Posts

ಸೈರಂಧ್ರಿ ಎಂಬ ಅಗ್ನಿಕನ್ಯೆ

  ಅವನು ಅವಳನ್ನು ನೋಡಿಯೂ ಸಹ ಇರಲಿಲ್ಲ. ಸೈರಂದ್ರಿಯನ್ನು ದಿಟ್ಟಿಸಿ ನೋಡುವುದಿರಲಿ, ಕಡೆಗಣ್ಣಿನಿಂದ ನೋಡುವುದಕ್ಕೂ ಅವರು ಅರ್ಹರೆಂದು ಕೀಚಕ ಭಾವಿಸಿರಲಿಲ್ಲ.  ವಿರಾಟನ ಅರಮನೆಯಲ್ಲಿ ಬೇಕಾದಷ್ಟು ಜನ ಸೈರಂದ್ರಿಯರಿದ್ದರು. ಎಲ್ಲರೂ ಇದ್ಧದ್ದು ಒಂದೇ ರೀತಿಯಲ್ಲಿ... ಪೋಷಣೆಯಿಲ್ಲದೇ ಸೊರಗಿದ ದೇಹ, ಕಾಂತಿಯಿಲ್ಲದ ನಿಸ್ತೇಜ ಕಣ್ಣುಗಳು, ಚುರುಕುತನವಿಲ್ಲದ ನಡಿಗೆ... ಪಾಪ.. ಅವರು ತಾನೇ ಹೇಗೆ ಖುಷಿಯಾಗಿರುತ್ತಾರೆ? ಬುದ್ಧಿ ಬಂದಾಗಿನಿಂದಲೂ ಅವರು ಈ ಅರಮನೆಯಲ್ಲಿ ಬಂಧಿಗಳಾಗಿದ್ದಾರೆ. ಮಹಾರಾಣಿ ಸುದೇಷ್ಣೆಯು ವಿರಾಟನನ್ನು ಮದುವೆಯಾಗಿ ಈ ಅರಮನೆಗೆ ಕಾಲಿಟ್ಟಾಗ ಅವಳೊಡನೆ ಬಂದ ಸಖಿಯರ ಪಡೆ ಇದು. ಮಹಾರಾಣಿಯ ಸೇವೆಯೊಂದೇ ಅವರ ಜೀವನದ ಪರಮಗುರಿ. ಆದರೆ ಇಂತಹ ನಡೆದಾಡುವ ಶವಗಳಂತಿರುವ ಸೈರಂದ್ರಿಯರು ತನ್ನಕ್ಕನನ್ನು ಮಾತ್ರ ಪ್ರತಿನಿತ್ಯವೂ ಮದುಮಗಳ ಹಾಗೆ ಅದು ಹೇಗೆ ಸಿಂಗರಿಸುತ್ತಾರೋ ಎಂದು ಸೋಜಿಗಗೊಳ್ಳುತ್ತಿದ್ದ ಕೀಚಕ. ಹಾಗೆಯೇ ಅಕ್ಕನಿಗೆ ಅಲಂಕಾರ ಮಾಡಿದ ಹಾಗೆ ತಾವು ಯಾಕೆ ಮಾಡಿಕೊಳ್ಳುವುದಿಲ್ಲವೋ ಅಂತಲೂ ಅಂದುಕೊಳ್ಳುತ್ತಿದ್ದ. ಅನಾಸಕ್ತಿಯೋ.. ಮತ್ತೊಂದೋ..? ಅಥವಾ ಇವರೆಲ್ಲಾ ಸಿಂಗರಿಸಿಕೊಂಡುಬಿಟ್ಟರೆ ತನಗಿಂತಲೂ ಚಂದ ಕಂಡು ಬಿಡುತ್ತಾರೆ ಅಂತ ಅಕ್ಕನಿಗೂ ಹೊಟ್ಟೆಕಿಚ್ಚೋ ಏನೋ? ಒಟ್ಟಿನಲ್ಲಿ ಸುದೇಷ್ಣೆಯ ಅಂತಃಪುರದಲ್ಲಿ ಇರುವಷ್ಟು ಹೊತ್ತು ಅವನು ತನ್ನ ಮತ್ತು ಅಕ್ಕನ ಉಪಸ್ಥಿತಿ‌ ಬಿಟ್ಟರೆ ಬೇರೆ ಯಾರನ್ನೂ ಪರಿಗಣಿಸುತ್ತಲೂ ಇರಲಿಲ್ಲ. ...

