  ಹೀಗಿರುವಾಗ ಒಮ್ಮೆ ಈ ಎಂಟು ವಸುಗಳು ತಮ್ಮ ತಮ್ಮ ಪತ್ನಿಯರೊಂದಿಗೆ ಭೂಲೋಕದಲ್ಲಿ ಸಂಚಾರ ಮಾಡುತ್ತಿರುವಾಗ ವಸಿಷ್ಠರ ಆಶ್ರಮದಲ್ಲಿನ ನಂದಿನಿ ಅವರ ಗಮನ ಸೆಳೆಯುತ್ತಾಳೆ.  ಆ ಕಾಮಧೇನುವನ್ನು ಕಂಡು ವಸುಗಳ ಮನಸ್ಸು ಚಂಚಲವಾಗುತ್ತದೆ. ಕೇಳಿದ್ದನ್ನು ದಯಪಾಲಿಸುವ ಇಂತಹಾ ಒಂದು ಹಸು ತಮ್ಮಲ್ಲಿಯೂ ಇರಬೇಕೆಂಬ ಆಸೆಯಾಗುತ್ತದೆ. ಆಗ ಯಾವ ಶ್ರಮವಿಲ್ಲದೇ ಇಷ್ಟಪಟ್ಟಿದ್ದನ್ನು ಪಡೆಯುತ್ತಾ ಸುಖವಾಗಿರಬಹುದು ಅಂತ ಲಾಲಸೆ ಪಡುತ್ತಾರೆ. ಆದರೆ ಅದನ್ನು ಪಡೆಯಲು ಮಾತ್ರ ತಾವು ದೇವತೆಗಳು ಎಂಬುದನ್ನು ಮರೆತು ಮನುಷ್ಯರಂತೆ ವಾಮಮಾರ್ಗವನ್ನು ...