Posts

Showing posts with the label ಮಹಾಭಾರತ

ಹೆಂಡತಿ ಎಂದರೆ ಹೀಗಿರಬೇಕು! (ದ್ರೌಪದಿಯ ಮನದಾಳದ ಮಾತು)

Image
ನೈವ ಮೇ ಪತಯಸ್ಸಂತಿ ನ...  ಪುತ್ರಾನ ಚ ಬಾಂಧವಃ| ನ ಭ್ರಾತರೋ ನ ಚ ಪಿತಾ...  ನೈವಂ ತ್ವಮ್ ಮಧುಸೂದನ|| ಬದುಕಿನುದ್ದಕ್ಕೂ ಅಪಮಾನಗಳನ್ನು ಎದುರಿಸಿದ, ಜೀವನಪೂರ್ತಿ ಕಣ್ಣೀರಿನಲ್ಲಿ ಕೈ ತೊಳೆದ, ವೀರಾಧಿವೀರರಾದ ಐವರು ಗಂಡಂದಿರು ಇದ್ದರೂ, ಪರಪುರುಷರ ಮುಂದೆ ಅಪಮಾನ ಮಾಡಿಸಿಕೊಂಡ ದ್ರೌಪದಿ, ಕಡೆಗೆ ಹತಾಶಳಾಗಿ ನುಡಿದ ಮಾತಿದು.  " ನನಗೆ ಗಂಡಂದಿರೂ ಇಲ್ಲ.. ಪುತ್ರ-ಬಂಧು- ಬಾಂಧವರೂ ಇಲ್ಲ.. ಸೋದರನೂ ಇಲ್ಲ.. ತಂದೆಯೂ ಇಲ್ಲ.. ಕೊನೆಗೆ ನೀನೂ ಇಲ್ಲ ಕೃಷ್ಣ " ಎಂದು ನುಡಿಯುತ್ತಾಳೆ ಆಕೆ. ದ್ರೌಪದಿ ಆಗಿನ ಕಾಲದ ಸ್ತ್ರೀಯರಲ್ಲಿಯೇ ಅತ್ಯಂತ ಸುಂದರಿಯಾದ ಹೆಣ್ಣು. ಕೊಂಚ ಕಪ್ಪು ವರ್ಣದವಳಾದರೂ, ಬಣ್ಣ ಕಾಣದಷ್ಟು ನಯ-ನಾಜೂಕಿನ ಸುಂದರ ಮೈಮಾಟದವಳು. ವನವಾಸದ ಅವಧಿಯಲ್ಲಿ ಅತ್ಯಂತ ಸರಳ ಉಡುಗೆಯಲ್ಲಿದ್ದರೂ ಕಣ್ಸೆಳೆಯುವಂತಿದ್ದಳು.  ಅಗ್ನಿ ದೇ ವನ‌ ಪುತ್ರಿಯಾದ ದ್ರೌಪದಿಗೆ ಅವಳ 'ಧೈರ್ಯವೇ' ಮುಖದಲ್ಲಿ ತೇಜಸ್ಸು ಹೆಚ್ಚಲು ಕಾರಣವಾಗಿತ್ತು ಎನ್ನಬಹುದು. ಅನ್ಯಾಯಕ್ಕೆ ಬಗ್ಗದ, ಗಂಡಂದಿರ ಅಧರ್ಮವನ್ನು ಖಂಡಿಸುವ, ಅವರನ್ನು ಧರ್ಮಮಾರ್ಗದಲ್ಲಿ ನಡೆಯಲು ಪ್ರಚೋದಿಸುವ, ಹಾಗೆ ನಡೆದಾಗ ಮೆಚ್ಚುವ ದ್ರೌಪದಿಯ ಧೈರ್ಯವನ್ನು ನಾವೆಲ್ಲರೂ ಮೆಚ್ಚಲೇಬೇಕು. ದ್ರೌಪದಿ ವನವಾಸದ ಅವಧಿಯಲ್ಲಿ ಕಾಡು, ಮೇಡುಗಳಲ್ಲಿ ಅಲೆಯುವಾಗ ಸಿಕ್ಕ ನದಿ-ಜಲಪಾತದಲ್ಲಿ ಸ್ನಾನ ಮಾಡುತ್ತಿದ್ದರೆ, ಒದ್ದೆ ಬಟ್ಟೆಯಲ್ಲಿ ಎದ್ದು ಕಾಣುವ ಆಕೆಯ ಅಂಗಾಂಗ ಸೌಂದರ್ಯಕ್ಕೆ ಮಾರು ಹೋದ ...

