Posts

Showing posts with the label Purana Kathe

ಹೆಂಡತಿ ಎಂದರೆ ಹೀಗಿರಬೇಕು! (ದ್ರೌಪದಿಯ ಮನದಾಳದ ಮಾತು)

Image
ನೈವ ಮೇ ಪತಯಸ್ಸಂತಿ ನ...  ಪುತ್ರಾನ ಚ ಬಾಂಧವಃ| ನ ಭ್ರಾತರೋ ನ ಚ ಪಿತಾ...  ನೈವಂ ತ್ವಮ್ ಮಧುಸೂದನ|| ಬದುಕಿನುದ್ದಕ್ಕೂ ಅಪಮಾನಗಳನ್ನು ಎದುರಿಸಿದ, ಜೀವನಪೂರ್ತಿ ಕಣ್ಣೀರಿನಲ್ಲಿ ಕೈ ತೊಳೆದ, ವೀರಾಧಿವೀರರಾದ ಐವರು ಗಂಡಂದಿರು ಇದ್ದರೂ, ಪರಪುರುಷರ ಮುಂದೆ ಅಪಮಾನ ಮಾಡಿಸಿಕೊಂಡ ದ್ರೌಪದಿ, ಕಡೆಗೆ ಹತಾಶಳಾಗಿ ನುಡಿದ ಮಾತಿದು.  " ನನಗೆ ಗಂಡಂದಿರೂ ಇಲ್ಲ.. ಪುತ್ರ-ಬಂಧು- ಬಾಂಧವರೂ ಇಲ್ಲ.. ಸೋದರನೂ ಇಲ್ಲ.. ತಂದೆಯೂ ಇಲ್ಲ.. ಕೊನೆಗೆ ನೀನೂ ಇಲ್ಲ ಕೃಷ್ಣ " ಎಂದು ನುಡಿಯುತ್ತಾಳೆ ಆಕೆ. ದ್ರೌಪದಿ ಆಗಿನ ಕಾಲದ ಸ್ತ್ರೀಯರಲ್ಲಿಯೇ ಅತ್ಯಂತ ಸುಂದರಿಯಾದ ಹೆಣ್ಣು. ಕೊಂಚ ಕಪ್ಪು ವರ್ಣದವಳಾದರೂ, ಬಣ್ಣ ಕಾಣದಷ್ಟು ನಯ-ನಾಜೂಕಿನ ಸುಂದರ ಮೈಮಾಟದವಳು. ವನವಾಸದ ಅವಧಿಯಲ್ಲಿ ಅತ್ಯಂತ ಸರಳ ಉಡುಗೆಯಲ್ಲಿದ್ದರೂ ಕಣ್ಸೆಳೆಯುವಂತಿದ್ದಳು.  ಅಗ್ನಿ ದೇ ವನ‌ ಪುತ್ರಿಯಾದ ದ್ರೌಪದಿಗೆ ಅವಳ 'ಧೈರ್ಯವೇ' ಮುಖದಲ್ಲಿ ತೇಜಸ್ಸು ಹೆಚ್ಚಲು ಕಾರಣವಾಗಿತ್ತು ಎನ್ನಬಹುದು. ಅನ್ಯಾಯಕ್ಕೆ ಬಗ್ಗದ, ಗಂಡಂದಿರ ಅಧರ್ಮವನ್ನು ಖಂಡಿಸುವ, ಅವರನ್ನು ಧರ್ಮಮಾರ್ಗದಲ್ಲಿ ನಡೆಯಲು ಪ್ರಚೋದಿಸುವ, ಹಾಗೆ ನಡೆದಾಗ ಮೆಚ್ಚುವ ದ್ರೌಪದಿಯ ಧೈರ್ಯವನ್ನು ನಾವೆಲ್ಲರೂ ಮೆಚ್ಚಲೇಬೇಕು. ದ್ರೌಪದಿ ವನವಾಸದ ಅವಧಿಯಲ್ಲಿ ಕಾಡು, ಮೇಡುಗಳಲ್ಲಿ ಅಲೆಯುವಾಗ ಸಿಕ್ಕ ನದಿ-ಜಲಪಾತದಲ್ಲಿ ಸ್ನಾನ ಮಾಡುತ್ತಿದ್ದರೆ, ಒದ್ದೆ ಬಟ್ಟೆಯಲ್ಲಿ ಎದ್ದು ಕಾಣುವ ಆಕೆಯ ಅಂಗಾಂಗ ಸೌಂದರ್ಯಕ್ಕೆ ಮಾರು ಹೋದ ...

ನಹುಷ

Image
ಯಾರೇ ಆಗಲಿ ಅಧಿಕಾರದಲ್ಲಿದ್ದಾಗ ಅದರ ಮಿತಿಯರಿತು ಜವಾಬ್ದಾರಿ ವಹಿಸಿದರೆ ಕ್ಷೇಮ. ಇಲ್ಲದಿದ್ದರೆ ಅದೇ ಅಧಿಕಾರದಿಂದಲೇ ವ್ಯಕ್ತಿಯ ವ್ಯಕ್ತಿತ್ವ ಪಾತಾಳ ತಲಪುತ್ತದೆ.  ಆದರೆ ನಮ್ಮ ಸುತ್ತಮುತ್ತ ನಿಜವಾಗಿ ನಡೆಯುತ್ತಿರುವುದೇನೆಂದರೆ ಅಧಿಕಾರ ಸಿಕ್ಕ ತಕ್ಷಣ ಜನರು ಎಲ್ಲವನ್ನೂ ಮರೆತು ತಮ್ಮ ಶತೃಗಳ ದಮನಕ್ಕೆ ನಿಂತುಬಿಡುತ್ತಾರೆ. ಅಧಿಕಾರ ಎನ್ನುವುದು ಎಂದಿಗೂ ಶಾಶ್ವತವಲ್ಲ. ಇಂದ್ರನಾದರೂ ಚಂದ್ರನಾದರೂ ಒಂದಲ್ಲ ಒಂದು ದಿನ ಅಧಿಕಾರದಿಂದ ಕೆಳಗೆ ಇಳಿಯಲೇಬೇಕು.  ಅದಕ್ಕಾಗಿ ಅಧಿಕಾರ ಸಿಕ್ಕಾಗ ಆದಷ್ಟೂ ಜನಪರ ಕೆಲಸ ಮಾಡಿದರೆ ಅಧಿಕಾರದಿಂದ ಇಳಿದ ಮೇಲೆಯೂ ಅದೇ ಗೌರವ ಉಳಿಸಿಕೊಳ್ಳಲು ಸಾಧ್ಯ. ಇಲ್ಲದಿದ್ದರೆ ನಹುಷನಂತೆ ಶಾಪಗ್ರಸ್ಥರಾಗಿ ಶಾಪವಿಮೋಚನೆಗಾಗಿ ಕಾಯಬೇಕಾಗುತ್ತದೆ.  ತಾನು ಕುಳಿತ ಸ್ಥಾನ ತನ್ನದಲ್ಲದಿದ್ದರೂ ಸಹ ಮನಸ್ಸಿಗೆ ಬಂದಂತೆ ಅಧಿಕಾರ ಚಲಾಯಿಸಿ ಪೇಚಿಗೆ ಸಿಲುಕಿಕೊಂಡ ನಹುಷನ ಕಥೆ ಹೀಗಿದೆ.  ಒಮ್ಮೆ ದೇವೇಂದ್ರನಿಗೆ ಬ್ರಹ್ಮಹದೋಷ ಉಂಟಾಯಿತು.  ಅದರ ನಿವಾರಣೆಗಾಗಿ‌ ದೇವೇಂದ್ರ ಪಾಪ ಪರಿಹಾರಕ್ಕಾಗಿ ಸಂಕಲ್ಪದಲ್ಲಿದ್ದಾಗ, ಸ್ವರ್ಗವನ್ನು ಖಾಲಿ ಬಿಡಲಾಗದೇ ನಹುಷನನ್ನು ಕರೆತಂದು ದೇವೇಂದ್ರನ ಸ್ಥಾನದಲ್ಲಿ ಕುಳ್ಳಿರಿಸಲಾಗುತ್ತದೆ.  ಅಧಿಕಾರ ಎನ್ನುವುದು ಇಂದ್ರನಿಗೇ ಶಾಶ್ವತವಲ್ಲ . ಇನ್ನು ಇಂದ್ರನ ಬದಲು‌ ಕುಳಿತವರಿಗೆ ಶಾಶ್ವತವೇ? ಇಂದಲ್ಲ ನಾಳೆ ದೇವೇಂದ್ರ ವಾಪಸ್ ಬಂದಾಗ ಆ ಸ್ಥಾನವನ್ನು ನಹುಷ ಬಿಟ್ಟು ಕೊಡಲೇಬೇ...

