Posts

Showing posts with the label ಅಹಲ್ಯೆ

ಅಹಲ್ಯೆಯ ಅಂತರಂಗ

ಅಹಲ್ಯೆಗೆ ಯಾಕೋ ಇತ್ತೀಚೆಗೆ ತುಂಬಾ ಅನುಮಾನ ಕಾಡುತ್ತಿತ್ತು.  ಮಹರ್ಷಿಗಳು ತನ್ನನ್ನು ಮೊದಲ ಹಾಗೆ ನೋಡದೇ ಪರೀಕ್ಷಕ ದೃಷ್ಟಿಯಿಂದ ನೋಡುತ್ತಿದ್ದಾರೆಂದು. ಅವಳು ತನಗಿದ್ದ ಶಾಪ ಕಳೆದುಕೊಂಡು ವಿಮುಕ್ತಳಾದರೂ, ಲೋಕದೆದುರು  ಕಳಂಕರಹಿತಳಾದರೂ ಗೌತಮರಿಗೆ ಇನ್ನೂ ತನ್ನ ಮೇಲಿನ ಸಂಶಯ ಹೋಗಿಲ್ಲವೇ? ಅದಕ್ಕೆ ಆಗಾಗ ಬೇಕಂತಲೇ ಕರೆದು ಪರೀಕ್ಷೆ ಮಾಡುತ್ತಿರಬಹುದೇ ಎಂದೆನಿಸುತ್ತಿತ್ತು.  ಕಲ್ಲಾಗಿದ್ದಾಗಲೇ ಎಷ್ಟೋ ಚೆನ್ನಾಗಿತ್ತು.   ಕಲ್ಲಾಗಿದ್ದ ಅಷ್ಟೂ ಸಮಯ ಕೇವಲ ಅವಳದ್ದಾಗಿತ್ತು. ಏನೋ ಯೋಚಿಸುತ್ತಾ ಸುತ್ತಲಿರುವ ಪ್ರಕೃತಿ ನೋಡುತ್ತಾ, ಖುಷಿ ಪಡುತ್ತಾ ತನ್ನೊಳಗೆ ತಾನೇ ಕಳೆದು ಹೋಗುತ್ತಿದ್ದಳು.  ನಂತರ ಶ್ರೀರಾಮನ ಪಾದಸ್ಪರ್ಶದಿಂದ ಮತ್ತೆ ಮಾನವಳಾದರೂ, ಮೈ-ಮನಸ್ಸುಗಳು ಇನ್ನೂ ಜಡದ ಗುಂಗಿನಲ್ಲಿಯೇ ಇದ್ದವು. ಅವುಗಳನ್ನು ಎಚ್ಚರಗೊಳಿಸುವುದು ಕಷ್ಟದ ಕೆಲಸವಾಗಿತ್ತು. ಅಂತಹಾ ಸಮಯದಲ್ಲಿ ಗೌತಮರು ಅವಳನ್ನು ಕರೆದರೆ ಇವರು ನಿಜವಾಗಿಯೂ ಮಹರ್ಷಿಗಳೋ ಅಥವಾ ಮಹರ್ಷಿಗಳ ರೂಪ ಧರಿಸಿರುವ ಇಂದ್ರನೋ ಅಂತ ಅವಳಿಗೆ ಗಾಬರಿಯಾಗುತ್ತಿತ್ತು.  ಇಂದ್ರನನ್ನು ಮಹರ್ಷಿಗಳೆಂದು ಭ್ರಮಿಸಿ ಮೋಸ ಹೋದೆನಲ್ಲ ಅಂತ ಅವಳ ಮೇಲೆ ಅವಳಿಗೇ ಕೋಪ ಬರುತ್ತಿತ್ತು. ಆದರೂ ಇದರಲ್ಲಿ ಅವಳ ತಪ್ಪೇನಿತ್ತು? ನಿಜಕ್ಕೂ ಆ ಸಮಯದಲ್ಲಿ ಏನು ನಡೆಯಿತು ಎನ್ನುವುದೇ ತಿಳಿಯದಷ್ಟು ಅವಳ ಬುದ್ಧಿ ಮಂಕಾಗಿತ್ತು. ಆದರೆ ಒಂದಂತೂ ಸ್ಪಷ್ಟವಾಗಿತ್ತು. ತಾನು ಮಾಡಬಾ...