Posts

Showing posts with the label many

ಮೂಲಪುರುಷ ಮನು

Image
  ನಾವು ಈ ಭೂಮಿಯ ಮೇಲೆ ಹುಟ್ಟಿದ್ದೇವೆ‌. ನಮ್ಮನ್ನು ಮಾನವರು ಅಥವಾ ಮನುಷ್ಯರು ಎಂದು ಕರೆಯಲಾಗುತ್ತದೆ. "ಮಂಗನಿಂದ ಮಾನವ" ಎಂಬ ಥಿಯರಿಗಳು ಏನೇ ಇರಬಹುದು. ಆದರೆ ನಮ್ಮ‌ ಪುರಾಣಗಳು ಹೇಳುವುದೇ ಬೇರೆ. ಹಾಗಾಗಿ ನಮ್ಮನ್ನು ಮನುಷ್ಯರು ಕರೆಯಲು ಏನಾದರೂ ನಿರ್ದಿಷ್ಟ ಕಾರಣವಿದೆಯೇ? ಮನುಷ್ಯರ ಜನ್ಮ ಹೇಗಾಯಿತು... ನಮ್ಮ ಮೂಲ ಪುರುಷ ಯಾರು... ಹಿಂದೂ ಧರ್ಮದ ಪುರಾಣದ ಅನುಸಾರ ನಾವು ಯಾರು ಎಂದು ತಿಳಿಯೋಣ ಬನ್ನಿ. ಮನುಷ್ಯನ ಹುಟ್ಟಿನ ಬಗ್ಗೆ ಒಂದೊಂದು ಧರ್ಮಗಳಲ್ಲಿಯೂ ಒಂದೊಂದು ರೀತಿಯ ಕಥೆಗಳಿವೆ. ಹಿಂದೂಗಳಲ್ಲಿಯೂ ಈ ಕುರಿತು ಪುರಾಣವಿದೆ. ಆದರೆ ಈ ಪುರಾಣದಲ್ಲಿ ಈಗಿರುವ ಮನುಕುಲದ ಮೂಲ ಪುರುಷ ಯಾರು ಅಂತ ಮಾತ್ರವಿದೆ. ಏಕೆಂದರೆ ಮನು ಸಂರಕ್ಷಿಸುವ ಮನುಷ್ಯ ಅಥವಾ ಪ್ರಾಣಿ-ಪಕ್ಷಿಗಳ ತಳಿಗಳು ಈ ಮೊದಲೇ ಇದ್ದವಲ್ಲ. ಸಂಸ್ಕೃತ ಪದವಾದ "ಮಾನವ" ಅಥವಾ "ಮನುಷ್ಯ" ಎಂಬ ಪದದ ಅರ್ಥ "ಮನುವಿನಿಂದ ಹುಟ್ಟಿದವರು" ಅಥವಾ "ಮನುವಿನ ಮಕ್ಕಳು" ಎಂದಾಗುತ್ತದೆ. ಮನುಗಳಲ್ಲಿ ಏಳನೆಯವನು ವೈವಸ್ವತ ಮನು. ಈತ ಜಗತ್ಪ್ರಳಯದಿಂದ ಮಾನವ ಕುಲವನ್ನು ಮತ್ತು ಉಳಿದ ಜೀವಿಗಳನ್ನು ರಕ್ಷಿಸಿದವನು ಮತ್ತು ನಮ್ಮ ವಂಶಾಭಿವೃದ್ಧಿಗೆ ಕಾರಣನಾದವನು. ಹಾಗಾಗಿ ನಾವೆಲ್ಲರೂ ಅವನ ಮಕ್ಕಳೇ. ಕಥೆ ಹೀಗಿದೆ. ಒಮ್ಮೆ ನದಿಯಲ್ಲಿ ವೈವಸ್ವತ ಮನು ಸ್ನಾನ ಮಾಡುತ್ತಿದ್ದಾಗ ಒಂದು ಸಣ್ಣ ಮೀನು ಬಂದು ಮನುವಿನ ಕಾಲನ್ನು ಕಚ್ಚುತ್ತದೆ. ಮನು ಅದನ್ನು...