Posts

Showing posts with the label ಪರೀಕ್ಷಿತ

ಪರೀಕ್ಷಿತ

Image
" ಆಗಬೇಕಾದ್ದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ" ಮನುಷ್ಯನಾದವನು ಎಂಥದೇ ಪರಿಸ್ಥಿತಿಯಲ್ಲಿ ಪ್ರಚೋದನೆಗೆ ಒಳಗಾಗದೇ, ಸಿಟ್ಟಿನ ಕೈಗೆ ಬುದ್ಧಿ ಕೊಡದೇ ಶಾಂತನಾಗಿ ಬದುಕಿದರೆ ಅದೇ ಒಂದು ದೊಡ್ಡ ಸಾಧನೆ. ಈ ಸಿಟ್ಟು ಉಂಟುಮಾಡುವ ಅವಿವೇಕತನದಿಂದ ಎಂತಹ ಘಟಾನುಘಟಿಗಳೇ ಮಣ್ಣು ಮುಕ್ಕಿದ್ದಾರೆ. ಅದೇ ರೀತಿ ಸಿಟ್ಟಿನಲ್ಲಿ ಯೋಚಿಸುವ ಬದಲು ಸ್ವಲ್ಪ ಸಹನೆಯಿಂದ ಯೋಚಿಸಿದ್ದರೆ ಬಹುಶಃ ಪರೀಕ್ಷಿತ ಮಹಾರಾಜನಿಗೆ ಅಂತಹಾ ಸ್ಥಿತಿ ಬರುತ್ತಿರಲಿಲ್ಲ. ಆದರೆ ವಿಧಿಯಲ್ಲಿ ಹಾಗೆ ಆಗಲೇಬೇಕೆಂದು ಬರೆದಿದ್ದರೆ ತಡೆಯುವವರಾದರೂ ಯಾರು? ಪರೀಕ್ಷಿತ ಮಹಾರಾಜ ಮಧ್ಯಮ ಪಾಂಡವನಾದ ಅರ್ಜುನನ ಮೊಮ್ಮಗ. ಧರ್ಮಭೀರುವಾಗಿದ್ದ ಆತ ನ್ಯಾಯಮಾರ್ಗದಿಂದ ಪ್ರಜಾಪಾಲನೆ ಮಾಡುತ್ತಿದ್ದ. ಆತನ ಕಾಲದಲ್ಲಿ ರಾಜ್ಯವು ಸುಭಿಕ್ಷವಾಗಿತ್ತು. ಪ್ರಜೆಗಳು ಆನಂದದಿಂದ ಇದ್ದರು. ಅಷ್ಟೇ ಆಗಿದ್ದರೆ ಚಂದವಿತ್ತು. ಆದರೆ ಜೀವನದಲ್ಲಿ ಅಡೆತಡೆ ಅನ್ನುವುದೇ ಇರದಿದ್ದರೆ ನಮಗೆ ಗೊತ್ತಿಲ್ಲದೆಯೇ ಒಂದು ರೀತಿಯ ದುರಹಂಕಾರ ಬೆಳೆದು ಬಿಡುತ್ತದಂತೆ. ಒಮ್ಮೆ ಹೀಗಾಯಿತು. ಪರೀಕ್ಷಿತ ಮಹಾರಾಜ ಕಾಡಿನಲ್ಲಿ ಬೇಟೆಯಾಡುತ್ತಾ ಒಂದು ಜಿಂಕೆಯ ಬೆನ್ನಟ್ಟುತ್ತಾನೆ. ಜಿಂಕೆ ಜಿಗಿಯುತ್ತಾ ಕುಣಿಯುತ್ತಾ ಕಾಡಿನ ಒಳಭಾಗದಲ್ಲಿದ್ದ ಒಂದು ಆಶ್ರಮದೊಳಗೆ ಸಾಗಿ ಮರೆಯಾಗುತ್ತದೆ. ಹಿಂದೆಯೇ ಪರೀಕ್ಷಿತನೂ ಆಶ್ರಮದ ಒಳ ಪ್ರವೇಶಿಸುತ್ತಾನೆ. ಅಲ್ಲಿ ಶಮೀಕ ಮಹರ್ಷಿಗಳು ಧ್ಯಾನದಲ್ಲಿರುತ್ತಾರೆ. ಅವರ ಧ್ಯಾನವೆಂದರೆ ಬ್ರಹ್ಮದಂತೆ....