ಶೂರ್ಪನಖಿ

Image
    ರಾಮಾಯಣದ ಎಲ್ಲಾ ಘಟನೆಗಳಿಗೂ ಮೂ ಲ  ಕಾರಣರಾದವರು ಇಬ್ಬರು. ಒಬ್ಬಳು ರಾಮನನ್ನು ಕಾಡಿಗಟ್ಟಿದ ಕೈಕೇಯಿಯಾದರೆ ಮತ್ತೊಬ್ಬಳು ಸೀತೆಯ   ಅಪಹರಣಕ್ಕೆ ಕಾರಣಳಾದ ಶೂರ್ಪನಖಿ.  ಶೂರ್ಪನಖಿ ಲಂಕಾಧಿಪತಿ ರಾವಣನ ತಂಗಿ.   ರಾಮಾಯಣದ ಅನುಸಾರ ಶೂರ್ಪನಖಿಗೆ ಮದುವೆಯಾಗಿರುತ್ತದೆ. ಆದರೆ ಅವಳ ಗಂಡನನ್ನು ರಾವಣನೇ ಕೊಲ್ಲಿಸಿರುತ್ತಾನೆ. ಹಾಗಾಗಿ ಅಣ್ಣನ ಮೇಲಿನ ಕೋಪದಿಂದ ದಂಡಕಾರಣ್ಯದಲ್ಲಿ ತಿರುಗುತ್ತಿರುತ್ತಾಳೆ. ಹೀಗೆ ಅರಣ್ಯದಲ್ಲಿ ತಿರುಗಾಡುತ್ತಿದ್ದಾಗ ಪಂಚವಟಿಯಲ್ಲಿ ಕಂಡ ರಾಮನಿಗೆ ಮನಸೋಲುತ್ತಾಳೆ ಶೂರ್ಪನಖಿ. ಆದರೆ ತನ್ನ ಮನದಾಸೆಯನ್ನು ರಾಮನಲ್ಲಿ ಹೇಳಿ. ನಂತರ ಆ ಬಯಕೆಯು ಕೈಗೂಡದೆ ತನ್ನ ಕಿವಿ-ಮೂಗು ಕಳೆದುಕೊಳ್ಳುತ್ತಾಳೆ.  ಆದ ಅಪಮಾನ ತಾಳಲಾಗದೇ ಈ ಬಗ್ಗೆ ತನ್ನ ಅಣ್ಣ ಖರಾಸುರನಿಗೆ ದೂರು ಕೊಡುತ್ತಾಳೆ. ಖರಾಸುರನು ರಾಮನೊಂದಿಗೆ ಯುದ್ಧ ಮಾಡಿ ಮಡಿಯುತ್ತಾನೆ. ನಂತರ ಶೂರ್ಪನಖಿಯು ಲಂಕೆಯಲ್ಲಿರುವ ತನ್ನ ಅಣ್ಣ ರಾವಣನಲ್ಲಿಗೆ ದೂರು ಕೊಡಲು ಹೋದವಳು, ಸೀತೆಯ ಗುಣ ಮತ್ತು ಸೌಂದರ್ಯವನ್ನು ಉತ್ಪ್ರೇಕ್ಷೆ ಮಾಡಿ ಹೇಳಿ ರಾವಣನು ಸೀತೆಯನ್ನು ಅಪಹರಿಸುವಂತೆ ಮಾಡುತ್ತಾಳೆ. ಇದು ಮುಂದೆ ರಾಮ-ರಾವಣರ ಯುದ್ಧದಲ್ಲಿ ಕೊನೆಯಾಗುತ್ತದೆ. ಕಾಡಿನಲ್ಲಿ ತಿರುಗಾಡುತ್ತಿದ್ದಾಗ ಶೂರ್ಪನಖಿ ರಾಮನನ್ನು ಕಂಡು ಇಷ್ಟ ಪಟ್ಟದ್ದು ತಪ್ಪಲ್ಲ. ಹೆಣ್ಣು-ಗಂಡುಗಳು ಭಿನ್ನಲಿಂಗಿಗಳನ್ನು ನೋಡುತ್ತಿದ್ದಂತೆಯೇ ಆಕರ್ಷಣೆಗೆ ಒಳಗಾಗುವುದು ಸಹಜ....

