Posts

ದೇವಭೂಮಿ ಉತ್ತರ ಕುರು

Image
" ಕುರು " ಎಂಬುದು ವೇದಗಳ ಕಾಲದಲ್ಲಿ ಹಿಮಾಲಯದ ಉತ್ತರ ಭಾಗದಲ್ಲಿದ್ದ ಒಂದು ಜನಾಂಗವಾಗಿತ್ತು ಅಂತ ಹೇಳಿದರೆ ಸಾಕು, ಈ ಲೇಖನ ಒಂದೇ ವಾಕ್ಯಕ್ಕೆ ಮುಕ್ತಾಯವಾಗುತ್ತದೆ. ಆದರೆ ಅದಷ್ಟೇ ಅಲ್ಲ... ಉತ್ತರ ಕುರು ಎನ್ನುವುದಕ್ಕೆ ಬೇರೆ ಬೇರೆ ಅರ್ಥಗಳಿವೆ. ಉತ್ತರಕುರು ಎಂದರೆ ದೇವಭೂಮಿ ಎಂದೇ ಕರೆಯಲಾಗುತ್ತದೆ.   ಅಲ್ಲಿ ಯಕ್ಷಯಕ್ಷಿಯರೇ ವಾಸ ಮಾಡುತ್ತಾರೆ ಅಂತ ಹೇಳಲಾಗುತ್ತದೆ. ಪುರಾಣಗಳು ಒಮ್ಮೊಮ್ಮೆ ಅಲ್ಲಿ ಮಹಿಮೆಯುಳ್ಳ ಜನರು ವಾಸಿಸುತ್ತಿದ್ದರು ಅಂತಲೂ ಹೇಳಿದರೆ, ಮತ್ತೊಮ್ಮೆ ನಮ್ಮಂಥಾ ಮನುಷ್ಯರೇ ವಾಸಿಸುತ್ತಿದ್ದರು ಅಂತ ಹೇಳಿದೆ. ಏನೇ ಆದರೂ ಉತ್ತರಕುರು ಒಂದು ದೈವೀ ಕ್ಷೇತ್ರ ಎಂದು ನಂಬುವವರೇ ಹೆಚ್ಚು. ಮಹಾಭಾರತ ಉತ್ತರಕುರುವನ್ನು ' ಗಂಧರ್ವ ಭೂಮಿ ' ಎಂದೇ ಬಣ್ಣಿಸಿದೆ. ಬ್ರಹ್ಮಾಂಡ ಪುರಾಣದ ಪ್ರಕಾರ ಉತ್ತರಕುರುವಿನಲ್ಲಿ ಕುರುವಂಶದ ಮೂಲ ಪುರುಷನಾದ ಪುರೂರವ ಊರ್ವಶಿಯಿಂದಿಗೆ ವಾಸವಿದ್ದ. ಊರ್ವಶಿ ಮಾನವಳಲ್ಲ ಕಾರಣಕ್ಕೆ ಮತ್ತು ಅವಳೊಡನೆ ಪುರೂರವ ಉತ್ತರಕುರುವಿನಲ್ಲಿ ಇದ್ದ ಕಾರಣದಿಂದ, ಅಪ್ಸರೆ ಇದ್ದ ನಾಡನ್ನು ' ಯಕ್ಷಿಯರ ನಾಡು ' ಎಂದು ಕರೆದಿರಬಹುದು ಅಂತ ಊಹಿಸಬಹುದು.   ಯುದ್ಧದಲ್ಲಿ ಸತ್ತ ಮೇಲೆ ಯೋಧರು ಸ್ವರ್ಗಕ್ಕೆ ಹೋಗುತ್ತಾರೆ ಎಂಬ ಮಾತಿದೆ. ಇಲ್ಲಿ ಸ್ವರ್ಗ ಎಂದರೆ ಉತ್ತರಕುರುವಿಗೇ ಹೋಗುತ್ತಾರೆ ಅಂತ ಹೇಳಲಾಗುತ್ತಿತ್ತು. ಹಾಗನ್ನಿಸಲು ಕಾರಣವೇನೆಂದರೆ, ಸ್ವರ್ಗವು ಹಿಮಾಲಯದಿಂದ ಮೇಲೆ ಹತ್ತಿ ಹೋದ...

