Posts

Showing posts with the label ತ್ರಿಶಂಕು ಸ್ವರ್ಗ

ತ್ರಿಶಂಕು ಸ್ವರ್ಗ

  ಸ್ವರ್ಗ-ನರಕ ಎಂದರೆ ಎಲ್ಲರಿಗೂ ಗೊತ್ತು. ನಾವು ಸತ್ತ ಮೇಲೆ ಸೇರುವ ಜಾಗ ಅದು. ಹಾಗಂತ ಪರ್ಮನೆಂಟಾಗಿ ಅಲ್ಲೇ ಉಳಿಯಲೂ ಸಹ ಆಗುವುದಿಲ್ಲ. ನಾವು ಮಾಡಿದ್ದ ಪಾಪವೋ ,  ಪುಣ್ಯವೋ ಕರಗಿದ ಮೇಲೆ ಮತ್ತೆ ಭೂಮಿ ಮೇಲೆ ಅವತರಿಸಬೇಕು. ಆದರೆ ಸ್ವರ್ಗ ಅಥವಾ ನರಕ ಸೇರಲು ಇರುವ ದಾರಿಯೆಂದರೆ ಮೃತ್ಯು ಒಂದೇ. ಆದರಿಲ್ಲಿ ತ್ರಿಶಂಕು ಎಂಬ ಮಹಾರಾಜನಿಗೆ ಶರೀರ ಸಮೇತವಾಗಿಯೇ ಸ್ವರ್ಗ ಸೇರಬೇಕು ಅಂತಾಸೆಯಾಗುತ್ತದೆ. ಅವನಿಗೆ ತನ್ನ ದೇಹದ ಮೇಲಿದ್ದ ಮೋಹ ಅಂಥಾದ್ದು. ತನ್ನ ದೇಹವನ್ನು ತಾನೇ ಮೋಹಿಸುತ್ತಿದ್ದ ,  ತನ್ನ ಸೌಂದರ್ಯವನ್ನು ನೋಡಿ ತಾನೇ ಹೆಮ್ಮೆ ಪಡುತ್ತಿದ್ದ ತ್ರಿಶಂಕುವಿಗೆ ಒಮ್ಮೆ ತನ್ನ ಈ ಸುಂದರ ಶರೀರದೊಡನೆಯೇ ಸ್ವರ್ಗಕ್ಕೆ ಹೋಗಬೇಕು ಅಂತಾಸೆಯಾಗುತ್ತದೆ.  ಅದೆಂಥಾ ಆಸೆಯೋ ಗೊತ್ತಿಲ್ಲ... ಆದರೆ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಹೋಗುವಾಗಲೇ ನೂರಾರು ಕಟ್ಟಳೆ-ಕಾನೂನು ಇರುವ ನಮಗೆ ಬೇರೊಂದು ಲೋಕ ಪ್ರವೇಶಿಸುವಾಗ ಎದುರಾಗುವುದಿಲ್ಲವೇ ?  ಹಾಗಾಗಿಯೇ ತ್ರಿಶಂಕುವಿನ ಆಸೆಯನ್ನು ಅವನ ಕುಲಗುರುವಾದ ವಸಿಷ್ಠರು ಒಂದೇ ಬಾರಿಗೆ ನಿರಾಕರಿಸಿಬಿಡುತ್ತಾರೆ. ಗುರುಗಳು ಹೇಳಿದ್ದು ತನ್ನ ಒಳ್ಳೆಯದಕ್ಕೆ ಅಂತವನಿಗೆ ಅರ್ಥವಾಗುವುದಿಲ್ಲ. ಏಕೆಂದರೆ ಹಸಿವು-ನೀರಡಿಕೆ-ನಿದ್ರೆಯ ಬಾಧೆ ಇರುವ ಈ ದೇಹವನ್ನು ಪರಮ ಪವಿತ್ರ ಸ್ವರ್ಗಕ್ಕೆ ಒಯ್ಯಬಾರದಲ್ಲವೇ ?  ಸ್ವರ್ಗವೆಂದರೆ ಮನಸ್ಸಿನ ಕಾಮನೆಗಳ ಪೂರ್ತಿಗಾಗಿ ಹೊರತೂ ದೇಹಕಾಮನೆಗಳಿಗಲ್ಲ. ...