Posts

Showing posts with the label aparne

ಅಪರ್ಣೆ

Image
  ತನ್ನ ಜೀವಕ್ಕೆ ಜೀವವಾಗಿದ್ದ ದಾಕ್ಷಾಯಿಣಿಯನ್ನು ಈಶ್ವರ ಕಳೆದುಕೊಂಡಿದ್ದ ದಿನಗಳು‌ ಅವು. ವಿರಹ ಸಹಿಸಲಾಗದ ಮಹಾದೇವ ಸೃಷ್ಟಿಕ್ರಿಯೆಯಲ್ಲಿ ತನ್ನ ಪಾತ್ರವೇನು ಎನ್ನುವುದನ್ನೇ ಮರೆತು ಗಾಢವಾದ ಧ್ಯಾನದಲ್ಲಿ ಮುಳುಗಿ ಹೋಗಿದ್ದ.  ಹಿರಿಯರು ಒಂದು ಮಾತು ಹೇಳ್ತಾರೆ.  ಕೋಪ ಬಂದಾಗ ಸುಮ್ಮನಿದ್ದುಬಿಡಬೇಕು‌ ಅಂತ. ಈಗ ಪರಮಶಿವ ಆ ಮಾತನ್ನು ಅಕ್ಷರಶಃ ಪಾಲಿಸುತ್ತಿದ್ದ. ಅವನು ಧ್ಯಾನ ಬಿಟ್ಟು ಎದ್ದರೆ ಜಗತ್ ಪ್ರಳಯವಾಗುತ್ತಿದ್ದುದು ಖಂಡಿತಾ. ಅಷ್ಟು ಕೋಪವಿತ್ತು ಅವನಿಗೆ. ಅದಕ್ಕಾಗಿ ಧ್ಯಾನದ ಮೂಲಕ ತನಗೆ ತಾನೇ ಸಮಾಧಾನಿಯಾಗುವ ಪ್ರಯತ್ನ ಮಾಡುತ್ತಿದ್ದ. ಇದೊಂದು ಕಡೆಯಾದರೆ ಮತ್ತೊಂದು ಕಡೆ ತಾರಕಾಸುರ ಎಂಬ ರಾಕ್ಷಸನ ಉಪಟಳ ದೇವತೆಗಳನ್ನು ಕಾಡುತ್ತಿತ್ತು. ಈ ರಾಕ್ಷಸನ ಸಾವು ಪರಮಶಿವನ ಮಗನ ಕೈಯಲ್ಲಿ ಆಗಬೇಕು ಎನ್ನುವುದು ವಿಧಿನಿಯಮ. ಎಲ್ಲಿಯ ಮಗ? ಪ್ರೀತಿಸುವ ಹೆಂಡತಿಯನ್ನು ಕಳೆದುಕೊಂಡು ಕಂಗಾಲಾಗಿದ್ದಾನೆ ಶಿವ.  ಹೆಂಡತಿಯೂ ಇಲ್ಲ... ಮಗನೂ ಇಲ್ಲ.. ಹಾಗಾಗಿ ತಾರಕ ಅಮರ! ಅವನನ್ನು ನಾಶಪಡಿಸುವವರೇ ಇರಲಿಲ್ಲ. ಆದರೆ ಅವನಿಗೆ ಗೊತ್ತಿರಲಿಲ್ಲ. ಸತಿಯೇ ಪರ್ವತರಾಜನ ಪುತ್ರಿಯಾಗಿ ಮರುಹುಟ್ಟು ಪಡೆದು ಪಾರ್ವತಿ ದೇವಿಯಾಗಿ ಅವತರಿಸಿದ್ದಾಳೆ ಅಂತ. ಪಾರ್ವತಿಯೂ ಶಿವನ‌ ಪರಮ ಭಕ್ತೆ. ಮಹರ್ಷಿ ನಾರದರಿಂದ ಶಿವನ ಬಗ್ಗೆ ತಿಳಿದಾಗಿನಿಂದ ಮದುವೆಯಾದರೆ ಶಿವನನ್ನೇ ಎಂಬ ಹಠ ಅವಳದ್ದು. ಅವನಿಗಾಗಿ ರಾಜಭೋಗಗಳನ್ನು ತೊರೆದು ಶಿವನಿರುವಲ್ಲಿಗೆ ಬಂದು ಧ್ಯ...