Posts

ಸುಭದ್ರೆ

Image
 "ತನ್ನನ್ನು ತಾನೇ ಅಪಹರಿಸಿಕೊಂಡ ಸುಭದ್ರೆ" ಹೆಣ್ಣುಮಕ್ಕಳಲ್ಲಿ ಸದಾ ಒಂದು ದ್ವಂದ್ವ ಕಾಡುತ್ತಿರುತ್ತದೆ. ಏನೆಂದರೆ ಅವರು ಯಾವುದನ್ನು ತಮ್ಮ ಮನೆ ಎಂದುಕೊಂಡಿರುತ್ತಾರೋ ವಾಸ್ತವವಾಗಿ ಅವರುಗಳು ಆ ಮನೆಯನ್ನು ಶಾಶ್ವತವಾಗಿ ಬಿಟ್ಟು ಗಂಡನ ಮನೆಗೆ ಹೋಗಬೇಕಾಗಿರುತ್ತದೆ.  ಹೆಣ್ಣುಮಕ್ಕಳಿಗೆ ಚಿಕ್ಕಂದಿನಿಂದಲೇ ಪತಿಭಕ್ತಿಯ ಬಗ್ಗೆ ಹೇಳಿಕೊಡುವುದರಿಂದ ಅವರುಗಳು ಪತಿ ಸೇವೆಯಲ್ಲಿಯೇ ತಮ್ಮ ಸಾರ್ಥಕ್ಯ ಕಾಣಲು ಮಾನಸಿಕವಾಗಿ ತಯಾರಾಗಿರುತ್ತಾರೆ.  ಆದರೆ ಮದುವೆಯಾಗುವಾಗ ತಾವಿಷ್ಟ ಪಟ್ಟವನ ಜೊತೆಯೇ ಮದುವೆಯಾಗುವಂತಾಗಲಿ ಎಂದು ಬಯಸುತ್ತಾರೆ. ಯಾವುದೋ ಅಪರಿಚಿತನ ಜೊತೆ ತನ್ನ ಮದುವೆ ಮಾಡಲಾಗುತ್ತದೆ ಎಂಬ ಸತ್ಯ ಅರಗಿಸಿಕೊಳ್ಳಲಾಗುವುದಿಲ್ಲ ಅವರಿಂದ. ಆದರೆ ಮದುವೆ ಎನ್ನುವುದು ಎಲ್ಲಾ ಹೆಣ್ಣುಮಕ್ಕಳ ಬಾಳಿನಲ್ಲಿಯೂ ಕಡ್ಡಾಯವಾಗಿ ನಡೆಯಬೇಕಾದ ಕ್ರಿಯೆ. ಹಾಗಾಗಿ ವಿಧಿಯಿಲ್ಲದೇ ತಮ್ಮ ಮನಸ್ಸನ್ನು ತಾವೇ ಸಂತೈಸಿಕೊಳ್ಳುತ್ತಾರೆ.  ಕೆಲವರು ತಾವು ಇಷ್ಟ ಪಟ್ಟವರೊಂದಿಗೆ ಖುಷಿಯಾಗಿರುತ್ತಾರೆ. ಉಳಿದವರು ಪರಿಸ್ಥಿಯೊಡನೆ ರಾಜಿ ಮಾಡಿಕೊಂಡು ಬದುಕುತ್ತಿರುತ್ತಾರೆ. ಕೃಷ್ಣನ ತಂಗಿಯಾದ ಸುಭದ್ರೆಗೂ ಇಂತಹದ್ದೇ ಪರಿಸ್ಥಿತಿ ಎದುರಾಗಿತ್ತು. ಅವರಿಬ್ಬರಿಗೂ ಹಿರಿಯ ಅಣ್ಣನಾದ ಬಲರಾಮನು ಅವಳನ್ನು ಒಂದು ಮಾತೂ ಕೇಳದೇ ಕೌರವ ರಾಜಕುಮಾರನಾದ ದುರ್ಯೋಧನನೊಡನೆ ಅವಳ ಮದುವೆಯನ್ನು ನಿಶ್ಚಯಿಸಿಕೊಂಡು ಬಂದು ಬಿಡುತ್ತಾನೆ.  ಸುಭದ್ರಗೆ ದುರ್ಯೋಧನ ಇಷ್ಟವಿರಲಿಲ್...

