Posts

Showing posts with the label ದ್ರೌಪದಿ

ಹೆಂಡತಿ ಎಂದರೆ ಹೀಗಿರಬೇಕು! (ದ್ರೌಪದಿಯ ಮನದಾಳದ ಮಾತು)

Image
ನೈವ ಮೇ ಪತಯಸ್ಸಂತಿ ನ...  ಪುತ್ರಾನ ಚ ಬಾಂಧವಃ| ನ ಭ್ರಾತರೋ ನ ಚ ಪಿತಾ...  ನೈವಂ ತ್ವಮ್ ಮಧುಸೂದನ|| ಬದುಕಿನುದ್ದಕ್ಕೂ ಅಪಮಾನಗಳನ್ನು ಎದುರಿಸಿದ, ಜೀವನಪೂರ್ತಿ ಕಣ್ಣೀರಿನಲ್ಲಿ ಕೈ ತೊಳೆದ, ವೀರಾಧಿವೀರರಾದ ಐವರು ಗಂಡಂದಿರು ಇದ್ದರೂ, ಪರಪುರುಷರ ಮುಂದೆ ಅಪಮಾನ ಮಾಡಿಸಿಕೊಂಡ ದ್ರೌಪದಿ, ಕಡೆಗೆ ಹತಾಶಳಾಗಿ ನುಡಿದ ಮಾತಿದು.  " ನನಗೆ ಗಂಡಂದಿರೂ ಇಲ್ಲ.. ಪುತ್ರ-ಬಂಧು- ಬಾಂಧವರೂ ಇಲ್ಲ.. ಸೋದರನೂ ಇಲ್ಲ.. ತಂದೆಯೂ ಇಲ್ಲ.. ಕೊನೆಗೆ ನೀನೂ ಇಲ್ಲ ಕೃಷ್ಣ " ಎಂದು ನುಡಿಯುತ್ತಾಳೆ ಆಕೆ. ದ್ರೌಪದಿ ಆಗಿನ ಕಾಲದ ಸ್ತ್ರೀಯರಲ್ಲಿಯೇ ಅತ್ಯಂತ ಸುಂದರಿಯಾದ ಹೆಣ್ಣು. ಕೊಂಚ ಕಪ್ಪು ವರ್ಣದವಳಾದರೂ, ಬಣ್ಣ ಕಾಣದಷ್ಟು ನಯ-ನಾಜೂಕಿನ ಸುಂದರ ಮೈಮಾಟದವಳು. ವನವಾಸದ ಅವಧಿಯಲ್ಲಿ ಅತ್ಯಂತ ಸರಳ ಉಡುಗೆಯಲ್ಲಿದ್ದರೂ ಕಣ್ಸೆಳೆಯುವಂತಿದ್ದಳು.  ಅಗ್ನಿ ದೇ ವನ‌ ಪುತ್ರಿಯಾದ ದ್ರೌಪದಿಗೆ ಅವಳ 'ಧೈರ್ಯವೇ' ಮುಖದಲ್ಲಿ ತೇಜಸ್ಸು ಹೆಚ್ಚಲು ಕಾರಣವಾಗಿತ್ತು ಎನ್ನಬಹುದು. ಅನ್ಯಾಯಕ್ಕೆ ಬಗ್ಗದ, ಗಂಡಂದಿರ ಅಧರ್ಮವನ್ನು ಖಂಡಿಸುವ, ಅವರನ್ನು ಧರ್ಮಮಾರ್ಗದಲ್ಲಿ ನಡೆಯಲು ಪ್ರಚೋದಿಸುವ, ಹಾಗೆ ನಡೆದಾಗ ಮೆಚ್ಚುವ ದ್ರೌಪದಿಯ ಧೈರ್ಯವನ್ನು ನಾವೆಲ್ಲರೂ ಮೆಚ್ಚಲೇಬೇಕು. ದ್ರೌಪದಿ ವನವಾಸದ ಅವಧಿಯಲ್ಲಿ ಕಾಡು, ಮೇಡುಗಳಲ್ಲಿ ಅಲೆಯುವಾಗ ಸಿಕ್ಕ ನದಿ-ಜಲಪಾತದಲ್ಲಿ ಸ್ನಾನ ಮಾಡುತ್ತಿದ್ದರೆ, ಒದ್ದೆ ಬಟ್ಟೆಯಲ್ಲಿ ಎದ್ದು ಕಾಣುವ ಆಕೆಯ ಅಂಗಾಂಗ ಸೌಂದರ್ಯಕ್ಕೆ ಮಾರು ಹೋದ ...