ಧರ್ಮಯುದ್ಧವೂ ಧರ್ಮರಾಯನೂ

Image
  ಪರಿಸ್ಥಿತಿ ಮನುಷ್ಯನನ್ನು ಹೇಗೆಲ್ಲಾ ಬದಲಾಯಿಸುತ್ತದೆ . ನಾವು ಹೇಳಿರುವ ಮಾತನ್ನು ನಾವೇ ಮರೆಯುವ ಹಾಗೆ ಮಾಡುತ್ತದೆ. ಇನ್ನೊಬ್ಬರನ್ನು ಸಮಾಧಾನಿಸಲು ನಾವು ಹೇಳಿದ ಮಾತನ್ನು ನಮಗೆ ಅವರೇ ತಿರುಗಿಸಿ ಹೇಳುವ ಹಾಗೆ ಮಾಡುತ್ತದೆ . ಧರ್ಮರಾಯನಂಥಾ ಧರ್ಮರಾಯನಿಗೇ ಧರ್ಮ ಸಂಕಟ ಒದಗುವ ಹಾಗೆ ಮಾಡುತ್ತದೆ . ಪ್ರಸಂಗ ಹೀಗಿದೆ: ಕುರುಕ್ಷೇತ್ರ ಯುದ್ಧ ನಡೆಯುತ್ತಿದೆ . ಭೀಮಸೇನ ಒಂದೊಂದು ದಿನ ಯುದ್ಧ ಮುಗಿದಾಗಲೂ ತಾನು ಇಂದು ಇಷ್ಟು ಕೌರವರನ್ನು ಕೊಂದೆ , ಇಷ್ಟು ಜನರನ್ನು ಮುಗಿಸಿದೆ , ಇಷ್ಟು ಕೌರವ ಕುಮಾರರು ಮಾತ್ರ ಬದುಕಿದ್ದಾರೆ ಎಂದು ಎದೆಯುಬ್ಬಿಸಿ ಹೇಳುತ್ತಿರುತ್ತಾನೆ .  ಇದನ್ನು ಕಂಡ ಧರ್ಮರಾಯ ಹಾಗೆಲ್ಲಾ ಯುದ್ಧವನ್ನು ವೈಯುಕ್ತಿಕವಾಗಿ ನೋಡಬಾರದು , ಏಕೆಂದರೆ ಈ ಯುದ್ಧ ನಡೆಯುತ್ತಿರುವುದು ನ್ಯಾಯ , ಧರ್ಮ , ಸತ್ಯದ ಪುನರ್ ಪ್ರತಿಷ್ಠಾಪನೆಗಾಗಿ ಮಾತ್ರ , ಆ ದೃಷ್ಟಿಯಿಂದ ಯುದ್ಧ ಮಾಡು ಎಂದು ತಿಳಿ ಹೇಳುತ್ತಾನೆ . ಭೀಮ ಒಲ್ಲದ ಮನಸ್ಸಿನಿಂದಲೇ ಅಣ್ಣನಿಗೆ ಪ್ರತಿಮಾತನಾಡದೇ ಸುಮ್ಮನಾಗುತ್ತಾನೆ . ಮುಂದೆ ಕುರುಕ್ಷೇತ್ರ ಯುದ್ಧ ಮುಗಿದು ಕುರುವಂಶದವರೆಲ್ಲಾ ನಾಶವಾದ ಮೇಲೆ ಸತ್ತವರಿಗೆಲ್ಲಾ ತರ್ಪಣ ಕೊಡುವಾಗ ತಾಯಿ ಕುಂತಿಯಿಂದ ಕರ್ಣನೇ ಪಾಂಡವರಲ್ಲಿ ಮೊದಲನೆಯವನು ಎಂದು ತಿಳಿದು ಬರುತ್ತದೆ . ಆಗ ಧರ್ಮಜನಲ್ಲಿ ಕಳವಳ ಶುರುವಾಗ...