ಮಹಾ ಪತಿವ್ರತೆ ಸತಿ

Image
  ಅವಳು ಕಾಯುತ್ತಲೇ ಇದ್ದಳು. ಆಹ್ವಾನ ಆಗ ಬರಬಹುದು, ಈಗ ಬರಬಹುದು ಅಂತ.‌ ಕೈಲಾಸಕ್ಕೇನು ಬಾಗಿಲೇ, ಕಿಟಕಿಯೇ, ಮತ್ತೊಂದೇ? ಎಲ್ಲಿಂದ ಕುಳಿತು ನೋಡಿದರೂ ಬರುವವರು ನೇರವಾಗಿ ಕುಳಿತಲ್ಲಿಗೇ ಕಾಣುತ್ತಿದ್ದರು. ಆದರೂ ಯಾರೂ ಬರದೇ ಇರುವುದು ಅವಳ ಆತಂಕ ಹೆಚ್ಚಿಸಿತ್ತು.  ಕುಳಿತಿರಲಾರದೇ ಎದ್ದು ಓಡಾಡತೊಡಗಿದಳು. ಯಾರಲ್ಲಿ ಹೇಳಿಕೊಳ್ಳುವುದು ಈ ಆತಂಕವನ್ನು? ಗಂಡನ ಮನೆ ಎಂದಿಗೂ ಗಂಡನ ಮನೆಯೇ... ಅಲ್ಲಿ ಅವಳ ಒಳಮನಸ್ಸಿನ ಮರ್ಮವನ್ನು ತಾವಾಗಿಯೇ ಅರಿತು ಅದಕ್ಕೆ ತಕ್ಕುದಾದ ಮಾತನ್ನಾಡುವವರು ಬಹಳ ವಿರಳ.  ಅವಳ ಗಂಡನಿಗೆ ಇದರ ಅರಿವಾಗುತ್ತಿದ್ದರೂ ಸುಮ್ಮನೆ ಕಣ್ಮುಚ್ಚಿ ಕುಳಿತಿದ್ದ. ಅವಳು ದಕ್ಷನ ಮಗಳು ದಾಕ್ಷಾಯಿಣಿ. ತನ್ನ ತಂದೆ ಮಾಡಲಿರುವ ಮಹಾನ್ ಯಜ್ಞದ ಆಹ್ವಾನಕ್ಕಾಗಿ ಕಾದು ಕುಳಿತು ಸೋತು ಬೆಂಡಾಗಿದ್ದಳು. ಅವಳಿಗೆ ತನ್ನ ತಂದೆ ಉದ್ದೇಶಪೂರ್ವಕವಾಗಿ ತನ್ನನ್ನು ಕರೆದಿಲ್ಲ ಎಂಬ ಸತ್ಯ ತಿಳಿದಿರಲಿಲ್ಲ. ಕರೆಯಲು ಮರೆತಿರಬಹುದು ಎಂದೊಮ್ಮೆ ಯೋಚಿಸಿದರೆ, ಮಗದೊಮ್ಮೆ ತಂದೆ ಬಾಯಿಬಿಟ್ಟು ಕರೆಯಲು ತಾನೇನು ಹೊರಗಿನವಳೇ, ಮನೆಯವರನ್ನು ಯಾರಾದರೂ ಕರೆಯುತ್ತಾರೆಯೇ ಅಂತ ತನಗೆ ತಾನೇ ಸಮಾಧಾನ ಮಾಡಿಕೊಳ್ಳುತ್ತಿದ್ದಳು.  ಆದರೂ ಅವರು ಕರೆಯದೇ ತಾನು ಹೋಗಲು ಏನೋ ಒಂದು ಅಳುಕು ಕಾಡುತ್ತಿತ್ತು ಅವಳಿಗೆ. ತಂದೆಯ ಇಚ್ಛೆಗೆ ವಿರುದ್ಧವಾಗಿ ಪರಶಿವನನ್ನು ಮದುವೆಯಾದುದರಿಂದಲೋ ಏನೋ... ತಂದೆಯೊಮ್ಮೆ ಬಾಯ್ತುಂಬಾ "ಬಾ ಮಗಳೇ.." ಅಂತ ಒಮ್ಮೆ ಕರೆದುಬಿಟ್ಟ...

