ದೇವಭೂಮಿ ಉತ್ತರ ಕುರು
" ಕುರು " ಎಂಬುದು ವೇದಗಳ ಕಾಲದಲ್ಲಿ ಹಿಮಾಲಯದ ಉತ್ತರ ಭಾಗದಲ್ಲಿದ್ದ ಒಂದು ಜನಾಂಗವಾಗಿತ್ತು ಅಂತ ಹೇಳಿದರೆ ಸಾಕು, ಈ ಲೇಖನ ಒಂದೇ ವಾಕ್ಯಕ್ಕೆ ಮುಕ್ತಾಯವಾಗುತ್ತದೆ. ಆದರೆ ಅದಷ್ಟೇ ಅಲ್ಲ... ಉತ್ತರ ಕುರು ಎನ್ನುವುದಕ್ಕೆ ಬೇರೆ ಬೇರೆ ಅರ್ಥಗಳಿವೆ. ಉತ್ತರಕುರು ಎಂದರೆ ದೇವಭೂಮಿ ಎಂದೇ ಕರೆಯಲಾಗುತ್ತದೆ. ಅಲ್ಲಿ ಯಕ್ಷಯಕ್ಷಿಯರೇ ವಾಸ ಮಾಡುತ್ತಾರೆ ಅಂತ ಹೇಳಲಾಗುತ್ತದೆ. ಪುರಾಣಗಳು ಒಮ್ಮೊಮ್ಮೆ ಅಲ್ಲಿ ಮಹಿಮೆಯುಳ್ಳ ಜನರು ವಾಸಿಸುತ್ತಿದ್ದರು ಅಂತಲೂ ಹೇಳಿದರೆ, ಮತ್ತೊಮ್ಮೆ ನಮ್ಮಂಥಾ ಮನುಷ್ಯರೇ ವಾಸಿಸುತ್ತಿದ್ದರು ಅಂತ ಹೇಳಿದೆ. ಏನೇ ಆದರೂ ಉತ್ತರಕುರು ಒಂದು ದೈವೀ ಕ್ಷೇತ್ರ ಎಂದು ನಂಬುವವರೇ ಹೆಚ್ಚು. ಮಹಾಭಾರತ ಉತ್ತರಕುರುವನ್ನು ' ಗಂಧರ್ವ ಭೂಮಿ ' ಎಂದೇ ಬಣ್ಣಿಸಿದೆ. ಬ್ರಹ್ಮಾಂಡ ಪುರಾಣದ ಪ್ರಕಾರ ಉತ್ತರಕುರುವಿನಲ್ಲಿ ಕುರುವಂಶದ ಮೂಲ ಪುರುಷನಾದ ಪುರೂರವ ಊರ್ವಶಿಯಿಂದಿಗೆ ವಾಸವಿದ್ದ. ಊರ್ವಶಿ ಮಾನವಳಲ್ಲ ಕಾರಣಕ್ಕೆ ಮತ್ತು ಅವಳೊಡನೆ ಪುರೂರವ ಉತ್ತರಕುರುವಿನಲ್ಲಿ ಇದ್ದ ಕಾರಣದಿಂದ, ಅಪ್ಸರೆ ಇದ್ದ ನಾಡನ್ನು ' ಯಕ್ಷಿಯರ ನಾಡು ' ಎಂದು ಕರೆದಿರಬಹುದು ಅಂತ ಊಹಿಸಬಹುದು. ಯುದ್ಧದಲ್ಲಿ ಸತ್ತ ಮೇಲೆ ಯೋಧರು ಸ್ವರ್ಗಕ್ಕೆ ಹೋಗುತ್ತಾರೆ ಎಂಬ ಮಾತಿದೆ. ಇಲ್ಲಿ ಸ್ವರ್ಗ ಎಂದರೆ ಉತ್ತರಕುರುವಿಗೇ ಹೋಗುತ್ತಾರೆ ಅಂತ ಹೇಳಲಾಗುತ್ತಿತ್ತು. ಹಾಗನ್ನಿಸಲು ಕಾರಣವೇನೆಂದರೆ, ಸ್ವರ್ಗವು ಹಿಮಾಲಯದಿಂದ ಮೇಲೆ ಹತ್ತಿ ಹೋದ...