ನಳ ದಮಯಂತಿ

Image
  "ಪ್ರೇಮವೆಂದರೆ ಹಾಗೆ.. ಅದು ಇರುವುದೇ ಹೀಗೆ" ಪ್ರೇಮ ಕಣ್ಣಿನಿಂದ ಹುಟ್ಟುತ್ತದೆ ಎನ್ನುತ್ತಾರೆ. ಆದರೆ ಪ್ರೇಮ‌ ನಿಜಕ್ಕೂ ಹುಟ್ಟುವುದು ಹೃದಯದಿಂದ. ನಾವು ನೋಡಿಯೂ ಇರದ ವ್ಯಕ್ತಿಯ ಬಗ್ಗೆ ನಮಗೆ ನಮ್ಮ ಅಂತರಾಳದಲ್ಲೊಂದು ಒಲವು ಮೂಡುತ್ತದೆ. ಕಣ್ಣು ಕಾಣದಿದ್ದರೂ ಆ ಒಲವನ್ನು ಮನಸ್ಸು ಅರಿಯುತ್ತದೆ.  ದೈವಬಲದಿಂದ ಆ ವ್ಯಕ್ತಿ ಎದುರಾಗಿ ಜೀವನಸಂಗಾತಿಯೂ ಆಗುತ್ತಾರೆ. ಆದರೆ ಹಾಗೆ ಆಗುವ ಮೊದಲು ಎಷ್ಟೆಲ್ಲಾ ಕಠಿಣ ಪರೀಕ್ಷೆಗಳು ಎದುರಾಗುತ್ತವೆ. ಈ ಎಲ್ಲವನ್ನೂ ಯಶಸ್ವಿಯಾಗಿ ಗೆದ್ದವರು ನಿಜವಾದ ಪ್ರೇಮಿಗಳು ಎನ್ನಿಸಿಕೊಳ್ಳುತ್ತಾರೆ. ಮುಖ ನೋಡಿ ಹುಟ್ಟುವ ಪ್ರೀತಿಗಿಂತಲೂ ಮನಸ್ಸನ್ನು ಅರಿತ ಪ್ರೀತಿಯೇ ಶ್ರೇಷ್ಠ ಅಂತ ಇದರಿಂದ ಗೊತ್ತಾಗುತ್ತದೆ. ವಿದರ್ಭ ರಾಜ್ಯದ ರಾಜಕುಮಾರಿಯಾದ ದಮಯಂತಿಗೆ ಅವಳ ಜೀವನದಲ್ಲಿ ಇಂತಹಾ ಅಗ್ನಿಪರೀಕ್ಷೆಗಳು ಎರಡು ಬಾರಿ ಬರುತ್ತವೆ. ಮೊದಲ ಬಾರಿಗೆ ಅವಳ ಸ್ವಯಂವರದ ಸಂದರ್ಭದಲ್ಲಿ ಇದು ಎದುರಾಗುತ್ತದೆ. ಆಕೆ ರಾಜಕುಮಾರ ನಳನನ್ನು ಕಣ್ಣಾರೆ ಕಾಣದಿದ್ದರೂ ಸಹ ಅವರಿವರ ಬಾಯಿಯಿಂದ ಅವನ‌ ಸಾಧನೆಗಳನ್ನು ಕೇಳಿಯೇ ಪ್ರೀತಿಸಿದ್ದಳು. ಮದುವೆಯಾದರೆ ಅವನನ್ನೇ ಎಂದುಕೊಂಡಿದ್ದಳು. ಸ್ವಯಂವರದಲ್ಲಿ ಆತನಿಗೇ ಮಾಲೆ ಹಾಕಬೇಕು ಎಂದುಕೊಂಡಿದ್ದಳು.  ಆದರೆ ಸ್ವಯಂವರದ ಸ್ಥಳದಲ್ಲಿ ಆಕೆ ಕಂಡದ್ದೇನು?  ನಳನ ರೂಪದ ಐವರು ಅವಳಿಗಾಗಿ ಕಾಯುತ್ತಿದ್ದರು. ಆಕೆ ಅಪರೂಪದ ಸೌಂದರ್ಯವತಿಯಾದುದರಿಂದ ದೇವತೆಗಳೂ ಆಕೆಯನ್ನು ಕಂಡರೆ ಮೋಹಗೊಳ...