ನಹುಷ

Image
ಯಾರೇ ಆಗಲಿ ಅಧಿಕಾರದಲ್ಲಿದ್ದಾಗ ಅದರ ಮಿತಿಯರಿತು ಜವಾಬ್ದಾರಿ ವಹಿಸಿದರೆ ಕ್ಷೇಮ. ಇಲ್ಲದಿದ್ದರೆ ಅದೇ ಅಧಿಕಾರದಿಂದಲೇ ವ್ಯಕ್ತಿಯ ವ್ಯಕ್ತಿತ್ವ ಪಾತಾಳ ತಲಪುತ್ತದೆ.  ಆದರೆ ನಮ್ಮ ಸುತ್ತಮುತ್ತ ನಿಜವಾಗಿ ನಡೆಯುತ್ತಿರುವುದೇನೆಂದರೆ ಅಧಿಕಾರ ಸಿಕ್ಕ ತಕ್ಷಣ ಜನರು ಎಲ್ಲವನ್ನೂ ಮರೆತು ತಮ್ಮ ಶತೃಗಳ ದಮನಕ್ಕೆ ನಿಂತುಬಿಡುತ್ತಾರೆ. ಅಧಿಕಾರ ಎನ್ನುವುದು ಎಂದಿಗೂ ಶಾಶ್ವತವಲ್ಲ. ಇಂದ್ರನಾದರೂ ಚಂದ್ರನಾದರೂ ಒಂದಲ್ಲ ಒಂದು ದಿನ ಅಧಿಕಾರದಿಂದ ಕೆಳಗೆ ಇಳಿಯಲೇಬೇಕು.  ಅದಕ್ಕಾಗಿ ಅಧಿಕಾರ ಸಿಕ್ಕಾಗ ಆದಷ್ಟೂ ಜನಪರ ಕೆಲಸ ಮಾಡಿದರೆ ಅಧಿಕಾರದಿಂದ ಇಳಿದ ಮೇಲೆಯೂ ಅದೇ ಗೌರವ ಉಳಿಸಿಕೊಳ್ಳಲು ಸಾಧ್ಯ. ಇಲ್ಲದಿದ್ದರೆ ನಹುಷನಂತೆ ಶಾಪಗ್ರಸ್ಥರಾಗಿ ಶಾಪವಿಮೋಚನೆಗಾಗಿ ಕಾಯಬೇಕಾಗುತ್ತದೆ.  ತಾನು ಕುಳಿತ ಸ್ಥಾನ ತನ್ನದಲ್ಲದಿದ್ದರೂ ಸಹ ಮನಸ್ಸಿಗೆ ಬಂದಂತೆ ಅಧಿಕಾರ ಚಲಾಯಿಸಿ ಪೇಚಿಗೆ ಸಿಲುಕಿಕೊಂಡ ನಹುಷನ ಕಥೆ ಹೀಗಿದೆ.  ಒಮ್ಮೆ ದೇವೇಂದ್ರನಿಗೆ ಬ್ರಹ್ಮಹದೋಷ ಉಂಟಾಯಿತು.  ಅದರ ನಿವಾರಣೆಗಾಗಿ‌ ದೇವೇಂದ್ರ ಪಾಪ ಪರಿಹಾರಕ್ಕಾಗಿ ಸಂಕಲ್ಪದಲ್ಲಿದ್ದಾಗ, ಸ್ವರ್ಗವನ್ನು ಖಾಲಿ ಬಿಡಲಾಗದೇ ನಹುಷನನ್ನು ಕರೆತಂದು ದೇವೇಂದ್ರನ ಸ್ಥಾನದಲ್ಲಿ ಕುಳ್ಳಿರಿಸಲಾಗುತ್ತದೆ.  ಅಧಿಕಾರ ಎನ್ನುವುದು ಇಂದ್ರನಿಗೇ ಶಾಶ್ವತವಲ್ಲ . ಇನ್ನು ಇಂದ್ರನ ಬದಲು‌ ಕುಳಿತವರಿಗೆ ಶಾಶ್ವತವೇ? ಇಂದಲ್ಲ ನಾಳೆ ದೇವೇಂದ್ರ ವಾಪಸ್ ಬಂದಾಗ ಆ ಸ್ಥಾನವನ್ನು ನಹುಷ ಬಿಟ್ಟು ಕೊಡಲೇಬೇ...