ಪುರೂರವನ‌ ವಿಫಲ ಪ್ರೇಮ

Image
ಪ್ರೀತಿಯೇ ಬೇರೆ. ಪ್ರೇಮವೇ ಬೇರೆ. ಜನರು ಎರಡನ್ನೂ ಒಂದೇ ಎಂದು ತಿಳಿದುಕೊಂಡು ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಾರೆ. ಪ್ರೀತಿ ಹೃದಯದಿಂದ ಹುಟ್ಟುವ ಭಾವನೆಯಾದರೆ, ಪ್ರೇಮ ಕೇವಲ ಸ್ಪರ್ಷ ಮಾತ್ರದಿಂದ ಹುಟ್ಟುತ್ತದೆ. ಪರಸ್ಪರ ಪ್ರೇಮಿಸುವವರ ನಡುವೆ ಪ್ರೀತಿಯೂ ಇದ್ದರೆ ಆ ಸಂಬಂಧ ಕೊನೆವರೆಗೂ ಉಳಿದುಕೊಳ್ಳುತ್ತದೆ. ಇಲ್ಲದಿದ್ದರೆ ಇಬ್ಬರ ವಾಂಛೆಯೂ ತೀರಿದ ಬಳಿಕ ಪ್ರೇಮ ಮಾಯವಾಗುತ್ತದೆ.  ಇದು ತಿಳಿಯದ ಜನರು ಪ್ರೀತಿ ಮತ್ತು ಪ್ರೇಮದ ನಡುವಿನ ವ್ಯತ್ಯಾಸ ಗೊತ್ತಾಗದೇ ಪ್ರೇಮಿಸಿ ನಂತರ ಪರಸ್ಪರರನ್ನು ತೊರೆಯುತ್ತಲೇ ಇದ್ದಾರೆ. ಹಾಗೆಯೇ ಅಪ್ಸರೆಯಾದ ಊರ್ವಶಿ ಮತ್ತು ಪೂರೂರವನ ನಡುವೆ ಇದ್ದದ್ದು ಪ್ರೇಮವೇ ಹೊರತು ಪ್ರೀತಿಯಲ್ಲ.  ಹಾಗಾಗಿ ಬಹು ಬೇಗ ಈ ಸಂಬಂಧ ಅಂತ್ಯ ಕಾಣುತ್ತದೆ.  ಊರ್ವಶಿ ಮೊದಲೇ ಅಪ್ಸರೆ.  ಅಪ್ಸರೆಯರಿಗೆ ವೈವಾಹಿಕ ಬಂಧನವಾಗಲೀ ಅಥವಾ ಇಷ್ಟು ಜನರನ್ನೇ ಹೊಂದಬೇಕು ಎಂಬ ನಿರ್ಬಂಧವಾಗಲೀ ಇಲ್ಲ. ಆದರೆ ಪುರೂರವನಿಗೆ ಒಬ್ಬ ಸುಂದರ ಸ್ತ್ರೀ ಸಿಕ್ಕರೆ ಸಾಕಿತ್ತು. ಆಕೆ ತನ್ನ ಸಂಗಾತಿಯಾಗಲು ಒಪ್ಪಿದರೆ ಆಕೆಯನ್ನು ಜನ್ಮವಿಡೀ ರಾಣಿಯಂತೆ ಮೆರೆಸಲು ಆತ ಸಿದ್ಧನಿದ್ದ.  ಅದರಂತೆ ಆಕೆ ತನ್ನನ್ನು ಒಪ್ಪಿದ್ದೇ ತನ್ನ ಪುಣ್ಯ ಎಂದು ಸಂತಸದಿಂದ ತೇಲಾಡಿದ. ದೇವಲೋಕದ ಹೆಣ್ಣು ಮನುಷ್ಯನಾದ ತನ್ನೊಡನೆ ಜೀವನಪೂರ್ತಿ ಇರಲು ಸಾಧ್ಯವೇ ಅಂತ ಆತ ಯೋಚಿಸಲಿಲ್ಲ ಅಥವಾ ಬೇಕೆಂದೇ ನಿರ್ಲಕ್ಷಿಸಿದ. ನಂತರ ಆ ನಿರ್ಲಕ್ಷ್ಯಕ್ಕೆ ಸರಿಯಾದ ...

ಅಂಬೆ ಎಂಬ ದುರಂತ ನಾಯಕಿ

Image
  ಮಹಾಭಾರತದಲ್ಲಿ ಪ್ರತಿಯೊಂದು ಪಾತ್ರವೂ ತನ್ನದೇ ಆದ ಮಹತ್ವ ಪಡೆದಿದೆ. ಆದರೆ ಕೆಲವು ಪಾತ್ರಗಳು ನೆನಪಿನಲ್ಲಿ ಉಳಿದರೆ ಇನ್ನು ಕೆಲವು ಪಾತ್ರಗಳು ನೇಪಥ್ಯಕ್ಕೆ ಸರಿಯುತ್ತವೆ. ಹೀಗೆ ನಮಗೇ ಗೊತ್ತಿಲ್ಲದೇ ನಾವು ಮರೆಯುವ ಪಾತ್ರವೆಂದರೆ ಅಂಬೆಯದ್ದು. ಇಡೀ ಮಹಾಭಾರತದ ಆಧಾರ ಸ್ತಂಭವಾದ ಭೀಷ್ಮ ಪಿತಾಮಹನ ಸಾವಿಗೆ ಕಾರಣಳಾದವಳನ್ನು ನಾವು ಪ್ರಾರಂಭದಲ್ಲಿಯೇ ಮರೆತುಬಿಡುತ್ತೇವೆ. ನಂತರ ಆಕೆ ನೆನಪಾಗುವುದು ಕೊನೆಯಲ್ಲಿಯೇ.  ರೋಷ, ಛಲಗಳಲ್ಲಿ ಒಮ್ಮೊಮ್ಮೆ ದ್ರೌಪದಿಯನ್ನೂ ಮೀರಿಸುವಂತೆ ಕಾಣುತ್ತಾಳೆ ಅಂಬೆ .  ಅವಳಿಗೆ ಅತ್ತ ತಾನು ಮೆಚ್ಚಿದ್ದ ಸಾಲ್ವನನ್ನು ಮದುವೆಯಾಗಲು ಆಗಲಿಲ್ಲ, ಇತ್ತ ಭೀಷ್ಮನೂ ತನ್ನನ್ನು ವರಿಸಲು ಒಪ್ಪಲಿಲ್ಲ. ಒಬ್ಬ ಹೆಣ್ಣಾಗಿ ಆಕೆ ಏನು ಮಾಡಬೇಕು? ಅವಳ ಜಾಗದಲ್ಲಿ ನಾವು ಇದ್ದಿದ್ದರೆ ಇದು ಹಣೆಯ ಬರಹ ಎಂದೋ, ದೇವರಿಚ್ಚೆ ಎಂದೋ ಬಂದದ್ದನ್ನು ಸ್ವೀಕರಿಸಿ ಈ ಜನ್ಮ ಮುಗಿಸಿ ಸಾಗುತ್ತಿದ್ದೆವು. ಆದರೆ ಅಂಬೆ ಇಟ್ಟ ಹೆಜ್ಜೆ ಹಿಂದಿಡಲಿಲ್ಲ. ತನಗಾದ ಅನ್ಯಾಯವನ್ನು ಸರಿಪಡಿಸಲು ಏನೆಲ್ಲಾ ಸಾಧ್ಯವೋ ಎಲ್ಲವನ್ನೂ ಮಾಡಿದಳು. ಮನಸ್ಸು ದೃಢವಾಗಿದ್ದರೆ ನಾವು ಅಂದುಕೊಂಡದ್ದನ್ನೆಲ್ಲಾ ಸಾಧಿಸಬಹುದೆಂದು ತೋರಿಸಿದಳು. ಅಂಬೆಯದ್ದು ಹುಟ್ಟಿದಾಗಿಂದಲೂ ಹೋರಾಟದ ಹಾದಿಯೇನಲ್ಲ .  ಆಕೆ ರಾಜಕುಮಾರಿಯಾಗಿ ಸುಖ ಜೀವನ ಕಂಡವಳು. ತಾನು ಪ್ರೀತಿಸಿದ್ದ ಸಾಳ್ವನನ್ನು ಮದುವೆಯಾಗುವುದೇ ಆಕೆಯ ಬಾಳಿನ ಬಹು ದೊಡ್ಡ ಕನಸಾಗಿತ...

