Posts

Showing posts with the label sharmishte

ಶರ್ಮಿಷ್ಠೆ ದೇವಯಾನಿಯರಲ್ಲಿ ಗೆದ್ದವರು ಯಾರು?

Image
  ಪ್ರತಿಯೊಬ್ಬ ಹೆಣ್ಣಿಗೂ ಒಂದು ಆಸೆ ಇರುತ್ತದೆ. ಏನೆಂದರೆ ತಾನು ತನ್ನ ಗಂಡ ಮಕ್ಕಳೊಡನೆ ಸುಖವಾಗಿ ಬಾಳಬೇಕು, ತನ್ನದೇ ಆದ ಮನೆ ಅಂತಿರಬೇಕು, ಅಲ್ಲಿ ತಾನು ರಾಣಿಯಂತೆ ಇರಬೇಕು ಅಂತೆಲ್ಲಾ ಕನಸುಗಳಿರುತ್ತವೆ.  ಒಂದು ವೇಳೆ ಸಾಮಾನ್ಯ ಜನರಿಗೆ ಈ ಕನಸುಗಳು ನನಸಾಗಬಹುದೇನೋ? ಆದರೆ ಕೆಲವೊಮ್ಮೆ ರಾಜಕುಮಾರಿಯರಿಗೇ ಈ ಕನಸು ನಿಜವಾಗುವುದು ಕಷ್ಟ.  ಹೌದು....  ಸಾಮಾನ್ಯ ಜನರು ರಾಜಕುಮಾರಿಯರ ರೀತಿ ಬದುಕಲು ಆಸೆ ಪಡುತ್ತಾರೆ. ಆದರೆ ನಿಜವಾದ ರಾಜಕುಮಾರಿಯರು ತಮ್ಮ ವಂಶದ ಹಿರಿಯರ ಮರ್ಯಾದೆಗಾಗಿಯೋ, ಯುದ್ಧ ಅಥವಾ ರಾಜಕೀಯದ ಕಾರಣಕ್ಕಾಗಿಯೋ ತಮಗಿಷ್ಟ ಇಲ್ಲದಿರುವವರನ್ನು ಮದುವೆಯಾಗಿ ನೀರಸ ಜೀವನ ನಡೆಸುತ್ತಿರುತ್ತಾರೆ. ಅಂಥವರಲ್ಲಿ ಶರ್ಮಿಷ್ಠೆಯೂ ಒಬ್ಬಳು. ಶರ್ಮಿಷ್ಠೆ ದೇವಯಾನಿಯ ದಾಸಿ. ಸಾಮಾನ್ಯವಾಗಿ ರಾಜಕುಮಾರಿಯರು ಮದುವೆಯಾಗಿ ಗಂಡನ ಮನೆಗೆ ಹೋಗುವಾಗ ಅವರೊಂದಿಗೆ ಕೆಲವು ದಾಸಿಯರನ್ನು ಜೊತೆಗೆ ಕಳಿಸಲಾಗುತ್ತಿತ್ತು.  ಆ ದಾಸಿಯರು ಸ್ವಂತ ಬದುಕನ್ನು ಮರೆತು ರಾಜಕುಮಾರಿಯ ಜೊತೆ ಇರಬೇಕಾಗುತ್ತಿತ್ತು. ಅವರು ಬೇರೆ ಮದುವೆಯಾಗುವಂತಿರಲಿಲ್ಲ. ಮಕ್ಕಳು-ಮರಿಗಳನ್ನು ಹೊಂದುವಂತಿರಲಿಲ್ಲ. ಅವರ ಪೂರ್ತಿ ಜೀವನ ರಾಜಕುಮಾರಿಯ ಸೇವೆಗೆ ಮೀಸಲಾಗಿರಬೇಕಾಗುತ್ತಿತ್ತು.  ದಾಸಿಯರಿಗೆ ಸ್ವಂತ ಬದುಕು ಇರುತ್ತಿರಲಿಲ್ಲ. ಆದರೆ ರಾಜನ ಪುತ್ರಿಯಾಗಿದ್ದ ಶರ್ಮಿಷ್ಠೆ ರಾಜಕುಮಾರಿಯಾಗಿ ಗೌರವದಿಂದ ಈ ಅರಮನೆಗೆ ಬರಬೇಕಾಗಿದ್ದವಳು ಅವಳ ದುರಾದೃಷ್ಟದ...