ಸೈರಂಧ್ರಿ ಎಂಬ ಅಗ್ನಿಕನ್ಯೆ

  ಅವನು ಅವಳನ್ನು ನೋಡಿಯೂ ಸಹ ಇರಲಿಲ್ಲ. ಸೈರಂದ್ರಿಯನ್ನು ದಿಟ್ಟಿಸಿ ನೋಡುವುದಿರಲಿ, ಕಡೆಗಣ್ಣಿನಿಂದ ನೋಡುವುದಕ್ಕೂ ಅವರು ಅರ್ಹರೆಂದು ಕೀಚಕ ಭಾವಿಸಿರಲಿಲ್ಲ.  ವಿರಾಟನ ಅರಮನೆಯಲ್ಲಿ ಬೇಕಾದಷ್ಟು ಜನ ಸೈರಂದ್ರಿಯರಿದ್ದರು. ಎಲ್ಲರೂ ಇದ್ಧದ್ದು ಒಂದೇ ರೀತಿಯಲ್ಲಿ... ಪೋಷಣೆಯಿಲ್ಲದೇ ಸೊರಗಿದ ದೇಹ, ಕಾಂತಿಯಿಲ್ಲದ ನಿಸ್ತೇಜ ಕಣ್ಣುಗಳು, ಚುರುಕುತನವಿಲ್ಲದ ನಡಿಗೆ... ಪಾಪ.. ಅವರು ತಾನೇ ಹೇಗೆ ಖುಷಿಯಾಗಿರುತ್ತಾರೆ? ಬುದ್ಧಿ ಬಂದಾಗಿನಿಂದಲೂ ಅವರು ಈ ಅರಮನೆಯಲ್ಲಿ ಬಂಧಿಗಳಾಗಿದ್ದಾರೆ. ಮಹಾರಾಣಿ ಸುದೇಷ್ಣೆಯು ವಿರಾಟನನ್ನು ಮದುವೆಯಾಗಿ ಈ ಅರಮನೆಗೆ ಕಾಲಿಟ್ಟಾಗ ಅವಳೊಡನೆ ಬಂದ ಸಖಿಯರ ಪಡೆ ಇದು. ಮಹಾರಾಣಿಯ ಸೇವೆಯೊಂದೇ ಅವರ ಜೀವನದ ಪರಮಗುರಿ. ಆದರೆ ಇಂತಹ ನಡೆದಾಡುವ ಶವಗಳಂತಿರುವ ಸೈರಂದ್ರಿಯರು ತನ್ನಕ್ಕನನ್ನು ಮಾತ್ರ ಪ್ರತಿನಿತ್ಯವೂ ಮದುಮಗಳ ಹಾಗೆ ಅದು ಹೇಗೆ ಸಿಂಗರಿಸುತ್ತಾರೋ ಎಂದು ಸೋಜಿಗಗೊಳ್ಳುತ್ತಿದ್ದ ಕೀಚಕ. ಹಾಗೆಯೇ ಅಕ್ಕನಿಗೆ ಅಲಂಕಾರ ಮಾಡಿದ ಹಾಗೆ ತಾವು ಯಾಕೆ ಮಾಡಿಕೊಳ್ಳುವುದಿಲ್ಲವೋ ಅಂತಲೂ ಅಂದುಕೊಳ್ಳುತ್ತಿದ್ದ. ಅನಾಸಕ್ತಿಯೋ.. ಮತ್ತೊಂದೋ..? ಅಥವಾ ಇವರೆಲ್ಲಾ ಸಿಂಗರಿಸಿಕೊಂಡುಬಿಟ್ಟರೆ ತನಗಿಂತಲೂ ಚಂದ ಕಂಡು ಬಿಡುತ್ತಾರೆ ಅಂತ ಅಕ್ಕನಿಗೂ ಹೊಟ್ಟೆಕಿಚ್ಚೋ ಏನೋ? ಒಟ್ಟಿನಲ್ಲಿ ಸುದೇಷ್ಣೆಯ ಅಂತಃಪುರದಲ್ಲಿ ಇರುವಷ್ಟು ಹೊತ್ತು ಅವನು ತನ್ನ ಮತ್ತು ಅಕ್ಕನ ಉಪಸ್ಥಿತಿ‌ ಬಿಟ್ಟರೆ ಬೇರೆ ಯಾರನ್ನೂ ಪರಿಗಣಿಸುತ್ತಲೂ ಇರಲಿಲ್ಲ. ...