ವಾತಾಪಿ ಜೀರ್ಣೋಭವ

Image
  ಸಾಮಾನ್ಯವಾಗಿ ನಮ್ಮ ಸಾಹಿತಿಗಳು ತಮ್ಮ ಕಥೆ-ಕಾದಂಬರಿಗಳಲ್ಲಿ ಹೆಂಡತಿಯನ್ನು ಹಣಕ್ಕಾಗಿ, ಮತ್ತೊಂದಕ್ಕಾಗಿ ಅಥವಾ ಅನುಮಾನಪಟ್ಟು ಪೀಡಿಸುವ ಗಂಡಂದಿರ ಬಗ್ಗೆ ಮಾತ್ರವೇ ಬರೆಯುತ್ತಾರೆ. ಆದರೆ ಗಂಡನನ್ನು ಸಹ ಪೀಡಿಸುವ ಹೆಂಡತಿಯರು ಇರುತ್ತಾರೆ ಎನ್ನುವುದು ಗೊತ್ತೇ? ಹೌದು.  ಪ್ರಾಪಂಚಿಕ ಸುಖ-ಸಂಪತ್ತಿಗಾಗಿ, ಐಷಾರಾಮದ ವಸ್ತುಗಳಿಗಾಗಿ ಪೀಡಿಸುವ ಪತ್ನಿಯರು ಹಿಂದೆಯೂ ಇದ್ದರು, ಈಗಲೂ ಇದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಪುರಾಣದ ಋಷಿಮುನಿಗಳಿಗೂ ಈ ಕಾಟ ತಪ್ಪಿರಲಿಲ್ಲ ಎಂದರೆ ಆಶ್ಚರ್ಯವಾಗುತ್ತದೆ ಅಲ್ಲವೇ? ಮುನಿಜನರೇ ಇದಕ್ಕೆ ಬಲಿಯಾದರೆ ಸಾಮಾನ್ಯ ಜನರ ಪಾಡೇನು ಎನಿಸುತ್ತದೆ. ಒಮ್ಮೆ ಸರ್ವಸಂಗ ಪರಿತ್ಯಾಗಿಗಳಾದ ಅಗಸ್ತ್ಯ ಮಹರ್ಷಿಗಳಿಗೂ ಸಹ ತಮ್ಮ ಹೆಂಡತಿಗಾಗಿ ಈ ಕಾರ್ಯ ಮಾಡಬೇಕಾಗಿ ಬಂದಿತ್ತು. ಘಟನೆ ಹೀಗಿದೆ: ಅಗಸ್ತ್ಯ ಮುನಿಗಳು ತಮ್ಮ ತಪಸ್ಸಿಗಾಗಿ ಕಾಡಿನ ದಾರಿಯಲ್ಲಿ ನಡೆಯುತ್ತಿದ್ದಾಗ ಒಂದು ಮರದಲ್ಲಿ ತಲೆಕೆಳಕಾಗಿ ನೇತಾಡುತ್ತಿದ್ದ ಕೆಲವು ಆತ್ಮಗಳು ಕಾಣ ಸಿಗುತ್ತವೆ. ಅವರೆಲ್ಲಾ ಯಾರೆಂದು ವಿಚಾರಿಸಿದಾಗ ಆ ಆತ್ಮಗಳು ತಮ್ಮ ಪೂರ್ವಜರೇ ಎಂದು ಗೊತ್ತಾಗಿ ಆಘಾತವಾಗುತ್ತದೆ ಮುನಿಗಳಿಗೆ. ಆದರೆ ಅವರುಗಳು ಹೀಗೆ ಯಾಕೆ ನೇತಾಡುತ್ತಿದ್ದಾರೆ ಎಂದು ಅರ್ಥವಾಗದೇ ಅವರನ್ನು ವಿಚಾರಿಸಿದಾಗ ಅದಕ್ಕೆ ಕಾರಣ ತಾನೇ ಎಂದು ತಿಳಿಯುತ್ತದೆ.  ತಾನು ಮದುವೆಯಾಗದೇ, ತನಗೆ ಮಕ್ಕಳಾಗದೇ ಇರುವುದರಿಂದ ಈ ಆತ್ಮಗಳಿಗೆ ಆತ್ಮ ಸಾಕ್ಷಾತ್ಕಾರವಾಗಿಲ್ಲ ಎಂದು ಅರ...

