Posts

Showing posts with the label ಭಸ್ಮಾಸುರ

ಭಸ್ಮಾಸುರ

Image
  "ಅಧಿಕಾರ ಸಿಕ್ಕರೆ ಸಾಲದು : ನಿಭಾಯಿಸಲೂ ಬರಬೇಕು"  ಭಸ್ಮಾಸುರ ಮಹಾನ್ ಶಿವಭಕ್ತ.  ತನ್ನ ದೇಹದ ಅಂಗಗಳನ್ನೇ ಆಹುತಿಯಾಗಿ ನೀಡುತ್ತಾ ಶಿವನಿಗಾಗಿ ತಪಸ್ಸು ಮಾಡಿದವನು. ಆದರೆ ಸಾಮಾನ್ಯವಾಗಿ ಉಗ್ರವಾಗಿ ತಪಸ್ಸು ಮಾಡುವವರ ಕೋರಿಕೆ ಅದೊಂದೇ ಆಗಿರುತ್ತದೆ.  ಏನೆಂದರೆ ಅವರಿಗೆ "ತಮಗೆ ಸಾವೇ ಬರಬಾರದು" ಎಂಬ ವರ‌ ಬೇಕಿರುತ್ತದೆ.  ಆ ವರಕ್ಕಾಗಿ ಇವರುಗಳು ಏನು ಮಾಡಲೂ ತಯಾರು ಇರುತ್ತಾರೆ. ಆದರೆ ಇವರು ತಮ್ಮ ಸ್ವಾರ್ಥಕ್ಕಾಗಿ ಉಗ್ರ ತಪಸ್ಸು ಮಾಡುತ್ತಾರೆಯೇ ಹೊರತೂ ಲೋಕ ಕಲ್ಯಾಣಕ್ಕಾಗಿ ಹಾಗೆ ಉಗ್ರ ತಪಸ್ಸು ಮಾಡಿದವರನ್ನು ನಾವು ಇದುವರೆಗೂ ಕಂಡಿಲ್ಲ ಎನ್ನುವುದು ಸತ್ಯ. ಇರಲಿ. ಭಸ್ಮಾಸುರನ ಪ್ರಚಂಡ ಭಕ್ತಿಗೆ ಮೆಚ್ಚಿ ಈಶ್ವರ ಪ್ರತ್ಯಕ್ಷನಾಗುತ್ತಾನೆ. ಆದರೆ ಭಸ್ಮಾಸುರ ಕೋರಿದಂತೆ ಸಾವೇ ಬಾರದಂತಹ ವರ ಕೊಡಲು ಸಾಧ್ಯವಿಲ್ಲ ಅಂತ ಸ್ಪಷ್ಟವಾಗಿ ನಿರಾಕರಿಸಿಬಿಡುತ್ತಾನೆ.  ಆಗ ಭಸ್ಮಾಸುರ ಬೇರೆ ವರ ಕೋರಿಕೊಳ್ಳುವ ಒತ್ತಡಕ್ಕೆ ಸಿಲುಕುತ್ತಾನೆ. ಅಸುರರಿಗೆ ವಿವೇಚನೆ ಕಡಿಮೆ. ಅದರಲ್ಲಿಯೂ ತನ್ನ ಅತ್ಯುಗ್ರ ತಪಸ್ಸು ದಂಡವಾದರೆ ಅನ್ನುವ ಆತಂಕದಲ್ಲಿ ಬೇರೇನೂ ಯೋಚಿಸಲು ಹೋಗದೇ "ತಾನು ಯಾರ ತಲೆಯ ಮೇಲೆ ಕೈ ಇಟ್ಟರೂ ಅವರು ಉರಿದು ಬೂದಿಯಾಗಬೇಕು" ಎಂಬ ವಿಚಿತ್ರವಾದ ವರ ಕೋರುತ್ತಾನೆ.  ಭಕ್ತವತ್ಸಲನಾದ ಈಶ್ವರನೂ ಯೋಚಿಸದೇ "ತಥಾಸ್ತು" ಎಂದೇ ಬಿಡುತ್ತಾನೆ. ಇಂತಹಾ ವರ ಪಡೆದೆ ಎಂದು ಭಸ್ಮಾಸುರನಿಗೆ ತಕ್ಷಣಕ್ಕೆ ಬಹಳ ಖುಷಿ...