ಸ್ವಯಂವರ ಪದ್ಧತಿ

  ಪುರಾಣಗಳಲ್ಲಿ ನಾವು ಸಾಮಾನ್ಯವಾಗಿ ಕಾಣಬಹುದಾದದ್ದು ರಾಜಕುಮಾರಿಯರ ಸ್ವಯಂವರಗಳನ್ನು. ಅಂದರೆ ಆಗಿನ ಕಾಲದಲ್ಲಿ ಹೆಣ್ಣುಮಕ್ಕಳು ತನಗೆ ಬೇಕಾದ ಮತ್ತು ತನಗೊಪ್ಪುವ ಪುರುಷನನ್ನು ವಿವಾಹಕ್ಕಾಗಿ ತಾವೇ ಆರಿಸಿಕೊಳ್ಳಬಹುದಾಗಿತ್ತು.  ಈ ಪದ್ಧತಿ ಎಷ್ಟು ಚಂದ ಇತ್ತು ಅನ್ಸುತ್ತೆ ಅಲ್ವಾ?  ಆದರೆ ಅದು ಕೇವಲ ರಾಜಕುಮಾರರ ಅಂದ-ಚಂದಗಳನ್ನು ನೋಡಿ ಆರಿಸುವ ಕಾರ್ಯಕ್ರಮ ಆಗಿರಲಿಲ್ಲ... ಬದಲಿಗೆ ಸ್ವಯಂವರಗಳಲ್ಲಿ ಸ್ಫರ್ಧೆಗಳು ಸಹ ಇರುತ್ತಿದ್ದವು. ಏಕೆಂದರೆ ಇಲ್ಲಿ ಆಯ್ಕೆಯಾಗುವವನು ಮುಂದೆ ರಾಜ್ಯವನ್ನು ಆಳಬೇಕಾದ್ದರಿಂದ, ಆತ ಅಂದ-ಚಂದ ಇರುವುದರ ಜೊತೆಗೇ ಬುದ್ಧಿವಂತ ಮತ್ತು ಸಾಹಸಿಯೂ ಆಗಿರಬೇಕಾದದ್ದು ಅವಶ್ಯಕವಾಗಿತ್ತು. ಆ ಸ್ಫರ್ಧೆಯಲ್ಲಿ ಗೆದ್ದವನಿಗೆ ರಾಜಕುಮಾರಿ ವಿಜಯದ ಮಾಲೆ ಹಾಕುತ್ತಿದ್ದಳು.            ಅಂತಹದ್ದೇ ಒಂದು ಸ್ವಯಂವರ ದ್ರೌಪದಿಯದ್ದು.            ಅವಳು ಹುಟ್ಟಿದ್ದೇ ಅರ್ಜುನನಿಗಾಗಿ. ಈ ಸ್ವಯಂವರವೂ ಸಹ ಅವನಿಗಾಗಿಯೇ. ಏಕೆಂದರೆ ಪಾಂಡವರು ಅರಗಿನ ಮನೆಯಲ್ಲಿ ಸುಟ್ಟು ಹೋಗಿದ್ದಾರೆ ಅಂತಲೇ ಎಲ್ಲರೂ ತಿಳಿದಿದ್ದರು. ಆದರೆ ದ್ರುಪದ ಮಾತ್ರ ಇದನ್ನು ನಂಬಿರಲಿಲ್ಲ. ಅತ್ಯಂತ ಸಾಹಸಿಗಳಾದ ಪಾಂಡವರು ಅರಗಿನ ಮನೆಯಿಂದ ತಪ್ಪಿಸಿಕೊಂಡು ಬದುಕಿದ್ದಾರೆ ಎಂದೇ ಅವನ ನಂಬಿಕೆ.  ಆ ಕಾರಣದಿಂದಲೇ ತನ್ನ ಮಗಳ ಸ್ವಯಂವರದ ಜೊತೆಗೆ ಒಂದು ಬಿಲ್ವಿದ್ಯೆಯ ಸ್ಫರ್ಧ...

ಕುಂತಿ

  ಕುತೂಹಲ ಎನ್ನುವುದು ಮಾನವ ಸಹಜ ಗುಣ. ಎಲ್ಲಾ ವಿಷಯಗಳನ್ನೂ ತಿಳಿಯಬೇಕು ಎಂಬ ಮಾನವನ ಮಹತ್ವಾಕಾಂಕ್ಷೆಯೇ ಇಂದು ಸೃಷ್ಟಿಯ ರಹಸ್ಯವನ್ನು ಭೇದಿಸುವತ್ತ ಸಾಗಿದೆ. ಅದರಲ್ಲಿಯೂ ಗುಟ್ಟಾ ವಿಷಯಗಳನ್ನು ತಿಳಿಯುವುದೆಂದರೆ ಮಾನವರಿಗೆ ಎಲ್ಲಿಲ್ಲದ ಕುತೂಹಲ. ಈ ಕುತೂಹಲ ಅತಿಯಾದರೆ ಆಗುವ ಅನಾಹುತವನ್ನು ಮಹಾಭಾರತದ "ಕುಂತಿ"ಯ ಮೂಲಕ ತಿಳಿಯಬಹುದು. ಕುಂತಿಭೋಜನ ಸಾಕು ಮಗಳಾದ ಕುಂತಿ ಒಂದು ಮಹತ್ತರ ಕಾರ್ಯಕ್ಕಾಗಿ ಜನ್ಮ ತಳೆದವಳು. ಹಸ್ತಿನಾವತಿಯ ಸಿಂಹಾಸನವನ್ನು ಕೌರವರಿಂದ ಮತ್ತೆ ಪಾಂಡುವಿನ ಮಕ್ಕಳಿಗೆ ಸಿಗುವಂತೆ ಮಾಡುವ ಪ್ರಭಾವೀ ಪಾತ್ರ ಅವಳದ್ದು. ಆದರೆ ಅವಳ ಜೀವನ ಅಷ್ಟೇ ದುಃಖದಾಯಕವಾದುದೂ ಹೌದು. ಚಿಕ್ಕವಳಿದ್ದಾಗ ಅವಳ ತಂದೆಯ ಆಸ್ಥಾನಕ್ಕೆ ಬಂದ ದೂರ್ವಾಸ ಮುನಿಯವರನ್ನು ಆದರದಿಂದ ಉಪಚರಿಸಿದ ಪರಿಣಾಮ, ದೂರ್ವಾಸರು ಅವಳ ಸೇವೆಗೆ ಸಂತೃಪ್ತರಾಗಿ ಒಂದು ಮಂತ್ರೋಪದೇಶ ಮಾಡುತ್ತಾರೆ. ಅದರಂತೆ ಅವಳು ತನಗೆ ಇಷ್ಟವಾದ ಐದು ದೇವತೆಗಳ್ನು ಪ್ರತ್ಯಕ್ಷ ಮಾಡಿಕೊಂಡು ಅವರಿಂದ ಮಕ್ಕಳನ್ನು ಪಡೆಯಬಹುದಾಗಿರುತ್ತದೆ. ದೂರ್ವಾಸರು ಅವಳ ಜೀವನದ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಈ ವರಗಳನ್ನು ನೀಡಿರುತ್ತಾರೆ. ಮುಂದೆ ಈ ವರಗಳಿಂದ ಕುಂತಿಗೆ ಬಹಳ ಪ್ರಯೋಜನವಾಗುತ್ತದೆ ನಿಜ. ಆದರೆ ಈ ಮಂತ್ರಗಳನ್ನು ಹೇಳಿದರೆ ತನಗಿಷ್ಟವಾದ ದೇವರು ಪ್ರತ್ಯಕ್ಷನಾಗುತ್ತಾನೆಯೋ ಇಲ್ಲವವೋ ಎಂಬ ಕುತೂಹಲವೇ ಕುಂತಿಯನ್ನು ಆಜೀವಪರ್ಯಂತ ದುಃಖಕ್ಕೆ ದೂಡುತ್ತದೆ. ಹುಡುಗಾಟಿಕೆಯ ವಯಸ್ಸ...