ಅಂಬೆ ಎಂಬ ದುರಂತ ನಾಯಕಿ

Image
  ಮಹಾಭಾರತದಲ್ಲಿ ಪ್ರತಿಯೊಂದು ಪಾತ್ರವೂ ತನ್ನದೇ ಆದ ಮಹತ್ವ ಪಡೆದಿದೆ. ಆದರೆ ಕೆಲವು ಪಾತ್ರಗಳು ನೆನಪಿನಲ್ಲಿ ಉಳಿದರೆ ಇನ್ನು ಕೆಲವು ಪಾತ್ರಗಳು ನೇಪಥ್ಯಕ್ಕೆ ಸರಿಯುತ್ತವೆ. ಹೀಗೆ ನಮಗೇ ಗೊತ್ತಿಲ್ಲದೇ ನಾವು ಮರೆಯುವ ಪಾತ್ರವೆಂದರೆ ಅಂಬೆಯದ್ದು. ಇಡೀ ಮಹಾಭಾರತದ ಆಧಾರ ಸ್ತಂಭವಾದ ಭೀಷ್ಮ ಪಿತಾಮಹನ ಸಾವಿಗೆ ಕಾರಣಳಾದವಳನ್ನು ನಾವು ಪ್ರಾರಂಭದಲ್ಲಿಯೇ ಮರೆತುಬಿಡುತ್ತೇವೆ. ನಂತರ ಆಕೆ ನೆನಪಾಗುವುದು ಕೊನೆಯಲ್ಲಿಯೇ.  ರೋಷ, ಛಲಗಳಲ್ಲಿ ಒಮ್ಮೊಮ್ಮೆ ದ್ರೌಪದಿಯನ್ನೂ ಮೀರಿಸುವಂತೆ ಕಾಣುತ್ತಾಳೆ ಅಂಬೆ .  ಅವಳಿಗೆ ಅತ್ತ ತಾನು ಮೆಚ್ಚಿದ್ದ ಸಾಲ್ವನನ್ನು ಮದುವೆಯಾಗಲು ಆಗಲಿಲ್ಲ, ಇತ್ತ ಭೀಷ್ಮನೂ ತನ್ನನ್ನು ವರಿಸಲು ಒಪ್ಪಲಿಲ್ಲ. ಒಬ್ಬ ಹೆಣ್ಣಾಗಿ ಆಕೆ ಏನು ಮಾಡಬೇಕು? ಅವಳ ಜಾಗದಲ್ಲಿ ನಾವು ಇದ್ದಿದ್ದರೆ ಇದು ಹಣೆಯ ಬರಹ ಎಂದೋ, ದೇವರಿಚ್ಚೆ ಎಂದೋ ಬಂದದ್ದನ್ನು ಸ್ವೀಕರಿಸಿ ಈ ಜನ್ಮ ಮುಗಿಸಿ ಸಾಗುತ್ತಿದ್ದೆವು. ಆದರೆ ಅಂಬೆ ಇಟ್ಟ ಹೆಜ್ಜೆ ಹಿಂದಿಡಲಿಲ್ಲ. ತನಗಾದ ಅನ್ಯಾಯವನ್ನು ಸರಿಪಡಿಸಲು ಏನೆಲ್ಲಾ ಸಾಧ್ಯವೋ ಎಲ್ಲವನ್ನೂ ಮಾಡಿದಳು. ಮನಸ್ಸು ದೃಢವಾಗಿದ್ದರೆ ನಾವು ಅಂದುಕೊಂಡದ್ದನ್ನೆಲ್ಲಾ ಸಾಧಿಸಬಹುದೆಂದು ತೋರಿಸಿದಳು. ಅಂಬೆಯದ್ದು ಹುಟ್ಟಿದಾಗಿಂದಲೂ ಹೋರಾಟದ ಹಾದಿಯೇನಲ್ಲ .  ಆಕೆ ರಾಜಕುಮಾರಿಯಾಗಿ ಸುಖ ಜೀವನ ಕಂಡವಳು. ತಾನು ಪ್ರೀತಿಸಿದ್ದ ಸಾಳ್ವನನ್ನು ಮದುವೆಯಾಗುವುದೇ ಆಕೆಯ ಬಾಳಿನ ಬಹು ದೊಡ್ಡ ಕನಸಾಗಿತ...