ಅಣಿ ಮಾಂಡವ್ಯ

Image
  ಹೊಗಳಿಕೆಯನ್ನು ಹೊನ್ನಶೂಲ ಎನ್ನಲಾಗುತ್ತದೆ. ಮನುಷ್ಯರನ್ನು ಏನಾದರೂ ಶೂಲಕ್ಕೇರಿಸಿದರೆ ಪ್ರಾಣವೇ ಹೋಗಿ ಬಿಡುತ್ತದೆ. ಅಷ್ಟಾದರೂ ಜನರು ಹೊಗಳಿಕೆ ಎಂಬ ಹೊನ್ನಶೂಲದ ಮೋಹ ಬಿಡಲಾರರು. ಆದರೆ ಈ ಮೋಹ, ಮದ, ಮತ್ಸರಗಳನ್ನು ಬಿಟ್ಟ ಒಬ್ಬ ಋಷಿಯನ್ನು ಅವರು ಮಾಡದ ತಪ್ಪಿಗೆ ಒಮ್ಮೆ ಶೂಲಕ್ಕೇರಿಸಲಾಗಿತ್ತು.  ಅವರು ಮೊದಲೇ ಋಷಿಗಳು. ತಮ್ಮ ಭೌತಿಕ ದೇಹವನ್ನು ದಂಡಿಸಿ ಶಿಸ್ತಾಗಿ ಇಟ್ಟುಕೊಂಡಿದ್ದರು. ಅವರನ್ನು ಆ ಶೂಲದಿಂದ ಏನೂ ಮಾಡಲಾಗಿಲ್ಲ. ಅದರಿಂದ ಅವರು ಸಾಯಲಿಲ್ಲ. ಬದಲಿಗೆ ಆ ಶೂಲವನ್ನೇ ತಮ್ಮೊಂದಿಗೆ ಹೊತ್ತು ತಿರುಗಿದರು. ಅವರೇ ಅಣಿ ಮಾಂಡವ್ಯ ಋಷಿಗಳು. ಒಮ್ಮೆ ಅರಮನೆಯಲ್ಲಿ ಕಳ್ಳತನವಾಗುತ್ತದೆ‌. ಕಳ್ಳತನ ಮಾಡಿದ ಗುಂಪು ಅರಮನೆಯ ಕಾವಲಿನ ಸೈನಿಕರಿಂದ ತಪ್ಪಿಸಿಕೊಳ್ಳುತ್ತಾ ಬರುತ್ತಿರುವಾಗ ಎದುರಿನಲ್ಲಿ ಮಾಂಡವ್ಯ ಮಹರ್ಷಿಗಳ ಆಶ್ರಮ ಎದುರಾಗುತ್ತದೆ. ಆಶ್ರಮದಲ್ಲಿ ಅಡಗಿಕೊಂಡರೆ ಬಹುಶಃ ಯಾರಿಗೂ ಕಂಡುಹಿಡಿಯಲಾಗದು ಅಂತ ತಿಳಿದು ಕಳ್ಳರು ಆಶ್ರಮದ ಒಳ ಹೊಕ್ಕು ಅಡಗಿಕೊಳ್ಳುತ್ತಾರೆ‌.  ಆಶ್ರಮದ ಒಳಗೆ ಧ್ಯಾನ ನಿರತರಾಗಿದ್ದ ಮಾಂಡವ್ಯ ಮಹರ್ಷಿಗಳಿಗೆ ಕಳ್ಳರು ಬಂದದ್ದು, ಅಡಗಿದ್ದು ಒಂದೂ ಗೊತ್ತಾಗುವುದಿಲ್ಲ. ಆದರೆ ದುರಾದೃಷ್ಟವಶಾತ್ ಸೈನಿಕರು ಕಳ್ಳರನ್ನು ಹುಡುಕುತ್ತಾ ಆಶ್ರಮದ ಒಳಗೇ ಬಂದು ಬಿಡುತ್ತಾರೆ. ಧ್ಯಾನ ಮಾಡುತ್ತಿದ್ದ ಮಾಂಡವ್ಯ ಮಹರ್ಷಿಗಳ ಬಳಿ ಕಳ್ಳರ ಬಗ್ಗೆ ವಿಚಾರಿಸುತ್ತಾರೆ.  ಮಹರ್ಷಿಗಳು ಈ ಲೋಕದಲ್ಲಿ ಇದ್ದರೆ ತಾನೇ ಸೈನ...

