Posts

Showing posts with the label ಪಾರ್ವತಿಯ ಮಗಳು

ಅಶೋಕ ಸುಂದರಿ

Image
ಸೃಷ್ಟಿಯ ಎಲ್ಲಾ ಕ್ರಿಯೆಯ ಹಿಂದೆಯೂ ಒಂದಲ್ಲ ಒಂದು ಕಾರಣ ಇದ್ದೇ ಇರುತ್ತದೆ. ಮಹಾಭಾರತದ ಮೂಲ ಪುರುಷ ಯಯಾತಿ. ಇವನೇ ಹುಟ್ಟಿರದಿದ್ದರೆ ಪಾಂಡವರೂ ಇಲ್ಲ, ಕೌರವರೂ ಇಲ್ಲ, ಕುರುಕ್ಷೇತ್ರ ಮೊದಲೇ ಇಲ್ಲ. ಅದಕ್ಕಾಗಿ ಸೂಕ್ತ ವೇದಿಕೆ ನಿರ್ಮಿಸುವ ಕೆಲಸ ಬಹಳ ಹಿಂದಿನಿಂದಲೇ ಶುರುವಾಗಿರುತ್ತದೆ. ಎಷ್ಟು ಹಿಂದಿನಿಂದ ಎಂದರೆ ಶಿವ-ಪಾರ್ವತಿಯರ ಕಾಲಕ್ಕೆ ಹೋಗಬೇಕಾಗುತ್ತದೆ. ನಾವೆಲ್ಲರೂ ತಿಳಿದಿರುವ ಹಾಗೆ ಈಶ್ವರ-ಪಾರ್ವತಿಯರಿಗೆ ಇಬ್ಬರು ಗಂಡು ಮಕ್ಕಳು. ಗಣೇಶ ಮತ್ತು ಸುಬ್ರಹ್ಮಣ್ಯ. ಆದರೆ ಮನುಷ್ಯರಿಗಾಗಲೀ ಅಥವಾ ದೇವತೆಯರಿಗಾಗಲೀ ಇಲ್ಲದ ವಸ್ತುವಿನ ಮೇಲೆಯೇ  ವ್ಯಾಮೋಹ ಜಾಸ್ತಿ. ಅದರಂತೆ ಪಾರ್ವತಿಗೂ ಇಬ್ಬರು ಗಂಡುಮಕ್ಕಳಿದ್ದರೂ ಸಹ ತನಗೊಂದು ಹೆಣ್ಣು ಮಗು ಬೇಕು ಎಂಬ ಆಸೆ ಒಳಗಿಂದೊಳಗೇ ಇದ್ದಿತ್ತು. ಆದರೆ ಅಕೆ ಎಂದೂ ಬಾಯಿ ಬಿಟ್ಟು ಹೇಳಿರಲಿಲ್ಲ. ಒಮ್ಮೆ ಪಾರ್ವತಿಗೆ ಜಗತ್ತಿನಲ್ಲಿಯೇ ಅತ್ಯಂತ ಸುಂದರವಾದ ಉದ್ಯಾನವನಕ್ಕೆ ಹೋಗಬೇಕು ಅಂತನಿಸುತ್ತದೆ. ಆಗ ಶಿವ ತನ್ನ ಸತಿಯನ್ನು ದೇವಲೋಕದ ಉದ್ಯಾನವನಕ್ಕೆ ಕರೆದುಕೊಂಡು ಹೋಗುತ್ತಾನೆ. ದಂಪತಿಗಳು ತಿರುಗಾಡುತ್ತಾ ಸುಸ್ತಾಗಿ ಹಾಗೆಯೇ ಒಂದು ಮರದ ಕೆಳಗೆ ವಿಶ್ರಾಂತಿಗಾಗಿ ಕುಳಿತುಕೊಳ್ಳುತ್ತಾರೆ.  ಅದು ಕಲ್ಪವೃಕ್ಷವಾಗಿರುತ್ತದೆ.   ಪಾರ್ವತಿ ದೇಹದ ಆಯಾಸ ಶಮನ ಮಾಡುತ್ತಾ ತನ್ನ ಯೋಚನೆಯಲ್ಲಿ ಮುಳುಗುತ್ತಾಳೆ. ಮನಸ್ಸು ಮರ್ಕಟ ನೋಡಿ. ಆಕೆಯ ಮನದೊಳಗೆ ಸುಪ್ತವಾಗಿದ್ದ ಹೆಣ್ಣು ಬೇಕು ಎಂಬ ಆಸೆ ಒಳಗಿಂದ...