ಕುಂತಿ

  ಕುತೂಹಲ ಎನ್ನುವುದು ಮಾನವ ಸಹಜ ಗುಣ. ಎಲ್ಲಾ ವಿಷಯಗಳನ್ನೂ ತಿಳಿಯಬೇಕು ಎಂಬ ಮಾನವನ ಮಹತ್ವಾಕಾಂಕ್ಷೆಯೇ ಇಂದು ಸೃಷ್ಟಿಯ ರಹಸ್ಯವನ್ನು ಭೇದಿಸುವತ್ತ ಸಾಗಿದೆ. ಅದರಲ್ಲಿಯೂ ಗುಟ್ಟಾ ವಿಷಯಗಳನ್ನು ತಿಳಿಯುವುದೆಂದರೆ ಮಾನವರಿಗೆ ಎಲ್ಲಿಲ್ಲದ ಕುತೂಹಲ. ಈ ಕುತೂಹಲ ಅತಿಯಾದರೆ ಆಗುವ ಅನಾಹುತವನ್ನು ಮಹಾಭಾರತದ "ಕುಂತಿ"ಯ ಮೂಲಕ ತಿಳಿಯಬಹುದು. ಕುಂತಿಭೋಜನ ಸಾಕು ಮಗಳಾದ ಕುಂತಿ ಒಂದು ಮಹತ್ತರ ಕಾರ್ಯಕ್ಕಾಗಿ ಜನ್ಮ ತಳೆದವಳು. ಹಸ್ತಿನಾವತಿಯ ಸಿಂಹಾಸನವನ್ನು ಕೌರವರಿಂದ ಮತ್ತೆ ಪಾಂಡುವಿನ ಮಕ್ಕಳಿಗೆ ಸಿಗುವಂತೆ ಮಾಡುವ ಪ್ರಭಾವೀ ಪಾತ್ರ ಅವಳದ್ದು. ಆದರೆ ಅವಳ ಜೀವನ ಅಷ್ಟೇ ದುಃಖದಾಯಕವಾದುದೂ ಹೌದು. ಚಿಕ್ಕವಳಿದ್ದಾಗ ಅವಳ ತಂದೆಯ ಆಸ್ಥಾನಕ್ಕೆ ಬಂದ ದೂರ್ವಾಸ ಮುನಿಯವರನ್ನು ಆದರದಿಂದ ಉಪಚರಿಸಿದ ಪರಿಣಾಮ, ದೂರ್ವಾಸರು ಅವಳ ಸೇವೆಗೆ ಸಂತೃಪ್ತರಾಗಿ ಒಂದು ಮಂತ್ರೋಪದೇಶ ಮಾಡುತ್ತಾರೆ. ಅದರಂತೆ ಅವಳು ತನಗೆ ಇಷ್ಟವಾದ ಐದು ದೇವತೆಗಳ್ನು ಪ್ರತ್ಯಕ್ಷ ಮಾಡಿಕೊಂಡು ಅವರಿಂದ ಮಕ್ಕಳನ್ನು ಪಡೆಯಬಹುದಾಗಿರುತ್ತದೆ. ದೂರ್ವಾಸರು ಅವಳ ಜೀವನದ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಈ ವರಗಳನ್ನು ನೀಡಿರುತ್ತಾರೆ. ಮುಂದೆ ಈ ವರಗಳಿಂದ ಕುಂತಿಗೆ ಬಹಳ ಪ್ರಯೋಜನವಾಗುತ್ತದೆ ನಿಜ. ಆದರೆ ಈ ಮಂತ್ರಗಳನ್ನು ಹೇಳಿದರೆ ತನಗಿಷ್ಟವಾದ ದೇವರು ಪ್ರತ್ಯಕ್ಷನಾಗುತ್ತಾನೆಯೋ ಇಲ್ಲವವೋ ಎಂಬ ಕುತೂಹಲವೇ ಕುಂತಿಯನ್ನು ಆಜೀವಪರ್ಯಂತ ದುಃಖಕ್ಕೆ ದೂಡುತ್ತದೆ. ಹುಡುಗಾಟಿಕೆಯ ವಯಸ್ಸ...