ಋಷ್ಯಶೃಂಗನ ಬ್ರಹ್ಮಚರ್ಯ

  ಅದು ಅಂಗರಾಜ್ಯ. ಸುಭಿಕ್ಷತೆಯಿಂದ ತುಂಬಿ ತುಳುಕುವ ದೇಶವದು. ರಾಜ ರೋಮಪಾದನ ಆಡಳಿತದಲ್ಲಿ ಪ್ರಜೆಗಳಿಗೆ ಕೊರತೆ ಎನ್ನುವುದೇ ಇರಲಿಲ್ಲ. ಇಡೀ ರಾಜ್ಯದಲ್ಲಿ ಕಾಲಕಾಲಕ್ಕೆ ಮಳೆ ಬೀಳುತ್ತಾ, ಬಂಗಾರದಂತಹ ಬೆಳೆ ಬೆಳೆಯುತ್ತಾ ಪ್ರಜೆಗಳು ಸಂಪ್ರೀತರಾಗಿದ್ದರು.  ಲೋಪವೇ ಇಲ್ಲದ ಈ ರಾಜ್ಯ ಸ್ವರ್ಗಕ್ಕೂ ಕಿಚ್ಚು ಹಚ್ಚುವಂತಿತ್ತು. ಅದೇ ತಪ್ಪಾಯಿತು. ದೇವೇಂದ್ರ ಇದರ ಸುಭಿಕ್ಷ ನೋಡಿ ಕಿಡಿಗಣ್ಣಾದ. ಹೀಗಾದರೆ ಜನರು ತನ್ನನ್ನು ಮರೆತೇ ಬಿಡುತ್ತಾರೆಂದು ಮೋಡಗಳ ಬಳಿ ಅಂಗರಾಜ್ಯದ ಸನಿಹವೂ ಸುಳಿಯಬಾರದೆಂದು ಆಜ್ಞಾಪಿಸಿದ. ಮೋಡಗಳು ಮಳೆ ಸುರಿಸದೇ ಹಿಂದುಳಿದವು.  ಹಸಿರಿನಿಂದ ತುಂಬಿ ತುಳುಕುತ್ತಿದ್ದ ರಾಜ್ಯವೀಗ ಮಳೆಯಿಲ್ಲದೇ ಬರಡಾಯ್ತು. ಸುಭಿಕ್ಷವಿದ್ದಾಗ ಶೇಖರಿಸಿಟ್ಟಿದ್ದ ಧಾನ್ಯವೆಲ್ಲಾ ಖರ್ಚಾದರೂ ಸಹ ಮಳೆ ಬರುವ ಸೂಚನೆ ಕಾಣಲಿಲ್ಲ. ಕೆರೆ ಕಟ್ಟೆಗಳೆಲ್ಲಾ ಖಾಲಿಯಾದವು. ಕುಡಿಯಲೂ ಸಹ ನೀರು ಉಳಿದಿರಲಿಲ್ಲ.  ಹೀಗೇ ಮುಂದುವರೆದರೆ ತಮಗೆ ಉಳಿಗಾಲವಿಲ್ಲ ಅಂತ ಅರಿವಾಯ್ತು ರೋಮಪಾದನಿಗೆ. ಆದರೆ ಮುನಿಸಿಕೊಂಡಿರುವ ದೇವೇಂದ್ರನನ್ನು ಒಲಿಸುವುದು ಅವನಿಂದ ಸಾಧ್ಯವಿರಲಿಲ್ಲ.  ಒಂದು ದಿನ ಅರಮನೆಯ ಮುಂದಿನಿಂದ ಸಾಗುತ್ತಿದ್ದ ಸಾಧು ಒಬ್ಬರನ್ನು ಸತ್ಕರಿಸಿ ಮಹಾರಾಜ ತನ್ನ ಸ್ಥಿತಿ ಅರುಹಿದ. ತನ್ನ ಪ್ರಾಣ ಹೋದರೂ ಚಿಂತೆಯಿಲ್ಲ, ತನ್ನ ರಾಜ್ಯ ಮೊದಲಿನಂತೆ ಸುಭಿಕ್ಷವಾಗಲು ಏನು ಮಾಡಬೇಕು ಅಂತ ಕೇಳಿದ.  ಆ ಸನ್ಯಾಸಿ ಕ್ಷಣ ಕಾಲ ಕಣ್ಮುಚ್ಚಿ ಯೋಚ...

ಸರಸ್ವತಿ ನದಿ

  ಸರಸ್ವತಿ ಋಗ್ವೇದದ ಕಾಲದ ನದಿಯಾಗಿದೆ. ವೇದಕಾಲದ ನದಿಗಳಲ್ಲೆಲ್ಲಾ ಅತ್ಯಂತ ಶ್ರೇಷ್ಠ ನದಿ ಎಂದರೆ ಸರಸ್ವತಿ ನದಿ.  ವೇದಕಾಲದಲ್ಲಿ ಸರಸ್ವತಿ ನದಿಯು ಯಮುನಾ ಮತ್ತು ಸಟ್ಲೆಜ್ ನದಿಗಳ ನಡುವೆ ಹರಿಯುತ್ತಿತ್ತು ಎಂಬ ಚಿತ್ರಣ ಸಿಕ್ಕರೆ, ವೇದಕಾಲದ ನಂತರದ ಕಾಲದಲ್ಲಿ ಅಂದರೆ ಜೈಮಿನಿಯ ಭಾರತ, ಮಹಾಭಾರತ ಮುಂತಾದ ಗ್ರಂಥಗಳಲ್ಲಿ ಸರಸ್ವತಿ ನದಿಯು ಮರುಭೂಮಿಯಲ್ಲಿ ಒಣಗಿತು ಎಂಬ ವಿವರವಿದೆ.  ಅಂದರೆ ಸರಸ್ವತಿ ನದಿಯನ್ನು ಇಂದಿನ ಚೋಲಿಸ್ತಾನ್ ಮರುಭೂಮಿಯ ಮಧ್ಯೆ ಹರಿಯುತ್ತಿದ್ದ ಹಕ್ರಾ-ಘಗ್ಗರ್ ನದಿಯ ಬತ್ತಿದ ಪಾತ್ರದೊಂದಿಗೆ ಸಮೀಕರಿಸಲಾಗಿದೆ.   ಮೊದಲು ದೇವತೆಯಾದ ಮಾತೆ ಸರಸ್ವತಿಯೇ ನದೀರೂಪ ತಾಳಿ ಇಲ್ಲಿ ಆವೀರ್ಭವಿಸಿದ್ದಾಳೆ ಎಂದು ತಿಳಿಯಲಾಗಿತ್ತು. ನಂತರ ನದಿಯು ಮಾತೆ ಸರಸ್ವತಿಯ ಜೊತೆಗಿನ ಸಂಬಂಧ ಕಡಿದುಕೊಂಡು ಬೇರೆಯದೇ ರೀತಿಯಲ್ಲಿ ಪ್ರಸಿದ್ಧವಾದುದೂ ಅಲ್ಲದೇ ಬೇರೆ ಅರ್ಥವನ್ನೂ ಸಹ ಪಡೆದುಕೊಂಡಿತು.   ** ಸಂಸ್ಕೃತದಲ್ಲಿ 'ಸರಸ್ಸು' ಎಂದರೆ ನೀರಿನ ಹೊಂಡ ಅಂತರ್ಥ.  ** ಸರಸ್ಸಿನ ಸ್ತ್ರೀ ರೂಪದ ಅರ್ಥವೆಂದರೆ 'ಹರಿಯದೇ ನಿಂತ ನೀರು' ಅಥವಾ 'ಕೆಸರಿನ ನೆಲ' ಎಂದಾಗುತ್ತದೆ.  ** ಋಗ್ವೇದದ ಸರಸ್ವತಿ ಪದ  ಬಹುಶಃ 'ಹರಿಯದೇ ನಿಂತ ನೀರು' ಎಂಬರ್ಥ ಕೊಡುತ್ತದೆ ಅಂತ ವಿದ್ವಾಂಸರು ಊಹಿಸಿಕೊಂಡಿದ್ದಾರೆ.           ಸರಸ್ವತಿ ಸಪ್ತ ಮಹಾನದಿಗಳಲ್ಲಿ ಒಂದು.   ಇದು ಗುಪ್ತಗಾಮ...

