Posts

Showing posts with the label shani deva

ಒಳಿತು ಮಾಡುವ ಶನಿ

Image
' ಅನಿಷ್ಟಕ್ಕೆಲ್ಲ ಶನೀಶ್ವರನೇ ಕಾರಣ' ಎನ್ನುವುದು ಒಂದು ಆಡು ಮಾತು. ತಾವು ಮಾಡಿದ ತಪ್ಪನ್ನು ಮುಚ್ಚಿಟ್ಟುಕೊಳ್ಳಲು ಮತ್ತು ಆ ತಪ್ಪಿಗೆ ಮತ್ತೊಬ್ಬರನ್ನು ದೂರಲು ಜನ ಈ ಮಾತು ಬಳಸುತ್ತಾರೆ. ವ್ಯಾಪಾರದಲ್ಲಿ ತೊಂದರೆ, ವಿದ್ಯಾಭ್ಯಾಸದಲ್ಲಿ ಅಡಚಣೆ ಉಂಟಾದಾಗ ಶನಿ ಹೆಗಲೇರಿದ್ದಾನೆ ಅಂತ ಜನ ಮಾತನಾಡಿಕೊಳ್ಳುತ್ತಾರೆ.  ನಮಗೆ ಕೆಟ್ಟದು ಮಾಡುವವರಿಗೂ ನಾವು 'ಶನಿಯ ರೀತಿ ಕಾಡುತ್ತಾರೆ' ಎನ್ನುತ್ತೇವೆ. ಒಟ್ಟಿನಲ್ಲಿ ನಮಗೇನೇ ತೊಂದರೆಯಾದರೂ ದೂರಲು ಶನಿಯನ್ನು ಬಳಸಿಕೊಳ್ಳುತ್ತೇವೆ. ಅಷ್ಟಕ್ಕೂ ಶನಿ ಎಂದರೆ ಬರೇ ಕೆಟ್ಟದ್ದನ್ನೇ ಮಾಡುತ್ತಾನಾ? ಯಾಕೆ ಜನರು ತಮಗೆ ಕೆಟ್ಟದಾದಾಗ ಶನಿಯನ್ನು ದೂರುತ್ತಾರೆ? ತಿಳಿಯೋಣ ಬನ್ನಿ. ಹೌದು. ಶನಿಯು ಬಹಳ ಕೆಟ್ಟದ್ದು ಮಾಡುತ್ತಾನೆ. ಶನಿಯ ಸಂಕಷ್ಟಗಳನ್ನು ಅನುಭವಿಸದವರು ಯಾರಿದ್ದಾರೆ? ನಳ ಮಹಾರಾಜ, ರಾಜಾ ವಿಕ್ರಮಾದಿತ್ಯ, ಸತ್ಯ ಹರಿಶ್ಚಂದ್ರ ಸಹ ಶನಿಯ ಕಾಟದಿಂದ ಬಳಲಿದವರೇ ಆಗಿದ್ದಾರೆ. ಮನುಷ್ಯರು ಮಾತ್ರವಲ್ಲದೇ ದೇವತೆಗಳು, ಅಸರರು ಎನ್ನದೇ ಎಲ್ಲರನ್ನೂ ಕಾಡಿದ್ದಾನೆ‌. ಆದರೆ ಶನಿ ತಮ್ಮನ್ನು ಕಾಡುವ ಮೂಲಕ ಪರೀಕ್ಷಿಸುತ್ತಿದ್ದಾನೆ ಎಂದು ಯಾರೂ ತಿಳಿಯುವುದಿಲ್ಲ.  ಏಕೆಂದರೆ ಬಂಗಾರ ಪರಿಶುದ್ಧವಾಗಲು ಬೆಂಕಿಯಲ್ಲಿ ಬೇಯಲೇಬೇಕು. ವಿಪರೀತ ಸಂಕಷ್ಟಗಳನ್ನು ಅನುಭವಿಸಿದ ನಳ, ವಿಕ್ರಮಾದಿತ್ಯ, ಹರಿಶ್ಚಂದ್ರರು ಶನಿಯ ಪರೀಕ್ಷೆಯಲ್ಲಿ ಗೆದ್ದು ಬರಲಿಲ್ಲವೇ? ಶನಿಯು ಭಕ್ತರಿಗೆ ಕಾಟ ಕೊಟ್ಟರೂ ಕಡೆಯಲ್ಲಿ ಭರ್ಜರಿ ...