Posts

Showing posts with the label amba

ಅಂಬೆ ಎಂಬ ದುರಂತ ನಾಯಕಿ

Image
  ಮಹಾಭಾರತದಲ್ಲಿ ಪ್ರತಿಯೊಂದು ಪಾತ್ರವೂ ತನ್ನದೇ ಆದ ಮಹತ್ವ ಪಡೆದಿದೆ. ಆದರೆ ಕೆಲವು ಪಾತ್ರಗಳು ನೆನಪಿನಲ್ಲಿ ಉಳಿದರೆ ಇನ್ನು ಕೆಲವು ಪಾತ್ರಗಳು ನೇಪಥ್ಯಕ್ಕೆ ಸರಿಯುತ್ತವೆ. ಹೀಗೆ ನಮಗೇ ಗೊತ್ತಿಲ್ಲದೇ ನಾವು ಮರೆಯುವ ಪಾತ್ರವೆಂದರೆ ಅಂಬೆಯದ್ದು. ಇಡೀ ಮಹಾಭಾರತದ ಆಧಾರ ಸ್ತಂಭವಾದ ಭೀಷ್ಮ ಪಿತಾಮಹನ ಸಾವಿಗೆ ಕಾರಣಳಾದವಳನ್ನು ನಾವು ಪ್ರಾರಂಭದಲ್ಲಿಯೇ ಮರೆತುಬಿಡುತ್ತೇವೆ. ನಂತರ ಆಕೆ ನೆನಪಾಗುವುದು ಕೊನೆಯಲ್ಲಿಯೇ.  ರೋಷ, ಛಲಗಳಲ್ಲಿ ಒಮ್ಮೊಮ್ಮೆ ದ್ರೌಪದಿಯನ್ನೂ ಮೀರಿಸುವಂತೆ ಕಾಣುತ್ತಾಳೆ ಅಂಬೆ .  ಅವಳಿಗೆ ಅತ್ತ ತಾನು ಮೆಚ್ಚಿದ್ದ ಸಾಲ್ವನನ್ನು ಮದುವೆಯಾಗಲು ಆಗಲಿಲ್ಲ, ಇತ್ತ ಭೀಷ್ಮನೂ ತನ್ನನ್ನು ವರಿಸಲು ಒಪ್ಪಲಿಲ್ಲ. ಒಬ್ಬ ಹೆಣ್ಣಾಗಿ ಆಕೆ ಏನು ಮಾಡಬೇಕು? ಅವಳ ಜಾಗದಲ್ಲಿ ನಾವು ಇದ್ದಿದ್ದರೆ ಇದು ಹಣೆಯ ಬರಹ ಎಂದೋ, ದೇವರಿಚ್ಚೆ ಎಂದೋ ಬಂದದ್ದನ್ನು ಸ್ವೀಕರಿಸಿ ಈ ಜನ್ಮ ಮುಗಿಸಿ ಸಾಗುತ್ತಿದ್ದೆವು. ಆದರೆ ಅಂಬೆ ಇಟ್ಟ ಹೆಜ್ಜೆ ಹಿಂದಿಡಲಿಲ್ಲ. ತನಗಾದ ಅನ್ಯಾಯವನ್ನು ಸರಿಪಡಿಸಲು ಏನೆಲ್ಲಾ ಸಾಧ್ಯವೋ ಎಲ್ಲವನ್ನೂ ಮಾಡಿದಳು. ಮನಸ್ಸು ದೃಢವಾಗಿದ್ದರೆ ನಾವು ಅಂದುಕೊಂಡದ್ದನ್ನೆಲ್ಲಾ ಸಾಧಿಸಬಹುದೆಂದು ತೋರಿಸಿದಳು. ಅಂಬೆಯದ್ದು ಹುಟ್ಟಿದಾಗಿಂದಲೂ ಹೋರಾಟದ ಹಾದಿಯೇನಲ್ಲ .  ಆಕೆ ರಾಜಕುಮಾರಿಯಾಗಿ ಸುಖ ಜೀವನ ಕಂಡವಳು. ತಾನು ಪ್ರೀತಿಸಿದ್ದ ಸಾಳ್ವನನ್ನು ಮದುವೆಯಾಗುವುದೇ ಆಕೆಯ ಬಾಳಿನ ಬಹು ದೊಡ್ಡ ಕನಸಾಗಿತ...