ತ್ರಿಶಂಕು ಸ್ವರ್ಗ

  ಸ್ವರ್ಗ-ನರಕ ಎಂದರೆ ಎಲ್ಲರಿಗೂ ಗೊತ್ತು. ನಾವು ಸತ್ತ ಮೇಲೆ ಸೇರುವ ಜಾಗ ಅದು. ಹಾಗಂತ ಪರ್ಮನೆಂಟಾಗಿ ಅಲ್ಲೇ ಉಳಿಯಲೂ ಸಹ ಆಗುವುದಿಲ್ಲ. ನಾವು ಮಾಡಿದ್ದ ಪಾಪವೋ ,  ಪುಣ್ಯವೋ ಕರಗಿದ ಮೇಲೆ ಮತ್ತೆ ಭೂಮಿ ಮೇಲೆ ಅವತರಿಸಬೇಕು. ಆದರೆ ಸ್ವರ್ಗ ಅಥವಾ ನರಕ ಸೇರಲು ಇರುವ ದಾರಿಯೆಂದರೆ ಮೃತ್ಯು ಒಂದೇ. ಆದರಿಲ್ಲಿ ತ್ರಿಶಂಕು ಎಂಬ ಮಹಾರಾಜನಿಗೆ ಶರೀರ ಸಮೇತವಾಗಿಯೇ ಸ್ವರ್ಗ ಸೇರಬೇಕು ಅಂತಾಸೆಯಾಗುತ್ತದೆ. ಅವನಿಗೆ ತನ್ನ ದೇಹದ ಮೇಲಿದ್ದ ಮೋಹ ಅಂಥಾದ್ದು. ತನ್ನ ದೇಹವನ್ನು ತಾನೇ ಮೋಹಿಸುತ್ತಿದ್ದ ,  ತನ್ನ ಸೌಂದರ್ಯವನ್ನು ನೋಡಿ ತಾನೇ ಹೆಮ್ಮೆ ಪಡುತ್ತಿದ್ದ ತ್ರಿಶಂಕುವಿಗೆ ಒಮ್ಮೆ ತನ್ನ ಈ ಸುಂದರ ಶರೀರದೊಡನೆಯೇ ಸ್ವರ್ಗಕ್ಕೆ ಹೋಗಬೇಕು ಅಂತಾಸೆಯಾಗುತ್ತದೆ.  ಅದೆಂಥಾ ಆಸೆಯೋ ಗೊತ್ತಿಲ್ಲ... ಆದರೆ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಹೋಗುವಾಗಲೇ ನೂರಾರು ಕಟ್ಟಳೆ-ಕಾನೂನು ಇರುವ ನಮಗೆ ಬೇರೊಂದು ಲೋಕ ಪ್ರವೇಶಿಸುವಾಗ ಎದುರಾಗುವುದಿಲ್ಲವೇ ?  ಹಾಗಾಗಿಯೇ ತ್ರಿಶಂಕುವಿನ ಆಸೆಯನ್ನು ಅವನ ಕುಲಗುರುವಾದ ವಸಿಷ್ಠರು ಒಂದೇ ಬಾರಿಗೆ ನಿರಾಕರಿಸಿಬಿಡುತ್ತಾರೆ. ಗುರುಗಳು ಹೇಳಿದ್ದು ತನ್ನ ಒಳ್ಳೆಯದಕ್ಕೆ ಅಂತವನಿಗೆ ಅರ್ಥವಾಗುವುದಿಲ್ಲ. ಏಕೆಂದರೆ ಹಸಿವು-ನೀರಡಿಕೆ-ನಿದ್ರೆಯ ಬಾಧೆ ಇರುವ ಈ ದೇಹವನ್ನು ಪರಮ ಪವಿತ್ರ ಸ್ವರ್ಗಕ್ಕೆ ಒಯ್ಯಬಾರದಲ್ಲವೇ ?  ಸ್ವರ್ಗವೆಂದರೆ ಮನಸ್ಸಿನ ಕಾಮನೆಗಳ ಪೂರ್ತಿಗಾಗಿ ಹೊರತೂ ದೇಹಕಾಮನೆಗಳಿಗಲ್ಲ. ...

