ತ್ರಿದೇವಿಯರನ್ನು ಸೋಲಿಸಿದ ಅನಸೂಯಾ
ಸಪ್ತ ಮರ್ಷಿಗಳಲ್ಲಿ ಒಬ್ಬರಾದ ಅತ್ರಿ ಮಹರ್ಷಿ ಮತ್ತು ಅವರ ಪತ್ನಿ ಅನುಸೂಯಾರದ್ದು ಅನುರೂಪದ ದಾಂಪತ್ಯ. ಅನುಸೂಯಾಳ ಪತಿ ಭಕ್ತಿ ಲೋಕದಲ್ಲೆಡೆ ಪ್ರಸಿದ್ಧಿ ಹೊಂದಿತ್ತು. ಆದರೆ ಮಕ್ಕಳಿರದ ಕೊರಗು ಅವರನ್ನು ಸದಾ ಕಾಡುತ್ತಿತ್ತು. ಸಂತಾನಕ್ಕಾಗಿ ದೇವರಲ್ಲಿ ಪ್ರತಿನಿತ್ಯ ಬೇಡುತ್ತಿದ್ದರು. ಮಾಡದ ಪೂಜೆಯಿಲ್ಲ, ಹೋಮ-ಹವನವಿರಲಿಲ್ಲ. ಆದರೂ ಅವರಿಗೆ ಇನ್ನೂ ಸಂತಾನ ಪ್ರಾಪ್ತಿಯಾಗಿರಲಿಲ್ಲ. ಈ ವಿಷಯ ತಿಳಿದುಕೊಂಡ ತ್ರಿಮೂರ್ತಿಗಳ ಪತ್ನಿಯರಾದ ಲಕ್ಷ್ಮಿ, ಸರಸ್ವತಿ ಮತ್ತು ಪಾರ್ವತಿಯರು ಆ ದಂಪತಿಗಳಿಗೆ ಸಂತಾನ ಕರುಣಿಸಬೇಕೆಂದು ತೀರ್ಮಾನಿಸಿದರು. ಆದರೆ ಅದಕ್ಕೂ ಮೊದಲು ಅನಸೂಯಾಳ ಪತಿಭಕ್ತಿಯನ್ನೊಮ್ಮೆ ಪರೀಕ್ಷಿಸಲು ತೀರ್ಮಾನಿಸಿದರು. ಅದಕ್ಕಾಗಿ ತಮ್ಮ ಪತಿಯರನ್ನು ಅನಸೂಯಾಳ ಬಳಿ ಮುನಿ ವೇಷಧಾರಿಗಳಾಗಿ ಕಳಿಸಿ ನಿರ್ವಸ್ತ್ರ ಭಿಕ್ಷೆ ಕೇಳಲು ಹೇಳಿದರು. ಅಂದರೆ ವಸ್ತ್ರ ಧರಿಸದೇ ಮಾಡುವ ದಾನ. ಅದರಂತೆ ತ್ರಿಮೂರ್ತಿಗಳು ಋಷಿಗಳ ವೇಷ ಧರಿಸಿ ಬಂದು ಅನಸೂಯಾಳ ಬಳಿ ನಿರ್ವಸ್ತ್ರ ಭಿಕ್ಷೆ ಕೇಳಿದರು. ಅನಸೂಯಾಳಿಗೆ ಸಿಡಿಲೆರಗಿದಂತಾಯಿತು. ಇತ್ತ ಮುನಿಗಳಿಗೆ ಭಿಕ್ಷೆ ಇಲ್ಲ ಎನ್ನುವಂತಿಲ್ಲ. ಹಾಗೆಂದು ನಿರ್ವಸ್ತ್ರವಾಗಿ ಇವರ ಮುಂದೆ ಬರುವ ಹಾಗೆಯೂ ಇಲ್ಲ. ವಸ್ತ್ರವಿಲ್ಲದೇ ಇವರ ಮುಂದೆ ಬಂದರೆ ಕೂಡಲೇ ತನ್ನ ಪತಿವ್ರತಾ ಧರ್ಮಕ್ಕೆ ಅಪಚಾರವಾಗುತ್ತದೆ. ಇಷ್ಟು ದಿನ ನಿಯಮ ಬಿಡದೇ ಪಾಲನೆ ಮಾಡಿಕೊಂಡು ಬಂದವಳು ತಾನು. ಈಗ ಏಕಾಏಕಿ ಬಿಡಲಾಗೋಲ್ಲ. ಹಾಗೂ ಮಾಡುವಂತಿಲ್ಲ,...