ಹಿಡಿಂಬೆ

  ಸಾಮಾನ್ಯವಾಗಿ ನಮಗೆ ಏನಾದರೂ ತೊಂದರೆಯಾದರೆ ಅದು ಹೊರಗಿನವರಿಂದ ಎಂದು ನಮ್ಮ ಭಾವನೆ. ಹೊರಗಿನವರ್ಯಾರೋ ನಮಗೆ ತೊಂದರೆ ಕೊಟ್ಟಾಗ ನಮ್ಮವರು ನಮ್ಮನ್ನು ರಕ್ಷಿಸುತ್ತಾರೆಂಬ ನಂಬಿಕೆ ನಮಗೆ ಯಾವಾಗಲೂ ಇರುತ್ತದೆ.  ಆದರೆ ನಮ್ಮವರೇ ನಮಗೆ ತೊಂದರೆ ಕೊಟ್ಟಾಗ ನಾವು ಯಾರನ್ನು ನಂಬಬೇಕು. ಆಗ ಅನಿವಾರ್ಯವಾಗಿ ಹೊರಗಿನವರನ್ನೇ ನಮ್ಮ ರಕ್ಷಕರು ಎಂದು ತಿಳಿಯಬೇಕಾಗುತ್ತದೆ.  ಹಿಡಿಂಬೆಗೂ ಈ ಅನುಭವವಾಯ್ತು. ತಾನು, ತನ್ನಣ್ಣ ಇಷ್ಟೇ ಪ್ರಪಂಚ ಅವಳದ್ದು. ಮಾನವರ ವಾಸನೆ ಬಂದಾಗ ಹೋಗಿ ಹಿಡಿದು ತರುವುದು, ತಿನ್ನುವುದು ಇಷ್ಟರಲ್ಲಿಯೇ ಬದುಕು ಸಾಗಿತ್ತು. ಆರಕ್ಕೆ ಏರಿರಲಿಲ್ಲ.. ಮೂರಕ್ಕೆ ಇಳಿದಿರಲಿಲ್ಲ.. ಹಿಡಿಂಬನೇನೋ ಗಂಡಸು ಹೇಗೋ ಬದುಕಿಕೊಂಡಿದ್ದ..  ಆದರೆ ಹಿಡಿಂಬೆ ಹೆಂಗಸು..  ಏಕತಾನತೆಯ ಈ ಬದುಕು ಅವಳಿಗೆ ಚಿಟ್ಟು ಹಿಡಿಸಿತ್ತು.. ಮದುವೆಯಿಲ್ಲ, ಸಂಗಾತಿಯಿಲ್ಲ, ಮಕ್ಕಳಿಲ್ಲ.. ಇದೂ ಒಂದು ಬದುಕಾ ಅಂತ ಅವಳಿಗೆ ಬಹಳ ಕಾಡುತ್ತಿತ್ತು..  ಅದರಲ್ಲೂ ಈ ಸಂಗಾತಿಯ ವ್ಯಾಮೋಹ ಬಹಳ ಅಪಾಯಕಾರಿಯಾದದ್ದು. ಅದನ್ನು ಅರ್ಥ ಮಾಡಿಕೊಳ್ಳುವವರಿಂದಷ್ಟೇ ಅರ್ಥ ಮಾಡಿಕೊಳ್ಳಲು ಸಾಧ್ಯ. ಈ ವ್ಯಾಮೋಹ ಮೂಡಿದವರು ಯಾರೆಂದರೆ ಯಾರನ್ನೂ ಸಹ ಲೆಕ್ಕಿಸೋಲ್ಲ.. ಹೆತ್ತ ತಂದೆ ತಾಯಿಯನ್ನೂ ಸಹ..  ಇಂತಹಾ ಸಂದರ್ಭದಲ್ಲಿ ಆಹಾರಕ್ಕಾಗಿ ಅಲೆಯುತ್ತಿರುವ ಹಿಡಿಂಬೆಗೆ ಭೀಮ ಕಾಣಿಸುತ್ತಾನೆ. ಮರಳುಗಾಡಿನಲ್ಲಿ ಓಯಸಿಸ್ ಸಿಕ್ಕ ಹಾಗೆ ಆಗುತ್ತದೆ ಅವಳಿಗೆ. ವಾರಾ...

ಏಕಲವ್ಯ

  ಮಹಾಭಾರತ ಎಂದರೆ ಎಲ್ಲರೂ ಬರೇ ದಾಯಾದಿಗಳ ದ್ವೇಷದ ಕಥೆ ಅಂತಲೇ ತಿಳಿಯುತ್ತಾರೆ. ಅದರ ಹಿಂದಿನ ಸತ್ಯ ಯಾರಿಗೂ ಬೇಕಿಲ್ಲ. ಏಕಲವ್ಯನ ಬಗ್ಗೆಯೂ ಹಾಗೆಯೇ ತಿಳಿಯುತ್ತಾರೆ.  ದ್ರೋಣರು ಅರ್ಜುನನ ಮೇಲಿನ ಪ್ರೀತಿಯಿಂದ, ತಮ್ಮ ಮೆಚ್ಚಿನ ಶಿಷ್ಯನಾದ ಅರ್ಜುನನನ್ನು ಮಾತ್ರವೇ ಅಪ್ರತಿಮ ಬಿಲ್ಲುಗಾರನನ್ನಾಗಿಸುವ ಏಕಮಾತ್ರ ಕಾರಣದಿಂದಾಗಿಯೇ ಏಕಲವ್ಯನಿಂದ ಅವನ ಹೆಬ್ಬೆರಳನ್ನು ಗುರುದಕ್ಷಿಣೆಯಾಗಿ ಪಡೆದರು ಅಂತಲೇ ತಿಳಿದಿದ್ದಾರೆ.  ನಂತರ ಮಹಾಭಾರತವನ್ನು ತಮ್ಮ ತಮ್ಮ ದೃಷ್ಟಿಕೋನದಿಂಧ ವಿಶ್ಲೇಷಿಸಿದ ಬೇರೆ ಬೇರೆ ಕಾಲಘಟ್ಟದ ಎಲ್ಲ ಲೇಖಕರೂ ಕೂಡ ಈ ವಿಷಯದ ಪ್ರಸ್ತಾಪ ಬಂದಾಗ ಮೂಲದಲ್ಲಿರುವ ಹಾಗೆಯೇ ಬಿಂಬಿಸುತ್ತಾ ಬಂದಿದ್ದಾರೆ.  ಆದರೆ ವಾಸ್ತವ ಬೇರೆಯೇ ಇದೆ.  ಮಹಾಭಾರತದ ಸಮಯದಲ್ಲಿ ಹಸ್ತಿನಾವತಿಯನ್ನು ದುರ್ಯೋಧನ ಆಳುತ್ತಿದ್ದರೆ, ಎಲ್ಲಾ ರೀತಿಯಿಂದಲೂ ಅರ್ಹರಾಗಿದ್ದ ಪಾಂಡವರು ಕಾಡಿನಲ್ಲಿದ್ದರು. ದುರ್ಯೋಧನನ ನಿಯಮದಂತೆ ಪಾಂಡವರು 12 ವರ್ಷಗಳ ವನವಾಸ, 1 ವರ್ಷದ ಅಜ್ಞಾತವಾಸ ಮುಗಿಸಿ ಬಂದರೂ ದುರ್ಯೋಧನ ಅವರಿಗೆ ಪಿಳ್ಳೆ ನೆವ ಹೇಳಿದ ಹೊರತು ಅವರ ನೆಲ ಅವರಿಗೆ ಕೊಡಲಿಲ್ಲ. ಹಾಗಾಗಿ ಇಬ್ಬರೂ ರಾಜಿಯಾಗದೇ ಇಬ್ಬರ ನಡುವೆ ಯುದ್ಧ ನಡೆಯಿತು. ಹಾಗಾದರೆ ಕೇವಲ ನೆಲಕ್ಕಾಗಿ ಯುದ್ಧ ನಡೆಯಿತೇ?  ಖಂಡಿತಾ ಇಲ್ಲ.  ಒಂದು ವೇಳೆ ಪಾಂಡವರು ತಮ್ಮ ನೆಲವನ್ನು ವಾಪಸ್ ಪಡೆಯದಿದ್ದರೆ ಯುಗಾಂತರದವರೆಗೂ ದುರ್ಯೋಧನನ ವಂಶಸ್ಥರೇ ಭರತ ಭೂಮಿಯನ್ನು ...