ಯವನಾಶ್ವ

  " ಗರ್ಭ ಧರಿಸಿದ ಪುರುಷ " ಮಕ್ಕಳನ್ನು ಹೆರುವುದರಿಂದಲೇ ಹೆಣ್ಣಿಗೆ ಸಮಾಜದಲ್ಲಿ ಪೂಜ್ಯನೀಯ ಸ್ಥಾನವಿದೆ. ಆಕೆಯ ದೇಹವೂ ಸಂತಾನಾಭಿವೃದ್ಧಿಗೆ ಪೂರಕವಾಗಿದೆ. ಆದರೆ ಒಬ್ಬ ಪುರುಷ ಮಗುವನ್ನು ಹೆತ್ತರೆ ಹೇಗಿರುತ್ತದೆ? ಮೊದಲಿಗೆ ಆತ ಮಗುವನ್ನು ಪ್ರಸವಿಸುವುದು ಹೇಗೆ? ಮಗು ಹುಟ್ಟಿದ ನಂತರ ಹಾಲೂಡಿಸುವುದು ಹೇಗೆ? ಎಂಬೆಲ್ಲಾ ಪ್ರಶ್ನೆಗಳು ನಮ್ಮನ್ನು ಕಾಡುತ್ತವೆ. ಆದರೆ ಯವನಾಶ್ವ ಎಂಬ ರಾಜ ತಾನೇ ಮಗುವನ್ನು ತನ್ನ ಹೊಟ್ಟೆಯಲ್ಲಿ ಹೊತ್ತು, ನಂತರ ಹೆತ್ತು ಆ ಮಗುವಿನ ತಂದೆ ಮತ್ತು ತಾಯಿ ಎನಿಸಿಕೊಂಡಿದ್ದಾನೆ. ಬಹಳ ಕಾಲದ ಹಿಂದೆ ಯವನಾಶ್ವ ಎಂಬ ರಾಜನಿಗೆ ಸಂತಾನ ಇರಲಿಲ್ಲ. ಅದಕ್ಕಾಗಿ ಆತ ಮಾಡದ ಪ್ರಯತ್ನಗಳೇ ಇರಲಿಲ್ಲ. ಆತನೂ, ಆತನ ಪತ್ನಿಯೂ ಸೇರಿ ಅನೇಕ ಯಜ್ಞ-ಯಾಗಾದಿಗಳನ್ನು, ಪೂಜೆ-ಪುನಸ್ಕಾರಗಳನ್ನು ಮಾಡಿದ್ದರು. ಆದರೂ ಅವರಿಗೆ ಸಂತಾನ ಲಭಿಸಿರಲಿಲ್ಲ.  ಈ ವಿಷಯವಾಗಿ ಮಹಾರಾಜನು ಬಹಳ ಚಿಂತಿತನಾಗಿದ್ದನು. ಈ ವಿಷಯ ರಾಜನ ನಿತ್ಯ ಜೀವನದಲ್ಲಿಯೂ ಬಾಧಿಸತೊಡಗಿತು. ಇದರಿಂದ ರಾಜನು ರಾಜ್ಯದ ಆಡಳಿತದಲ್ಲಿಯೂ ಮನಸ್ಸಿಲ್ಲದವನಾಗಿ ಹೆಚ್ಚಿನ ಸಮಯ ಕಾಡಿನಲ್ಲಿಯೇ ಕಳೆಯುತ್ತಿದ್ದನು.  ಒಮ್ಮೆ ಹೀಗೆಯೇ ಕಾಡಿನಲ್ಲಿ ಸಂಚರಿಸುತ್ತಿದ್ದಾಗ ಕಾಡಿನ ಒಳ ಭಾಗಕ್ಕೆ ಹೋಗಿ ಬಿಡುತ್ತಾನೆ. ಹಸಿವು-ಬಾಯಾರಿಕೆಗಳು ಅವನನ್ನು ಕಾಡಲು ಶುರು ಮಾಡುತ್ತವೆ. ಆದರೆ ಹತ್ತಿರದಲ್ಲಿ ಎಲ್ಲಿಯೂ ಆತನ ದಾಹ ತಣಿಸುವ ನೀರಿನ ಆಕರಗಳು ಕಾಣಸಿಗುವುದಿಲ್ಲ.  ಹಾಗಾಗಿ ನೀರನ್...

ಸ್ವರ್ಗವನ್ನೇ ತಿರಸ್ಕರಿಸಿದ ಮುದ್ಗಲ

  ನಮಗೆಲ್ಲರಿಗೂ ಸಾಮಾನ್ಯವಾಗಿ ಒಂದು ಆಸೆ ಇದ್ದೇ ಇರುತ್ತದೆ. ಸತ್ತ ಮೇಲೆ ಸ್ವರ್ಗ ಸೇರಬೇಕೆಂದು ಹೆಚ್ಚು ಕಡಿಮೆ ನಾವೆಲ್ಲರೂ ಬಯಸುತ್ತೇವೆ.‌ ಈ ಬಗ್ಗೆ ಒಂದು ಹಾಸ್ಯವಿದೆ. "ಜನರು ಸ್ವರ್ಗ ಬೇಕೆಂದು ಬಯಸುತ್ತಾರೆ, ಆದರೆ ಸಾಯಲು ನಿರಾಕರಿಸುತ್ತಾರೆ" ಅಂತ. ಹೀಗಿರುವಾಗ ನಮಗೇನಾದರೂ ಸಶರೀರವಾಗಿಯೇ ಸ್ವರ್ಗಕ್ಕೆ ಹೋಗುವ ಅವಕಾಶ ಸಿಕ್ಕರೆ? ಸಾಯುವ ಪ್ರಮೇಯವೇ ಇಲ್ಲದೇ ಸೀದಾ ಪುಷ್ಪಕ ವಿಮಾನ ಹತ್ತಿ‌ ಸ್ವರ್ಗದಲ್ಲಿ ಲ್ಯಾಂಡ್ ಆಗಬಹುದು. ಆದರೆ 'ಮುದ್ಗಲ' ಎಂಬ ಮುನಿಯು ತನಗೆ ಸಶರೀರವಾಗಿಯೇ ಸ್ವರ್ಗಕ್ಕೆ ಹೋಗುವ ಅವಕಾಶ ಸಿಕ್ಕಾಗಲೂ ಸಹ ನಿರಾಕರಿಸಿ ಎಲ್ಲರನ್ನೂ ದಂಗುಬಡಿಸುತ್ತಾನೆ. ಸ್ವರ್ಗಕ್ಕೆ ಹೋಗುವ ಅವಕಾಶ ಸಿಕ್ಕರೆ ಯಾರು ತಾನೇ ಬಿಡುತ್ತಾರೆ? ಸ್ವರ್ಗಕ್ಕೆ ಹೋಗಲು ಜನರು ಎಷ್ಟೆಷ್ಟೋ ತಪಸ್ಸು ಮಾಡುತ್ತಾರೆ. ದಾನ, ಧರ್ಮ, ಪುಣ್ಯಕಾರ್ಯಗಳನ್ನು ಮಾಡುತ್ತಾರೆ. ಶಾಸ್ತ್ರದಲ್ಲಿ ಹೇಳಿರುವುದನ್ನು, ಪಂಡಿತರು ಹೇಳಿದ್ದನ್ನು ಒಂದೂ ಬಿಡದೇ ಅನುಷ್ಠಾನಗೊಳಿಸುತ್ತಾರೆ. ಇಷ್ಟಾಗಿಯೂ ಅವರಿಗೆ ಸ್ವರ್ಗ ಪ್ರಾಪ್ತಿಯಾಗುವುದಿಲ್ಲ. ಆದರೆ ಅದ್ಯಾವುದೂ ಮಾಡದ ಮುದ್ಗಲನಿಗೆ ತಾನಾಗಿಯೇ ಈ ಅವಕಾಶ ಸಿಕ್ಕರೂ ಸಹ ಆತ ನಿರಾಕರಿಸುತ್ತಾನೆ. ನಾವಾಗಿದ್ದರೆ ಖಂಡಿತಾ ಈ ಅವಕಾಶವನ್ನು ಬಿಡುತ್ತಿರಲಿಲ್ಲ. ಅಲ್ಲವೇ? ಮುದ್ಗಲ ಒಬ್ಬ ಬ್ರಹ್ಮರ್ಷಿಯಾಗಿದ್ದ.  ಆದರೂ ಸಾಮಾನ್ಯನಂತೆ ಜೀವನ ನಡೆಸುತ್ತಿದ್ದ. ಆತನ ಜೀವನ ಬಹಳ ಸರಳವಾಗಿತ್ತು. ಹೊಲಗದ್ದೆಗಳಲ್ಲಿ ರೈ...