ಭೀಮ

Image
 "ಅವಮಾನವಿದ್ದಲ್ಲಿ ಪ್ರತೀಕಾರವಿರುತ್ತದೆ" ಭೀಮನು ಪಂಚ ಪಾಂಡವರಲ್ಲಿ ಎರಡನೆಯವನು. ಅಷ್ಟೇ ಅಲ್ಲ ದ್ರೌಪದಿಯ ಅಚ್ಚುಮೆಚ್ಚಿನ ಗಂಡ ಇವನು. ಗಂಡನಿದ್ದರೆ ಇಂತವನಿರಬೇಕು ಅಂತ ಎಲ್ಲಾ ಮಹಿಳೆಯರೂ ಬಯಸುವಂತೆ ಇರುವವನು ಭೀಮ. ಕಾರಣವೇನೆಂದರೆ ಇಡೀ ಮಹಾಭಾರತದಲ್ಲಿ ದ್ರೌಪದಿಯ ಎಲ್ಲಾ ಆಸೆಗಳನ್ನು ಯಾಕೆ, ಏನು ಅಂತ ಒಂದು ಮಾತೂ ಕೇಳದೇ ನೆರವೇರಿಸಿದವನು ಭೀಮನೊಬ್ಬನೇ. ಹಾಗಾಗಿ ದ್ರೌಪದಿಗೂ ಇವನ ಬಗ್ಗೆ ಕೊಂಚ ಮೃದು ಧೋರಣೆ ಇತ್ತು.  ಇವನು ವಾಯುವಿನ ಮಗ ಆದ್ದರಿಂದ ಮಹಾನ್ ಶಕ್ತಿವಂತ.  ಎಷ್ಟೆಂದರೆ ಇವನ ಹುಟ್ಟಿನ ಬಗ್ಗೆಯೇ ಒಂದು ಕಥೆಯಿದೆ. ಇವನು ಹುಟ್ಟಿದ ಕೂಡಲೇ ಹುಲಿಯ ಘರ್ಜನೆ ಕೇಳಿಸಿತೆಂದು ಕುಂತಿ ಮಗುವನ್ನು ಬೆಟ್ಟದ ಮೇಲಿನಿಂದ ಕೆಳಗೆ ಬೀಳಿಸಿಬಿಡುತ್ತಾಳಂತೆ. ಆದರೆ ಕೆಳಗಿಳಿದು ಬಂದು ನೋಡಿದಾಗ ಮಗುವಿಗೆ ಏನೂ ಆಗಿರುವುದಿಲ್ಲ. ಬದಲಿಗೆ ಬಂಡೆಯೇ ಬಿರುಕು ಬಿಟ್ಟಿರುತ್ತದಂತೆ. ಇವನ ಶಕ್ತಿಯ ಪರಿಚಯ ಮತ್ತೊಮ್ಮೆ ನಮಗಾಗುವುದು ಕುರುಕ್ಷೇತ್ರ ಯುದ್ಧದಲ್ಲಿ. ತುಂಬಿದ ಸಭೆಯಲ್ಲಿ ದ್ರೌಪದಿಗೆ ಆದ ಅವಮಾನಕ್ಕೆ ತಕ್ಕ ಪ್ರತೀಕಾರ ತೀರಿಸಲು ಭೀಮನು ಹದಿಮೂರು ವರ್ಷ ತಾಳ್ಮೆಯಿಂದ ಕಾದಿರುತ್ತಾನೆ. ಕಾದಷ್ಟೂ ಸಿಟ್ಟು ಹೆಚ್ಚಾಗುವುದೇ ಹೊರತೂ ಕಡಿಮೆಯಾಗುವುದಿಲ್ಲ. ಮನಸ್ಸಿನೊಳಗೆ ಉರಿವ ಜ್ವಾಲಾಮುಖಿಯನ್ನು ಇರಿಸಿಕೊಂಡೇ ಹನ್ನೆರೆಡು ವರ್ಷ ವನವಾಸ ಮತ್ತು ಒಂದು ವರ್ಷ ಅಜ್ಞಾತವಾಸ ಮುಗಿಸಿರುತ್ತಾನೆ. ಅವನಿಗಿರುವ ಶಕ್ತಿಗೆ ಒಂದೇ ಬಾರಿಗೆ ಇಡೀ ಕೌರವರನ್ನು...