ಸೈರಂಧ್ರಿ ಎಂಬ ಅಗ್ನಿಕನ್ಯೆ

  ಅವನು ಅವಳನ್ನು ನೋಡಿಯೂ ಸಹ ಇರಲಿಲ್ಲ. ಸೈರಂದ್ರಿಯನ್ನು ದಿಟ್ಟಿಸಿ ನೋಡುವುದಿರಲಿ, ಕಡೆಗಣ್ಣಿನಿಂದ ನೋಡುವುದಕ್ಕೂ ಅವರು ಅರ್ಹರೆಂದು ಕೀಚಕ ಭಾವಿಸಿರಲಿಲ್ಲ.  ವಿರಾಟನ ಅರಮನೆಯಲ್ಲಿ ಬೇಕಾದಷ್ಟು ಜನ ಸೈರಂದ್ರಿಯರಿದ್ದರು. ಎಲ್ಲರೂ ಇದ್ಧದ್ದು ಒಂದೇ ರೀತಿಯಲ್ಲಿ... ಪೋಷಣೆಯಿಲ್ಲದೇ ಸೊರಗಿದ ದೇಹ, ಕಾಂತಿಯಿಲ್ಲದ ನಿಸ್ತೇಜ ಕಣ್ಣುಗಳು, ಚುರುಕುತನವಿಲ್ಲದ ನಡಿಗೆ... ಪಾಪ.. ಅವರು ತಾನೇ ಹೇಗೆ ಖುಷಿಯಾಗಿರುತ್ತಾರೆ? ಬುದ್ಧಿ ಬಂದಾಗಿನಿಂದಲೂ ಅವರು ಈ ಅರಮನೆಯಲ್ಲಿ ಬಂಧಿಗಳಾಗಿದ್ದಾರೆ. ಮಹಾರಾಣಿ ಸುದೇಷ್ಣೆಯು ವಿರಾಟನನ್ನು ಮದುವೆಯಾಗಿ ಈ ಅರಮನೆಗೆ ಕಾಲಿಟ್ಟಾಗ ಅವಳೊಡನೆ ಬಂದ ಸಖಿಯರ ಪಡೆ ಇದು. ಮಹಾರಾಣಿಯ ಸೇವೆಯೊಂದೇ ಅವರ ಜೀವನದ ಪರಮಗುರಿ. ಆದರೆ ಇಂತಹ ನಡೆದಾಡುವ ಶವಗಳಂತಿರುವ ಸೈರಂದ್ರಿಯರು ತನ್ನಕ್ಕನನ್ನು ಮಾತ್ರ ಪ್ರತಿನಿತ್ಯವೂ ಮದುಮಗಳ ಹಾಗೆ ಅದು ಹೇಗೆ ಸಿಂಗರಿಸುತ್ತಾರೋ ಎಂದು ಸೋಜಿಗಗೊಳ್ಳುತ್ತಿದ್ದ ಕೀಚಕ. ಹಾಗೆಯೇ ಅಕ್ಕನಿಗೆ ಅಲಂಕಾರ ಮಾಡಿದ ಹಾಗೆ ತಾವು ಯಾಕೆ ಮಾಡಿಕೊಳ್ಳುವುದಿಲ್ಲವೋ ಅಂತಲೂ ಅಂದುಕೊಳ್ಳುತ್ತಿದ್ದ. ಅನಾಸಕ್ತಿಯೋ.. ಮತ್ತೊಂದೋ..? ಅಥವಾ ಇವರೆಲ್ಲಾ ಸಿಂಗರಿಸಿಕೊಂಡುಬಿಟ್ಟರೆ ತನಗಿಂತಲೂ ಚಂದ ಕಂಡು ಬಿಡುತ್ತಾರೆ ಅಂತ ಅಕ್ಕನಿಗೂ ಹೊಟ್ಟೆಕಿಚ್ಚೋ ಏನೋ? ಒಟ್ಟಿನಲ್ಲಿ ಸುದೇಷ್ಣೆಯ ಅಂತಃಪುರದಲ್ಲಿ ಇರುವಷ್ಟು ಹೊತ್ತು ಅವನು ತನ್ನ ಮತ್ತು ಅಕ್ಕನ ಉಪಸ್ಥಿತಿ‌ ಬಿಟ್ಟರೆ ಬೇರೆ ಯಾರನ್ನೂ ಪರಿಗಣಿಸುತ್ತಲೂ ಇರಲಿಲ್ಲ. ...