ತ್ರಿದೇವಿಯರನ್ನು ಸೋಲಿಸಿದ ಅನಸೂಯಾ

  ಸಪ್ತ ಮರ್ಷಿಗಳಲ್ಲಿ ಒಬ್ಬರಾದ ಅತ್ರಿ ಮಹರ್ಷಿ ಮತ್ತು ಅವರ ಪತ್ನಿ ಅನುಸೂಯಾರದ್ದು ಅನುರೂಪದ ದಾಂಪತ್ಯ. ಅನುಸೂಯಾಳ ಪತಿ ಭಕ್ತಿ ಲೋಕದಲ್ಲೆಡೆ ಪ್ರಸಿದ್ಧಿ ಹೊಂದಿತ್ತು. ಆದರೆ ಮಕ್ಕಳಿರದ ಕೊರಗು ಅವರನ್ನು ಸದಾ ಕಾಡುತ್ತಿತ್ತು. ಸಂತಾನಕ್ಕಾಗಿ ದೇವರಲ್ಲಿ ಪ್ರತಿನಿತ್ಯ ಬೇಡುತ್ತಿದ್ದರು. ಮಾಡದ ಪೂಜೆಯಿಲ್ಲ, ಹೋಮ-ಹವನವಿರಲಿಲ್ಲ. ಆದರೂ ಅವರಿಗೆ ಇನ್ನೂ ಸಂತಾನ ಪ್ರಾಪ್ತಿಯಾಗಿರಲಿಲ್ಲ. ಈ ವಿಷಯ ತಿಳಿದುಕೊಂಡ ತ್ರಿಮೂರ್ತಿಗಳ ಪತ್ನಿಯರಾದ ಲಕ್ಷ್ಮಿ, ಸರಸ್ವತಿ ಮತ್ತು ಪಾರ್ವತಿಯರು ಆ ದಂಪತಿಗಳಿಗೆ ಸಂತಾನ ಕರುಣಿಸಬೇಕೆಂದು ತೀರ್ಮಾನಿಸಿದರು. ಆದರೆ ಅದಕ್ಕೂ ಮೊದಲು ಅನಸೂಯಾಳ ಪತಿಭಕ್ತಿಯನ್ನೊಮ್ಮೆ ಪರೀಕ್ಷಿಸಲು ತೀರ್ಮಾನಿಸಿದರು.‌ ಅದಕ್ಕಾಗಿ ತಮ್ಮ ಪತಿಯರನ್ನು ಅನಸೂಯಾಳ ಬಳಿ ಮುನಿ ವೇಷಧಾರಿಗಳಾಗಿ ಕಳಿಸಿ ನಿರ್ವಸ್ತ್ರ ಭಿಕ್ಷೆ ಕೇಳಲು ಹೇಳಿದರು. ಅಂದರೆ ವಸ್ತ್ರ ಧರಿಸದೇ ಮಾಡುವ ದಾನ. ಅದರಂತೆ ತ್ರಿಮೂರ್ತಿಗಳು ಋಷಿಗಳ ವೇಷ ಧರಿಸಿ ಬಂದು ಅನಸೂಯಾಳ ಬಳಿ ನಿರ್ವಸ್ತ್ರ ಭಿಕ್ಷೆ ಕೇಳಿದರು. ಅನಸೂಯಾಳಿಗೆ ಸಿಡಿಲೆರಗಿದಂತಾಯಿತು. ಇತ್ತ ಮುನಿಗಳಿಗೆ ಭಿಕ್ಷೆ ಇಲ್ಲ ಎನ್ನುವಂತಿಲ್ಲ. ಹಾಗೆಂದು ನಿರ್ವಸ್ತ್ರವಾಗಿ ಇವರ ಮುಂದೆ ಬರುವ ಹಾಗೆಯೂ ಇಲ್ಲ. ವಸ್ತ್ರವಿಲ್ಲದೇ ಇವರ ಮುಂದೆ ಬಂದರೆ ಕೂಡಲೇ ತನ್ನ ಪತಿವ್ರತಾ ಧರ್ಮಕ್ಕೆ ಅಪಚಾರವಾಗುತ್ತದೆ. ಇಷ್ಟು ದಿನ ನಿಯಮ ಬಿಡದೇ ಪಾಲನೆ ಮಾಡಿಕೊಂಡು ಬಂದವಳು ತಾನು. ಈಗ ಏಕಾಏಕಿ ಬಿಡಲಾಗೋಲ್ಲ. ಹಾಗೂ ಮಾಡುವಂತಿಲ್ಲ,...

ಹಿಡಿಂಬೆ

  ಸಾಮಾನ್ಯವಾಗಿ ನಮಗೆ ಏನಾದರೂ ತೊಂದರೆಯಾದರೆ ಅದು ಹೊರಗಿನವರಿಂದ ಎಂದು ನಮ್ಮ ಭಾವನೆ. ಹೊರಗಿನವರ್ಯಾರೋ ನಮಗೆ ತೊಂದರೆ ಕೊಟ್ಟಾಗ ನಮ್ಮವರು ನಮ್ಮನ್ನು ರಕ್ಷಿಸುತ್ತಾರೆಂಬ ನಂಬಿಕೆ ನಮಗೆ ಯಾವಾಗಲೂ ಇರುತ್ತದೆ.  ಆದರೆ ನಮ್ಮವರೇ ನಮಗೆ ತೊಂದರೆ ಕೊಟ್ಟಾಗ ನಾವು ಯಾರನ್ನು ನಂಬಬೇಕು. ಆಗ ಅನಿವಾರ್ಯವಾಗಿ ಹೊರಗಿನವರನ್ನೇ ನಮ್ಮ ರಕ್ಷಕರು ಎಂದು ತಿಳಿಯಬೇಕಾಗುತ್ತದೆ.  ಹಿಡಿಂಬೆಗೂ ಈ ಅನುಭವವಾಯ್ತು. ತಾನು, ತನ್ನಣ್ಣ ಇಷ್ಟೇ ಪ್ರಪಂಚ ಅವಳದ್ದು. ಮಾನವರ ವಾಸನೆ ಬಂದಾಗ ಹೋಗಿ ಹಿಡಿದು ತರುವುದು, ತಿನ್ನುವುದು ಇಷ್ಟರಲ್ಲಿಯೇ ಬದುಕು ಸಾಗಿತ್ತು. ಆರಕ್ಕೆ ಏರಿರಲಿಲ್ಲ.. ಮೂರಕ್ಕೆ ಇಳಿದಿರಲಿಲ್ಲ.. ಹಿಡಿಂಬನೇನೋ ಗಂಡಸು ಹೇಗೋ ಬದುಕಿಕೊಂಡಿದ್ದ..  ಆದರೆ ಹಿಡಿಂಬೆ ಹೆಂಗಸು..  ಏಕತಾನತೆಯ ಈ ಬದುಕು ಅವಳಿಗೆ ಚಿಟ್ಟು ಹಿಡಿಸಿತ್ತು.. ಮದುವೆಯಿಲ್ಲ, ಸಂಗಾತಿಯಿಲ್ಲ, ಮಕ್ಕಳಿಲ್ಲ.. ಇದೂ ಒಂದು ಬದುಕಾ ಅಂತ ಅವಳಿಗೆ ಬಹಳ ಕಾಡುತ್ತಿತ್ತು..  ಅದರಲ್ಲೂ ಈ ಸಂಗಾತಿಯ ವ್ಯಾಮೋಹ ಬಹಳ ಅಪಾಯಕಾರಿಯಾದದ್ದು. ಅದನ್ನು ಅರ್ಥ ಮಾಡಿಕೊಳ್ಳುವವರಿಂದಷ್ಟೇ ಅರ್ಥ ಮಾಡಿಕೊಳ್ಳಲು ಸಾಧ್ಯ. ಈ ವ್ಯಾಮೋಹ ಮೂಡಿದವರು ಯಾರೆಂದರೆ ಯಾರನ್ನೂ ಸಹ ಲೆಕ್ಕಿಸೋಲ್ಲ.. ಹೆತ್ತ ತಂದೆ ತಾಯಿಯನ್ನೂ ಸಹ..  ಇಂತಹಾ ಸಂದರ್ಭದಲ್ಲಿ ಆಹಾರಕ್ಕಾಗಿ ಅಲೆಯುತ್ತಿರುವ ಹಿಡಿಂಬೆಗೆ ಭೀಮ ಕಾಣಿಸುತ್ತಾನೆ. ಮರಳುಗಾಡಿನಲ್ಲಿ ಓಯಸಿಸ್ ಸಿಕ್ಕ ಹಾಗೆ ಆಗುತ್ತದೆ ಅವಳಿಗೆ. ವಾರಾ...