ಮೇನಕೆ

Image
" ಮೇನಕೆಯೂ ಒಬ್ಬ ಹೆಣ್ಣು" ಭೂಲೋಕದ ಹೆಣ್ಣುಮಕ್ಕಳಿಗೆ ಅಪ್ಸರೆಯರು ಎಂದರೆ ಏನೋ ಒಂದು ರೀತಿಯ ಕುತೂಹಲ. ತಾವೂ ಅವರಂತೆ ಆಗಬೇಕು ಎಂಬ ಹಂಬಲ. ಕಾರಣವೇನೆಂದರೆ ನಮ್ಮ ಪುರಾಣಗಳಲ್ಲಿ‌ ಅಪ್ಸರೆಯರನ್ನು ವಿಶೇಷವಾಗಿ ವರ್ಣಿಸಿರುವುದು ಮತ್ತು ಅವರು ಚಿರಯೌವ್ವನಿಗರಾಗಿರುವುದು. ಅಪ್ಸರೆಯರು ಎಂದರೆ ಅತಿಲೋಕ ಸುಂದರಿಯರು ಎಂಬಂತೆ ಕಥೆ-ಕಾವ್ಯಗಳಲ್ಲಿ ಚಿತ್ರಿತವಾಗಿದೆ.  ಭೂಲೋಕದ ಯಾವುದೇ ವಸ್ತುವಿನ ಮೇಲೆ ವ್ಯಾಮೋಹವಿಲ್ಲದೆ ಪಾರಮಾರ್ಥ ಸಾಧನೆಗಾಗಿ ತಪಸ್ಸು ಮಾಡುವ ಋಷಿ-ಮುನಿಗಳ ಚಿತ್ತವನ್ನೇ ಅಪಹರಿಸುವ ಶಕ್ತಿ ಅವರಿಗಿದೆ ಅಂದ ಮೇಲೆ ಸಾಮಾನ್ಯ ಮನುಷ್ಯರು ಅವರ ಮೇಲೆ ಮೋಹಗೊಳ್ಳುವುದು ಹೆಚ್ಚಲ್ಲ‌. ಯಾರನ್ನೇ ಆದರೂ ಕ್ಷಣಮಾತ್ರದಲ್ಲಿ ಪರವಶರನ್ನಾಗಿಸುವ ಮತ್ತು ತಮಗೆ ಬೇಕಾದಂತೆ ರೂಪ ಹೊಂದಬಲ್ಲವರಾಗಿದ್ದ ಅಪ್ಸರೆಯರು ನಿಜಕ್ಕೂ ಬಹಳ ಸ್ವೇಚ್ಛಾಚಾರಿಗಳೇ ಎಂಬ ಪ್ರಶ್ನೆಗೆ 'ಇಲ್ಲ...' ಎಂದು ಉತ್ತರಿಸಬೇಕಾಗುತ್ತದೆ. ಏಕೆಂದರೆ ಇವರು ಸ್ವರ್ಗದಲ್ಲಿ ದೇವೇಂದ್ರನ ಅಡಿಯಾಳಾಗಿದ್ದವರು. ಇಂದ್ರನ ಆಸ್ಥಾನದಲ್ಲಿ ಗಾಯನ, ನರ್ತನಗಳನ್ನು ಮಾಡುತ್ತಾ ಸಭಾಸದರ ಮನರಂಜನೆಗೆಗಾಗಿಯೇ ಮೀಸಲಾಗಿದ್ದವರು. ಆಗಾಗ ಭೂಮಿಯಲ್ಲಿ ತಪಸ್ಸು ಮಾಡುವ ಮುನಿಗಳ ತಪಸ್ಸು ಕೆಡಿಸುವ ಕೆಲಸಕ್ಕಾಗಿಯೂ ಬಳಸಲ್ಪಡುತ್ತಿದ್ದರು. ಮುಪ್ಪಿಲ್ಲದ-ಸಾವಿಲ್ಲದ ಅವರ ದೇಹ ಕೇವಲ ಬೇರೆಯವರ ಕಾಮನೆ ತಣಿಸುವುದಕ್ಕೆ ಮಾತ್ರವೇ ಬಳಕೆಯಾಗುತ್ತಿತ್ತು. ವಿಪರ್ಯಾಸವಲ್ಲವೇ? ಅವರಲ್ಲೊಬ್ಬಳು ಮೇನಕೆ: ಹೆಣ...