ದೇವಭೂಮಿ ಉತ್ತರ ಕುರು

Image
" ಕುರು " ಎಂಬುದು ವೇದಗಳ ಕಾಲದಲ್ಲಿ ಹಿಮಾಲಯದ ಉತ್ತರ ಭಾಗದಲ್ಲಿದ್ದ ಒಂದು ಜನಾಂಗವಾಗಿತ್ತು ಅಂತ ಹೇಳಿದರೆ ಸಾಕು, ಈ ಲೇಖನ ಒಂದೇ ವಾಕ್ಯಕ್ಕೆ ಮುಕ್ತಾಯವಾಗುತ್ತದೆ. ಆದರೆ ಅದಷ್ಟೇ ಅಲ್ಲ... ಉತ್ತರ ಕುರು ಎನ್ನುವುದಕ್ಕೆ ಬೇರೆ ಬೇರೆ ಅರ್ಥಗಳಿವೆ. ಉತ್ತರಕುರು ಎಂದರೆ ದೇವಭೂಮಿ ಎಂದೇ ಕರೆಯಲಾಗುತ್ತದೆ.   ಅಲ್ಲಿ ಯಕ್ಷಯಕ್ಷಿಯರೇ ವಾಸ ಮಾಡುತ್ತಾರೆ ಅಂತ ಹೇಳಲಾಗುತ್ತದೆ. ಪುರಾಣಗಳು ಒಮ್ಮೊಮ್ಮೆ ಅಲ್ಲಿ ಮಹಿಮೆಯುಳ್ಳ ಜನರು ವಾಸಿಸುತ್ತಿದ್ದರು ಅಂತಲೂ ಹೇಳಿದರೆ, ಮತ್ತೊಮ್ಮೆ ನಮ್ಮಂಥಾ ಮನುಷ್ಯರೇ ವಾಸಿಸುತ್ತಿದ್ದರು ಅಂತ ಹೇಳಿದೆ. ಏನೇ ಆದರೂ ಉತ್ತರಕುರು ಒಂದು ದೈವೀ ಕ್ಷೇತ್ರ ಎಂದು ನಂಬುವವರೇ ಹೆಚ್ಚು. ಮಹಾಭಾರತ ಉತ್ತರಕುರುವನ್ನು ' ಗಂಧರ್ವ ಭೂಮಿ ' ಎಂದೇ ಬಣ್ಣಿಸಿದೆ. ಬ್ರಹ್ಮಾಂಡ ಪುರಾಣದ ಪ್ರಕಾರ ಉತ್ತರಕುರುವಿನಲ್ಲಿ ಕುರುವಂಶದ ಮೂಲ ಪುರುಷನಾದ ಪುರೂರವ ಊರ್ವಶಿಯಿಂದಿಗೆ ವಾಸವಿದ್ದ. ಊರ್ವಶಿ ಮಾನವಳಲ್ಲ ಕಾರಣಕ್ಕೆ ಮತ್ತು ಅವಳೊಡನೆ ಪುರೂರವ ಉತ್ತರಕುರುವಿನಲ್ಲಿ ಇದ್ದ ಕಾರಣದಿಂದ, ಅಪ್ಸರೆ ಇದ್ದ ನಾಡನ್ನು ' ಯಕ್ಷಿಯರ ನಾಡು ' ಎಂದು ಕರೆದಿರಬಹುದು ಅಂತ ಊಹಿಸಬಹುದು.   ಯುದ್ಧದಲ್ಲಿ ಸತ್ತ ಮೇಲೆ ಯೋಧರು ಸ್ವರ್ಗಕ್ಕೆ ಹೋಗುತ್ತಾರೆ ಎಂಬ ಮಾತಿದೆ. ಇಲ್ಲಿ ಸ್ವರ್ಗ ಎಂದರೆ ಉತ್ತರಕುರುವಿಗೇ ಹೋಗುತ್ತಾರೆ ಅಂತ ಹೇಳಲಾಗುತ್ತಿತ್ತು. ಹಾಗನ್ನಿಸಲು ಕಾರಣವೇನೆಂದರೆ, ಸ್ವರ್ಗವು ಹಿಮಾಲಯದಿಂದ ಮೇಲೆ ಹತ್ತಿ ಹೋದ...