ದ್ರೌಪದಿ ಕೃಷ್ಣನಿಗೆ ಏನಾಗಬೇಕು?

Image
  ಅದು ಧರ್ಮರಾಯ ಇಂದ್ರಪ್ರಸ್ಥದಲ್ಲಿ ರಾಜಸೂಯ ಯಾಗ ನಡೆಸುತ್ತಿದ್ದಂತಹ ಸಮಯ. ಹಿರಿಯರು, ದೇವಾನುದೇವತೆಗಳು, ವಿಶ್ವವಂದ್ಯರೆಲ್ಲಾ ಆ ಸಭೆಯಲ್ಲಿದ್ದಾರೆ. ಅಂತಹಾ ತುಂಬಿದ ಸಭೆಯಲ್ಲಿ ಶಿಶುಪಾಲ ಶ್ರೀಕೃಷ್ಣನಿಗೆ ಕೇಳುತ್ತಾನೆ... "ದ್ರೌಪದಿ ನಿನಗೆ ಏನಾಗಬೇಕು?" ಇದು ನಮ್ಮ-ನಿಮ್ಮಂಥಾ ಸಾಮಾನ್ಯರು ಯೋಚಿಸುವಂಥದ್ದು. ಆದರೆ ನೀಚರ ಯೋಚನೆಯೇ ಬೇರೆ.  ಅವರ ಪ್ರಕಾರ ಒಂದು ಗಂಡು ಮತ್ತು ಒಂದು ಹೆಣ್ಣಿನ ನಡುವೆ ಭಾತೃತ್ವ ಇಲ್ಲದಿದ್ದರೆ, ಅವರಿಬ್ಬರ ನಡುವೆ ಇರುವುದೊಂದೇ ಲೈಂಗಿಕ ಸಂಬಂಧ. ಅವರ ಯೋಚನೆಯ ಮಟ್ಟವೇ ಅಷ್ಟು.. ಅವರೆಂದೂ ಆ ಮಟ್ಟ ಮೀರಲಾರರು.  ಈ  ಕೀಳುಮಟ್ಟದ ಯೋಚನೆಗಾಗಿ ಶಿಶುಪಾಲ ಶ್ರೀಕೃಷ್ಣನಿಂದ ಹತನಾಗುತ್ತಾನೆ.  ಆದರೆ ಅವನು ಎತ್ತಿದ್ದ ಪ್ರಶ್ನೆಗೆ ಉತ್ತರವೇನು?  ಈ ಪ್ರಶ್ನೆ ದ್ರೌಪದಿಗೂ ಸಹ ಸದಾ ಕಾಡುತ್ತಿತ್ತು. ಏಕೆಂದರೆ ಅವಳೂ ನಮ್ಮ ನಿಮ್ಮೆಲ್ಲರ ಹಾಗೆ ಈ ಭೂಮಿಯ‌ ಮೇಲೆ   ಹುಟ್ಟಿದವಳು. ಹುಟ್ಟುವ ಮುಂಚೆ  ಅವಳ್ಯಾವ  ದೇವತೆಯೋ, ಅಪ್ಸರೆಯೋ ನಮಗೆ ಗೊತ್ತಿಲ್ಲ. ಅಪ್ಸರೆ ಅಥವಾ ದೇವತೆಗಳಿಗೆ  ಈ ಕಾನೂನು ಅನ್ವಯಿಸುವುದೂ ಇಲ್ಲ.   ಆದರೆ ಭೂಮಿಯ ಮೇಲೆ ಎಂತಹಾ ರಾಜ ಮನೆತನದಲ್ಲಿ ಹುಟ್ಟಿದರೂ ಸಹ ಸ್ತ್ರೀ ಆದವಳು  ಹುಟ್ಟಿದ ಮೇಲೆ ಜೀವನದಲ್ಲಿ ಒಮ್ಮೆಯಾದರೂ ಎದುರಿಸಲೇ...

ದ್ರೌಪದಿ ಐವರನ್ನು ಮದುವೆಯಾದದ್ದು..!

