Posts

Showing posts with the label mudgal mahashi

ಸ್ವರ್ಗವನ್ನೇ ತಿರಸ್ಕರಿಸಿದ ಮುದ್ಗಲ

  ನಮಗೆಲ್ಲರಿಗೂ ಸಾಮಾನ್ಯವಾಗಿ ಒಂದು ಆಸೆ ಇದ್ದೇ ಇರುತ್ತದೆ. ಸತ್ತ ಮೇಲೆ ಸ್ವರ್ಗ ಸೇರಬೇಕೆಂದು ಹೆಚ್ಚು ಕಡಿಮೆ ನಾವೆಲ್ಲರೂ ಬಯಸುತ್ತೇವೆ.‌ ಈ ಬಗ್ಗೆ ಒಂದು ಹಾಸ್ಯವಿದೆ. "ಜನರು ಸ್ವರ್ಗ ಬೇಕೆಂದು ಬಯಸುತ್ತಾರೆ, ಆದರೆ ಸಾಯಲು ನಿರಾಕರಿಸುತ್ತಾರೆ" ಅಂತ. ಹೀಗಿರುವಾಗ ನಮಗೇನಾದರೂ ಸಶರೀರವಾಗಿಯೇ ಸ್ವರ್ಗಕ್ಕೆ ಹೋಗುವ ಅವಕಾಶ ಸಿಕ್ಕರೆ? ಸಾಯುವ ಪ್ರಮೇಯವೇ ಇಲ್ಲದೇ ಸೀದಾ ಪುಷ್ಪಕ ವಿಮಾನ ಹತ್ತಿ‌ ಸ್ವರ್ಗದಲ್ಲಿ ಲ್ಯಾಂಡ್ ಆಗಬಹುದು. ಆದರೆ 'ಮುದ್ಗಲ' ಎಂಬ ಮುನಿಯು ತನಗೆ ಸಶರೀರವಾಗಿಯೇ ಸ್ವರ್ಗಕ್ಕೆ ಹೋಗುವ ಅವಕಾಶ ಸಿಕ್ಕಾಗಲೂ ಸಹ ನಿರಾಕರಿಸಿ ಎಲ್ಲರನ್ನೂ ದಂಗುಬಡಿಸುತ್ತಾನೆ. ಸ್ವರ್ಗಕ್ಕೆ ಹೋಗುವ ಅವಕಾಶ ಸಿಕ್ಕರೆ ಯಾರು ತಾನೇ ಬಿಡುತ್ತಾರೆ? ಸ್ವರ್ಗಕ್ಕೆ ಹೋಗಲು ಜನರು ಎಷ್ಟೆಷ್ಟೋ ತಪಸ್ಸು ಮಾಡುತ್ತಾರೆ. ದಾನ, ಧರ್ಮ, ಪುಣ್ಯಕಾರ್ಯಗಳನ್ನು ಮಾಡುತ್ತಾರೆ. ಶಾಸ್ತ್ರದಲ್ಲಿ ಹೇಳಿರುವುದನ್ನು, ಪಂಡಿತರು ಹೇಳಿದ್ದನ್ನು ಒಂದೂ ಬಿಡದೇ ಅನುಷ್ಠಾನಗೊಳಿಸುತ್ತಾರೆ. ಇಷ್ಟಾಗಿಯೂ ಅವರಿಗೆ ಸ್ವರ್ಗ ಪ್ರಾಪ್ತಿಯಾಗುವುದಿಲ್ಲ. ಆದರೆ ಅದ್ಯಾವುದೂ ಮಾಡದ ಮುದ್ಗಲನಿಗೆ ತಾನಾಗಿಯೇ ಈ ಅವಕಾಶ ಸಿಕ್ಕರೂ ಸಹ ಆತ ನಿರಾಕರಿಸುತ್ತಾನೆ. ನಾವಾಗಿದ್ದರೆ ಖಂಡಿತಾ ಈ ಅವಕಾಶವನ್ನು ಬಿಡುತ್ತಿರಲಿಲ್ಲ. ಅಲ್ಲವೇ? ಮುದ್ಗಲ ಒಬ್ಬ ಬ್ರಹ್ಮರ್ಷಿಯಾಗಿದ್ದ.  ಆದರೂ ಸಾಮಾನ್ಯನಂತೆ ಜೀವನ ನಡೆಸುತ್ತಿದ್ದ. ಆತನ ಜೀವನ ಬಹಳ ಸರಳವಾಗಿತ್ತು. ಹೊಲಗದ್ದೆಗಳಲ್ಲಿ ರೈ...