ಧರ್ಮಯುದ್ಧವೂ ಧರ್ಮರಾಯನೂ

Image
  ಪರಿಸ್ಥಿತಿ ಮನುಷ್ಯನನ್ನು ಹೇಗೆಲ್ಲಾ ಬದಲಾಯಿಸುತ್ತದೆ . ನಾವು ಹೇಳಿರುವ ಮಾತನ್ನು ನಾವೇ ಮರೆಯುವ ಹಾಗೆ ಮಾಡುತ್ತದೆ. ಇನ್ನೊಬ್ಬರನ್ನು ಸಮಾಧಾನಿಸಲು ನಾವು ಹೇಳಿದ ಮಾತನ್ನು ನಮಗೆ ಅವರೇ ತಿರುಗಿಸಿ ಹೇಳುವ ಹಾಗೆ ಮಾಡುತ್ತದೆ . ಧರ್ಮರಾಯನಂಥಾ ಧರ್ಮರಾಯನಿಗೇ ಧರ್ಮ ಸಂಕಟ ಒದಗುವ ಹಾಗೆ ಮಾಡುತ್ತದೆ . ಪ್ರಸಂಗ ಹೀಗಿದೆ: ಕುರುಕ್ಷೇತ್ರ ಯುದ್ಧ ನಡೆಯುತ್ತಿದೆ . ಭೀಮಸೇನ ಒಂದೊಂದು ದಿನ ಯುದ್ಧ ಮುಗಿದಾಗಲೂ ತಾನು ಇಂದು ಇಷ್ಟು ಕೌರವರನ್ನು ಕೊಂದೆ , ಇಷ್ಟು ಜನರನ್ನು ಮುಗಿಸಿದೆ , ಇಷ್ಟು ಕೌರವ ಕುಮಾರರು ಮಾತ್ರ ಬದುಕಿದ್ದಾರೆ ಎಂದು ಎದೆಯುಬ್ಬಿಸಿ ಹೇಳುತ್ತಿರುತ್ತಾನೆ .  ಇದನ್ನು ಕಂಡ ಧರ್ಮರಾಯ ಹಾಗೆಲ್ಲಾ ಯುದ್ಧವನ್ನು ವೈಯುಕ್ತಿಕವಾಗಿ ನೋಡಬಾರದು , ಏಕೆಂದರೆ ಈ ಯುದ್ಧ ನಡೆಯುತ್ತಿರುವುದು ನ್ಯಾಯ , ಧರ್ಮ , ಸತ್ಯದ ಪುನರ್ ಪ್ರತಿಷ್ಠಾಪನೆಗಾಗಿ ಮಾತ್ರ , ಆ ದೃಷ್ಟಿಯಿಂದ ಯುದ್ಧ ಮಾಡು ಎಂದು ತಿಳಿ ಹೇಳುತ್ತಾನೆ . ಭೀಮ ಒಲ್ಲದ ಮನಸ್ಸಿನಿಂದಲೇ ಅಣ್ಣನಿಗೆ ಪ್ರತಿಮಾತನಾಡದೇ ಸುಮ್ಮನಾಗುತ್ತಾನೆ . ಮುಂದೆ ಕುರುಕ್ಷೇತ್ರ ಯುದ್ಧ ಮುಗಿದು ಕುರುವಂಶದವರೆಲ್ಲಾ ನಾಶವಾದ ಮೇಲೆ ಸತ್ತವರಿಗೆಲ್ಲಾ ತರ್ಪಣ ಕೊಡುವಾಗ ತಾಯಿ ಕುಂತಿಯಿಂದ ಕರ್ಣನೇ ಪಾಂಡವರಲ್ಲಿ ಮೊದಲನೆಯವನು ಎಂದು ತಿಳಿದು ಬರುತ್ತದೆ . ಆಗ ಧರ್ಮಜನಲ್ಲಿ ಕಳವಳ ಶುರುವಾಗ...