ದೇವಭೂಮಿ ಉತ್ತರ ಕುರು

Image
" ಕುರು " ಎಂಬುದು ವೇದಗಳ ಕಾಲದಲ್ಲಿ ಹಿಮಾಲಯದ ಉತ್ತರ ಭಾಗದಲ್ಲಿದ್ದ ಒಂದು ಜನಾಂಗವಾಗಿತ್ತು ಅಂತ ಹೇಳಿದರೆ ಸಾಕು, ಈ ಲೇಖನ ಒಂದೇ ವಾಕ್ಯಕ್ಕೆ ಮುಕ್ತಾಯವಾಗುತ್ತದೆ. ಆದರೆ ಅದಷ್ಟೇ ಅಲ್ಲ... ಉತ್ತರ ಕುರು ಎನ್ನುವುದಕ್ಕೆ ಬೇರೆ ಬೇರೆ ಅರ್ಥಗಳಿವೆ. ಉತ್ತರಕುರು ಎಂದರೆ ದೇವಭೂಮಿ ಎಂದೇ ಕರೆಯಲಾಗುತ್ತದೆ.   ಅಲ್ಲಿ ಯಕ್ಷಯಕ್ಷಿಯರೇ ವಾಸ ಮಾಡುತ್ತಾರೆ ಅಂತ ಹೇಳಲಾಗುತ್ತದೆ. ಪುರಾಣಗಳು ಒಮ್ಮೊಮ್ಮೆ ಅಲ್ಲಿ ಮಹಿಮೆಯುಳ್ಳ ಜನರು ವಾಸಿಸುತ್ತಿದ್ದರು ಅಂತಲೂ ಹೇಳಿದರೆ, ಮತ್ತೊಮ್ಮೆ ನಮ್ಮಂಥಾ ಮನುಷ್ಯರೇ ವಾಸಿಸುತ್ತಿದ್ದರು ಅಂತ ಹೇಳಿದೆ. ಏನೇ ಆದರೂ ಉತ್ತರಕುರು ಒಂದು ದೈವೀ ಕ್ಷೇತ್ರ ಎಂದು ನಂಬುವವರೇ ಹೆಚ್ಚು. ಮಹಾಭಾರತ ಉತ್ತರಕುರುವನ್ನು ' ಗಂಧರ್ವ ಭೂಮಿ ' ಎಂದೇ ಬಣ್ಣಿಸಿದೆ. ಬ್ರಹ್ಮಾಂಡ ಪುರಾಣದ ಪ್ರಕಾರ ಉತ್ತರಕುರುವಿನಲ್ಲಿ ಕುರುವಂಶದ ಮೂಲ ಪುರುಷನಾದ ಪುರೂರವ ಊರ್ವಶಿಯಿಂದಿಗೆ ವಾಸವಿದ್ದ. ಊರ್ವಶಿ ಮಾನವಳಲ್ಲ ಕಾರಣಕ್ಕೆ ಮತ್ತು ಅವಳೊಡನೆ ಪುರೂರವ ಉತ್ತರಕುರುವಿನಲ್ಲಿ ಇದ್ದ ಕಾರಣದಿಂದ, ಅಪ್ಸರೆ ಇದ್ದ ನಾಡನ್ನು ' ಯಕ್ಷಿಯರ ನಾಡು ' ಎಂದು ಕರೆದಿರಬಹುದು ಅಂತ ಊಹಿಸಬಹುದು.   ಯುದ್ಧದಲ್ಲಿ ಸತ್ತ ಮೇಲೆ ಯೋಧರು ಸ್ವರ್ಗಕ್ಕೆ ಹೋಗುತ್ತಾರೆ ಎಂಬ ಮಾತಿದೆ. ಇಲ್ಲಿ ಸ್ವರ್ಗ ಎಂದರೆ ಉತ್ತರಕುರುವಿಗೇ ಹೋಗುತ್ತಾರೆ ಅಂತ ಹೇಳಲಾಗುತ್ತಿತ್ತು. ಹಾಗನ್ನಿಸಲು ಕಾರಣವೇನೆಂದರೆ, ಸ್ವರ್ಗವು ಹಿಮಾಲಯದಿಂದ ಮೇಲೆ ಹತ್ತಿ ಹೋದ...