Image
  ದ್ರೌಪದಿ ಅಗ್ನಿಕುಂಡದಲ್ಲಿ ಹುಟ್ಟಿದ ಹೆಣ್ಣು. ಅದರಲ್ಲಿಯೂ ತಂದೆಯ ಅಪಮಾನದ ಸೇಡಿನ ಜ್ವಾಲೆಯ ಹಿನ್ನೆಲೆಯಲ್ಲಿ ಹುಟ್ಟಿ ಬಂದವಳು. ಯುವತಿಯಾಗಿಯೇ ಹುಟ್ಟಿ ಬಂದದ್ದರಿಂದ ಮಾನವರೆಲ್ಲರಿಗೂ ಸಹಜವಾಗಿ ಸಿಗುವ ಬಾಲ್ಯ ಈಕೆಗೆ ಸಿಗಲಿಲ್ಲ. ಅಲ್ಲದೇ ದ್ರುಪದನೇ ಈಕೆಯ ತಂದೆಯೂ, ತಾಯಿಯೂ ಆಗಿ ಸಾಕಿದ್ದರಿಂದ ತಾಯಿ ಪ್ರೀತಿಯಿಂದಲೂ ಈಕೆ ವಂಚಿತೆ. ಅದಕ್ಕೆ ತನ್ನತ್ತೆ ಕುಂತಿಯನ್ನು ಆಕೆ ಅಷ್ಟು ಹಚ್ಚಿಕೊಂಡಿದ್ದು. ಸ್ವಯಂವರದಲ್ಲಿ ಅರ್ಜುನ ಇವಳನ್ನು ಗೆದ್ದು ತಂದಾಗ ಕುಚೇಷ್ಟೆಗೆ ಅವರಾಡಿದ ಮಾತು ಸಮಸ್ಯೆಗೆ ಕಾರಣವಾಯ್ತು. "ಭಿಕ್ಷೆ ತಂದಿದ್ದೇವೆ" ಎಂಬ ಮಾತಿಗೆ ಕುಂತಿ "ಐವರೂ ಸಮನಾಗಿ ಹಂಚಿಕೊಳ್ಳಿ" ಎನ್ನುತ್ತಾಳೆ.  ಇದು ತಿಳಿಯದೇ ಆದ ತಪ್ಪು.  ಕುಂತಿಗೆ ಭಿಕ್ಷೆಯಲ್ಲಿ ಏನು ತಂದಿದ್ದಾರೆ ಎಂದು ತಿಳಿದಿರಲಿಲ್ಲ. ಏನೋ ತಿನಿಸು ದೊರೆತು ಅದನ್ನು ಅರ್ಜುನನೋ, ಭೀಮನೋ ಯಾರಿಗೂ ಕೊಡದೇ ತಿಂದರೆ ಉಳಿದವರಿಗೆ ತಿನ್ನಲು ಸಿಗದೇ ಅನ್ಯಾಯವಾಗುತ್ತದೆ ಎಂಬ ಆತಂಕವಷ್ಟೇ ಅವಳಿಗೆ ಇದ್ದದ್ದು.  ಮೊದಲೇ ಭೀಮನಿಗೆ ತಿನ್ನಲು ಹೆಚ್ಚು ಬೇಕು.  ಈಗ ಸಿಕ್ಕಿದ್ದಷ್ಟನ್ನೂ ಭೀಮನೊಬ್ಬನೇ ತಿಂದುಬಿಟ್ಟರೆ ಉಳಿದ ಮಕ್ಕಳಿಗೆ ಏನೂ ಸಿಗದಂತಾಗುತ್ತದೆ ಎಂಬ ಕಾರಣದಿಂದಲೇ ಭಿಕ್ಷೆಯಲ್ಲಿ ಏನು ಸಿಕ್ಕಿದೆ ಅಂತ ಕೇಳುವ ಮೊದಲೇ ಅವಳ ಮಾತೃ ಹೃದಯ ಈ ಮಾತನ್ನು ಹೇಳಿಸಿರುತ್ತದೆ.‌ ಕಷ್ಟವೇ ಬರಲಿ, ಸುಖವೇ ಬರಲಿ ಒಟ್ಟಿಗೆ ಅನುಭವಿಸಿ ಎಂಬುದು ಕುಂತಿ ಹೇಳಿದ ಮಾತಿನ ಅರ್ಥ. ಅ...