ಏಕಲವ್ಯ

  ಮಹಾಭಾರತ ಎಂದರೆ ಎಲ್ಲರೂ ಬರೇ ದಾಯಾದಿಗಳ ದ್ವೇಷದ ಕಥೆ ಅಂತಲೇ ತಿಳಿಯುತ್ತಾರೆ. ಅದರ ಹಿಂದಿನ ಸತ್ಯ ಯಾರಿಗೂ ಬೇಕಿಲ್ಲ. ಏಕಲವ್ಯನ ಬಗ್ಗೆಯೂ ಹಾಗೆಯೇ ತಿಳಿಯುತ್ತಾರೆ.  ದ್ರೋಣರು ಅರ್ಜುನನ ಮೇಲಿನ ಪ್ರೀತಿಯಿಂದ, ತಮ್ಮ ಮೆಚ್ಚಿನ ಶಿಷ್ಯನಾದ ಅರ್ಜುನನನ್ನು ಮಾತ್ರವೇ ಅಪ್ರತಿಮ ಬಿಲ್ಲುಗಾರನನ್ನಾಗಿಸುವ ಏಕಮಾತ್ರ ಕಾರಣದಿಂದಾಗಿಯೇ ಏಕಲವ್ಯನಿಂದ ಅವನ ಹೆಬ್ಬೆರಳನ್ನು ಗುರುದಕ್ಷಿಣೆಯಾಗಿ ಪಡೆದರು ಅಂತಲೇ ತಿಳಿದಿದ್ದಾರೆ.  ನಂತರ ಮಹಾಭಾರತವನ್ನು ತಮ್ಮ ತಮ್ಮ ದೃಷ್ಟಿಕೋನದಿಂಧ ವಿಶ್ಲೇಷಿಸಿದ ಬೇರೆ ಬೇರೆ ಕಾಲಘಟ್ಟದ ಎಲ್ಲ ಲೇಖಕರೂ ಕೂಡ ಈ ವಿಷಯದ ಪ್ರಸ್ತಾಪ ಬಂದಾಗ ಮೂಲದಲ್ಲಿರುವ ಹಾಗೆಯೇ ಬಿಂಬಿಸುತ್ತಾ ಬಂದಿದ್ದಾರೆ.  ಆದರೆ ವಾಸ್ತವ ಬೇರೆಯೇ ಇದೆ.  ಮಹಾಭಾರತದ ಸಮಯದಲ್ಲಿ ಹಸ್ತಿನಾವತಿಯನ್ನು ದುರ್ಯೋಧನ ಆಳುತ್ತಿದ್ದರೆ, ಎಲ್ಲಾ ರೀತಿಯಿಂದಲೂ ಅರ್ಹರಾಗಿದ್ದ ಪಾಂಡವರು ಕಾಡಿನಲ್ಲಿದ್ದರು. ದುರ್ಯೋಧನನ ನಿಯಮದಂತೆ ಪಾಂಡವರು 12 ವರ್ಷಗಳ ವನವಾಸ, 1 ವರ್ಷದ ಅಜ್ಞಾತವಾಸ ಮುಗಿಸಿ ಬಂದರೂ ದುರ್ಯೋಧನ ಅವರಿಗೆ ಪಿಳ್ಳೆ ನೆವ ಹೇಳಿದ ಹೊರತು ಅವರ ನೆಲ ಅವರಿಗೆ ಕೊಡಲಿಲ್ಲ. ಹಾಗಾಗಿ ಇಬ್ಬರೂ ರಾಜಿಯಾಗದೇ ಇಬ್ಬರ ನಡುವೆ ಯುದ್ಧ ನಡೆಯಿತು. ಹಾಗಾದರೆ ಕೇವಲ ನೆಲಕ್ಕಾಗಿ ಯುದ್ಧ ನಡೆಯಿತೇ?  ಖಂಡಿತಾ ಇಲ್ಲ.  ಒಂದು ವೇಳೆ ಪಾಂಡವರು ತಮ್ಮ ನೆಲವನ್ನು ವಾಪಸ್ ಪಡೆಯದಿದ್ದರೆ ಯುಗಾಂತರದವರೆಗೂ ದುರ್ಯೋಧನನ ವಂಶಸ್ಥರೇ ಭರತ ಭೂಮಿಯನ್ನು ...

ರಾಧೆಯ ಪ್ರೀತಿ

  ರಾಧೆ... ಇಷ್ಟು ಹೇಳಿದರೆ ಸಾಕು. ನಮ್ಮ ಮನಸ್ಸಿನಲ್ಲಿ ಆಕೆಯ ಚಿತ್ರ ಮೂಡುತ್ತದೆ. ರಾಧೆ ಕೊನೆಯವರೆಗೂ ಚಿರ ವಿರಹಿಯಾಗಿ ನಮಗೆ, ನಮ್ಮ ಮನಸ್ಸಿಗೆ ಬಹಳ ಹತ್ತಿರವೆನಿಸುತ್ತಾಳೆ. ನಮ್ಮೊಳಗೂ ಒಬ್ಬ ರಾಧೆ ಇದ್ದಾಳೆ. ಆಕೆ ಸದಾ ಕಾಲವೂ ತನ್ನ ಪ್ರೀತಿಗಾಗಿ ಕಾಯುತ್ತಲೇ ಇರುತ್ತಾಳೆ. ನಾವೆಲ್ಲರೂ ನಮ್ಮ ಜೀವನದಲ್ಲಿ ಒಂದಲ್ಲ ಒಂದು ಬಾರಿಯಾದರೂ ನಮ್ಮ ಪ್ರೀತಿ‌ ಪಾತ್ರರಿಂದ ವಿರಹವನ್ನು ಅನುಭವಿಸಿದವರೇ ಆಗಿದ್ದೇವೆ. ಹಾಗಾಗಿ ರಾಧೆಯ ವಿರಹ ನಮಗೆ ಬಹಳ ಆಪ್ತ ಎನಿಸುತ್ತದೆ. ಎಂದಾದರೊಮ್ಮೆ ಅನಿವಾರ್ಯವಾಗಿ ನಾವು ಬಹಳ ಇಷ್ಟಪಡುವವರಿಂದ ದೂರವಾದಾಗ ನಮಗೆ ನೆನಪಾಗುವುದೇ ರಾಧೆ ಮತ್ತು ಆಕೆಯ ವಿರಹ. ಆಕೆ ಈ ವಿರಹದ ಉರಿಯನ್ನು ಹೇಗೆ ಸಹಿಸಿರಬಹುದು ಅಂತ ಆಶ್ಚರ್ಯವಾಗುತ್ತದೆ. ಏಕೆಂದರೆ ಕೃಷ್ಣನೋ ದೇವ ಪುರುಷ. ಆದರೆ ರಾಧೆ ನಮ್ಮ ನಿಮ್ಮಂತೆ ಸಾಮಾನ್ಯ ಮನುಷ್ಯಳು. ಸುಲಭವಾಗಿ ತನ್ನ ನೋವನ್ನು ಮರೆಯುವಂತಹಾ ಅತಿಮಾನುಷಳಲ್ಲ ಆಕೆ. ಆದರೂ ಆಕೆಗೆ ತನ್ನ‌ ಪ್ರೀತಿಯ ಮೇಲಿರುವ ಅತೀವ ವಿಶ್ವಾಸ ಕಂಡು ನಮಗೆ ಬೆರಗಾಗುತ್ತದೆ. ರಾಧೆ ಎಂದ ಕೂಡಲೇ ನಮಗೆ ನೆನಪಾಗುವುದು ನದಿ ತೀರದಲ್ಲಿಯೋ ಅಥವಾ ಉದ್ಯಾನವನದಲ್ಲಿಯೋ ಕುಳಿತು ಕೃಷ್ಣನಿಗಾಗಿ ಆಕೆ ಕಾಯುತ್ತಿರುವ ಚಿತ್ರ. ಕಾಯುವಿಕೆ ಎನ್ನುವುದು ಆಕೆಯ ಜೀವನದಲ್ಲಿ ಹಾಸು ಹೊಕ್ಕಾಗಿ ಬಿಟ್ಟಿದೆ. ಏಕೆಂದರೆ ಜೀವಮಾನ ಪರ್ಯಂತ ಆಕೆ ಕೃಷ್ಣನಿಗಾಗಿ ಕಾಯುತ್ತಲೇ ಇರುತ್ತಾಳೆ. ಆತ ತನಗೆ ಸಿಗುವುದಿಲ್ಲ ಎಂದು ಗೊತ್...