ಧರ್ಮಯುದ್ಧವೂ ಧರ್ಮರಾಯನೂ

Image
  ಪರಿಸ್ಥಿತಿ ಮನುಷ್ಯನನ್ನು ಹೇಗೆಲ್ಲಾ ಬದಲಾಯಿಸುತ್ತದೆ . ನಾವು ಹೇಳಿರುವ ಮಾತನ್ನು ನಾವೇ ಮರೆಯುವ ಹಾಗೆ ಮಾಡುತ್ತದೆ. ಇನ್ನೊಬ್ಬರನ್ನು ಸಮಾಧಾನಿಸಲು ನಾವು ಹೇಳಿದ ಮಾತನ್ನು ನಮಗೆ ಅವರೇ ತಿರುಗಿಸಿ ಹೇಳುವ ಹಾಗೆ ಮಾಡುತ್ತದೆ . ಧರ್ಮರಾಯನಂಥಾ ಧರ್ಮರಾಯನಿಗೇ ಧರ್ಮ ಸಂಕಟ ಒದಗುವ ಹಾಗೆ ಮಾಡುತ್ತದೆ . ಪ್ರಸಂಗ ಹೀಗಿದೆ: ಕುರುಕ್ಷೇತ್ರ ಯುದ್ಧ ನಡೆಯುತ್ತಿದೆ . ಭೀಮಸೇನ ಒಂದೊಂದು ದಿನ ಯುದ್ಧ ಮುಗಿದಾಗಲೂ ತಾನು ಇಂದು ಇಷ್ಟು ಕೌರವರನ್ನು ಕೊಂದೆ , ಇಷ್ಟು ಜನರನ್ನು ಮುಗಿಸಿದೆ , ಇಷ್ಟು ಕೌರವ ಕುಮಾರರು ಮಾತ್ರ ಬದುಕಿದ್ದಾರೆ ಎಂದು ಎದೆಯುಬ್ಬಿಸಿ ಹೇಳುತ್ತಿರುತ್ತಾನೆ .  ಇದನ್ನು ಕಂಡ ಧರ್ಮರಾಯ ಹಾಗೆಲ್ಲಾ ಯುದ್ಧವನ್ನು ವೈಯುಕ್ತಿಕವಾಗಿ ನೋಡಬಾರದು , ಏಕೆಂದರೆ ಈ ಯುದ್ಧ ನಡೆಯುತ್ತಿರುವುದು ನ್ಯಾಯ , ಧರ್ಮ , ಸತ್ಯದ ಪುನರ್ ಪ್ರತಿಷ್ಠಾಪನೆಗಾಗಿ ಮಾತ್ರ , ಆ ದೃಷ್ಟಿಯಿಂದ ಯುದ್ಧ ಮಾಡು ಎಂದು ತಿಳಿ ಹೇಳುತ್ತಾನೆ . ಭೀಮ ಒಲ್ಲದ ಮನಸ್ಸಿನಿಂದಲೇ ಅಣ್ಣನಿಗೆ ಪ್ರತಿಮಾತನಾಡದೇ ಸುಮ್ಮನಾಗುತ್ತಾನೆ . ಮುಂದೆ ಕುರುಕ್ಷೇತ್ರ ಯುದ್ಧ ಮುಗಿದು ಕುರುವಂಶದವರೆಲ್ಲಾ ನಾಶವಾದ ಮೇಲೆ ಸತ್ತವರಿಗೆಲ್ಲಾ ತರ್ಪಣ ಕೊಡುವಾಗ ತಾಯಿ ಕುಂತಿಯಿಂದ ಕರ್ಣನೇ ಪಾಂಡವರಲ್ಲಿ ಮೊದಲನೆಯವನು ಎಂದು ತಿಳಿದು ಬರುತ್ತದೆ . ಆಗ ಧರ್ಮಜನಲ್ಲಿ ಕಳವಳ ಶುರುವಾಗ...