ಪರೀಕ್ಷಿತ

Image
" ಆಗಬೇಕಾದ್ದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ" ಮನುಷ್ಯನಾದವನು ಎಂಥದೇ ಪರಿಸ್ಥಿತಿಯಲ್ಲಿ ಪ್ರಚೋದನೆಗೆ ಒಳಗಾಗದೇ, ಸಿಟ್ಟಿನ ಕೈಗೆ ಬುದ್ಧಿ ಕೊಡದೇ ಶಾಂತನಾಗಿ ಬದುಕಿದರೆ ಅದೇ ಒಂದು ದೊಡ್ಡ ಸಾಧನೆ. ಈ ಸಿಟ್ಟು ಉಂಟುಮಾಡುವ ಅವಿವೇಕತನದಿಂದ ಎಂತಹ ಘಟಾನುಘಟಿಗಳೇ ಮಣ್ಣು ಮುಕ್ಕಿದ್ದಾರೆ. ಅದೇ ರೀತಿ ಸಿಟ್ಟಿನಲ್ಲಿ ಯೋಚಿಸುವ ಬದಲು ಸ್ವಲ್ಪ ಸಹನೆಯಿಂದ ಯೋಚಿಸಿದ್ದರೆ ಬಹುಶಃ ಪರೀಕ್ಷಿತ ಮಹಾರಾಜನಿಗೆ ಅಂತಹಾ ಸ್ಥಿತಿ ಬರುತ್ತಿರಲಿಲ್ಲ. ಆದರೆ ವಿಧಿಯಲ್ಲಿ ಹಾಗೆ ಆಗಲೇಬೇಕೆಂದು ಬರೆದಿದ್ದರೆ ತಡೆಯುವವರಾದರೂ ಯಾರು? ಪರೀಕ್ಷಿತ ಮಹಾರಾಜ ಮಧ್ಯಮ ಪಾಂಡವನಾದ ಅರ್ಜುನನ ಮೊಮ್ಮಗ. ಧರ್ಮಭೀರುವಾಗಿದ್ದ ಆತ ನ್ಯಾಯಮಾರ್ಗದಿಂದ ಪ್ರಜಾಪಾಲನೆ ಮಾಡುತ್ತಿದ್ದ. ಆತನ ಕಾಲದಲ್ಲಿ ರಾಜ್ಯವು ಸುಭಿಕ್ಷವಾಗಿತ್ತು. ಪ್ರಜೆಗಳು ಆನಂದದಿಂದ ಇದ್ದರು. ಅಷ್ಟೇ ಆಗಿದ್ದರೆ ಚಂದವಿತ್ತು. ಆದರೆ ಜೀವನದಲ್ಲಿ ಅಡೆತಡೆ ಅನ್ನುವುದೇ ಇರದಿದ್ದರೆ ನಮಗೆ ಗೊತ್ತಿಲ್ಲದೆಯೇ ಒಂದು ರೀತಿಯ ದುರಹಂಕಾರ ಬೆಳೆದು ಬಿಡುತ್ತದಂತೆ. ಒಮ್ಮೆ ಹೀಗಾಯಿತು. ಪರೀಕ್ಷಿತ ಮಹಾರಾಜ ಕಾಡಿನಲ್ಲಿ ಬೇಟೆಯಾಡುತ್ತಾ ಒಂದು ಜಿಂಕೆಯ ಬೆನ್ನಟ್ಟುತ್ತಾನೆ. ಜಿಂಕೆ ಜಿಗಿಯುತ್ತಾ ಕುಣಿಯುತ್ತಾ ಕಾಡಿನ ಒಳಭಾಗದಲ್ಲಿದ್ದ ಒಂದು ಆಶ್ರಮದೊಳಗೆ ಸಾಗಿ ಮರೆಯಾಗುತ್ತದೆ. ಹಿಂದೆಯೇ ಪರೀಕ್ಷಿತನೂ ಆಶ್ರಮದ ಒಳ ಪ್ರವೇಶಿಸುತ್ತಾನೆ. ಅಲ್ಲಿ ಶಮೀಕ ಮಹರ್ಷಿಗಳು ಧ್ಯಾನದಲ್ಲಿರುತ್ತಾರೆ. ಅವರ ಧ್ಯಾನವೆಂದರೆ ಬ್ರಹ್ಮದಂತೆ....